Yuvraj SIngh : 2007ರಲ್ಲಿ ನಾನು ಕ್ಯಾಪ್ಟನ್ ಆಗ್ಬೇಕಿತ್ತು : ಯುವಿ ಬಿಚ್ಚಿಟ್ಟ ಅಸಲಿ ಸತ್ಯ
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ.
ಟೀಂ ಇಂಡಿಯಾದ ಯುವರಾಜನಾಗಿ ಎರಡೆರಡು ವಿಶ್ವಕಪ್ ಗಳನ್ನು ಗೆದ್ದುಕೊಟ್ಟಿದ್ದ ಯುವಿ ಯಾವಾಗಲೂ ಟೀಂ ಇಂಡಿಯಾದ ನಾಯಕರಾಗಲೇ ಇಲ್ಲ.
ಮಧ್ಯದಲ್ಲಿ ಕೆಲವು ದಿನ ತಂಡದ ಉಪನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೆಲವರಿಗೆ ಗೊತ್ತಿಲ್ಲದಿರುವ ವಿಚಾರ ಏನಂದರೇ 2007ರ ಟಿ 20 ವಿಶ್ವಕಪ್ ಗೆ ಯುವರಾಜ್ ಸಿಂಗ್ ನಾಯಕರಾಗಬೇಕಿತ್ತು.
ಟೂರ್ನಿ ಯಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಯುವರಾಜ್ ಸಿಂಗ್ ನಾಯಕತ್ವದ ಬಗ್ಗೆ ಚರ್ಚೆ ಆಗುತ್ತಲೇ ಇತ್ತು.
ಇದೀಗ ಆ ವಿಚಾರವಾಗಿ ಸ್ವತಃ ಯುವರಾಜ್ ಸಿಂಗ್ ಅವರೇ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದಾರೆ.
ನಾಯಕನಾಗುವ ಅವಕಾಶ ಸಿಗದಿರುವ ಬಗ್ಗೆ ಇತ್ತೀಚೆಗಷ್ಟೇ ಇಂಟರೆಸ್ಟಿಂಗ್ ಕಾಮೆಂಟ್ ಮಾಡಿರುವ ಯುವಿ, ಕೆಲವರು ನನ್ನ ವಿರುದ್ಧ ಸೇಡು ಹೊಂದಿದ್ದರು, ಹೀಗಾಗಿ ಟೀಂ ಇಂಡಿಯಾ ನಾಯಕನಾಗಲು ಸಾಧ್ಯವಾಗಲಿಲ್ಲ ಎಂದು ಯುವರಾಜ್ ಹೇಳಿದ್ದಾರೆ.
ಗ್ರೆಗ್ ಚಾಪೆಲ್ ನಿಂದಾಗಿ ನಾನು ಟೀಂ ಇಂಡಿಯಾ ಕ್ಯಾಪ್ಟನ್ಸಿಯಿಂದ ದೂರವಾಗಬೇಕಾಯ್ತು. ಚಾಪೆಲ್ 2005 ಮತ್ತು 2007 ರ ನಡುವೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿದ್ದರು.
ಅವರು ತೆಗೆದುಕೊಂಡ ಕೆಲವು ನಿರ್ಧಾರಗಳು ಅದಾಗಲೇ ಸಚಿನ್, ಸೌರವ್ ಎಂತವರಲ್ಲಿ ಅಸಮಾಧಾನ ಮೂಡಿಸಿದ್ದವು.
ವಿಶೇಷವಾಗಿ 2007ರ ವಿಶ್ವಕಪ್‌ಗೆ ಮುನ್ನ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಿದ್ದು ತಂಡದ ಸಮತೋಲನವನ್ನು ಕೆಡಿಸಿತು.
2007ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ವೈಫಲ್ಯದ ಹಿಂದೆ ಚಾಪೆಲ್ ಪಾತ್ರವಿದೆ ಎಂದು ಸಚಿನ್ ತೆಂಡೂಲ್ಕರ್ ಅವರ ಬಿಲಿಯನ್ ಡ್ರೀಮ್ಸ್ ಹೇಳುತ್ತದೆ. ಅದೇ ಚಾಪೆಲ್ ನಡೆ ನನ್ನನ್ನು ನಾಯಕತ್ವದಿಂದ ದೂರವಿಟ್ಟಿತ್ತು.
2007ರ ಇಂಗ್ಲೆಂಡ್ ಪ್ರವಾಸಕ್ಕೆ ಸೆಹ್ವಾಗ್ ಅಲಭ್ಯರಾಗಿದ್ದರು. ಇದರೊಂದಿಗೆ ದ್ರಾವಿಡ್ ನಾಯಕನಾದರು.. ನಾನು ಉಪನಾಯಕ.
ಅದಾದ ನಂತರ ತಂಡದಲ್ಲಿನ ಹಿರಿಯರು ಹಾಗೂ ಚಾಪೆಲ್ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾದವು. ನಾನು ನಮ್ಮ ತಂಡವನ್ನು ಬೆಂಬಲಿಸಿದ್ದು ಬಿಸಿಸಿಐನ ಕೆಲ ವರಿಷ್ಠರಿಗೆ ಇಷ್ಟವಾಗಲಿಲ್ಲ.
ಒಂದು ಹಂತದಲ್ಲಿ ಕೆಲವು ಅಧಿಕಾರಿಗಳು ನನ್ನನ್ನು ಹೊರತುಪಡಿಸಿ ಬೇರೆ ಯಾರೂ ಕ್ಯಾಪ್ಟನ್ ಆದರೂ ಪರವಾಗಿಲ್ಲ ಎಂಬಂತೆ ವರ್ತಿಸಿದ್ದರಂತೆ.
ಇದರ ಸತ್ಯಾಸತ್ಯತೆ ಗೊತ್ತಿಲ್ಲದಿದ್ದರೂ ಕೆಲವರು ನನ್ನ ವಿರುದ್ಧ ಪರೋಕ್ಷವಾಗಿ ಸೇಡು ತೀರಿಸಿಕೊಂಡರು.. ಹಾಗಾಗಿ ಕ್ಯಾಪ್ಟನ್ ಆಗಲು ಸಾಧ್ಯವಾಗಲಿಲ್ಲ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ನಾನು ನಿಜವಾಗಿ 2007ರ ಟಿ20 ವಿಶ್ವಕಪ್‌ಗೆ ನಾಯಕನಾಗಬೇಕಿತ್ತು. ಆದರೆ, ಮ್ಯಾನೇಜ್‌ಮೆಂಟ್‌ನ ಬೆಂಬಲದ ಕೊರತೆಯಿಂದಾಗಿ, ಮಹಿ ಭಾಯ್ ನಾಯಕರಾದರು ಮತ್ತು ಮೊದಲ ಬಾರಿಗೆ ಪ್ರಶಸ್ತಿ ಗೆದ್ದರು.
ಇದಕ್ಕಾಗಿ ನಾನು ಧೋನಿಯನ್ನು ದೂಷಿಸಲಾರೆ. ಮ್ಯಾನೇಜ್‌ಮೆಂಟ್‌ನ ನಿರ್ಧಾರದಂತೆ ಧೋನಿ ನಾಯಕರಾದರು. ಒಳ್ಳೆಯ ನಾಯಕ ಎಂದು ಗುರುತಿಸಿಕೊಂಡರು. ಮೂರು ಪ್ರಮುಖ ಟ್ರೋಫಿಗಳನ್ನು ಟೀಂ ಇಂಡಿಯಾಗೆ ನೀಡಿದರು.
ಅವರ ನಾಯಕತ್ವದಲ್ಲಿ ಆಡಲು ನಾನು ಅದೃಷ್ಟಶಾಲಿಯಾಗಿದ್ದೆ ಎಂದು ಧೋನಿ ಕ್ಯಾಪ್ಟನ್ಸಿಯನ್ನು ಯುವರಾಜ್ ಸಿಂಗ್ ಹೇಳಿದ್ದಾರೆ. yuvraj-singh-reveals-how-he-missed-out-india-captaincy saaksha tv