ಯಜುವೇಂದ್ರ ಚಾಹಲ್ ಬದುಕಿಗೆ ಎಂಟ್ರಿಯಾದ ಧನ ಶ್ರಿ…!
ಇಷ್ಟು ದಿನ ಟೀಮ್ ಇಂಡಿಯಾದಲ್ಲಿ ಸ್ಪಿನ್ ಮ್ಯಾಜಿಕ್ ಮಾಡುತ್ತಾ, ಸಾಮಾಜಿಕ ಜಾಲ ತಾಣದಲ್ಲಿ ಸದಾ ಬಿಝಿಯಾಗಿರುತ್ತಿದ್ದ ಯಜುವೇಂದ್ರ ಚಾಹಲ್ ಅವರು ಈಗ ಸಂಸಾರಿಯಾಗುತ್ತಿದ್ದಾರೆ. ಯಜುವೇಂದ್ರ ಚಾಹಲ್ ಅವರು ಧನ ಶ್ರೀ ವರ್ಮಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಐಪಿಎಲ್ ಟೂರ್ನಿಗೂ ಮುನ್ನವೇ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಕೂಡ ಚಾಹಲ್ ಸಾಮಾಜಿಕ ಜಾಲ ತಾಣದಲ್ಲೇ ಪ್ರಕಟಿಸಿದ್ದಾರೆ. ನಿಶ್ಚಿತಾರ್ಥದ ಫೋಟೋಗಳನ್ನು ಕೂಡ ಚಾಹಲ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಕುಟುಂಬದೊಂದಿಗೆ ಹೇಳುತ್ತೇವೆ ಹೌದು ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಧನ ಶ್ರೀ ಅವರು ಚಾಹಲ್ಗೆ ಪರಿಚಿತರೇ. ಈ ಹಿಂದೆ ಝೂಮ್ ಕಾರ್ಯಗಾರಗಳಲ್ಲೂ ಕಾಣಿಸಿಕೊಂಡಿದ್ದರು. ಯು ಟ್ಯೂಬ್ನಲ್ಲಿ ಸಕ್ರೀಯವಾಗಿರುವ ಧನ ಶ್ರೀ ಅವರು ವೈದ್ಯೆ ಹಾಗೂ ನೃತ್ಯ ಸಂಯೋಜಕರಾಗಿದ್ದಾರೆ.
ಟೀಮ್ ಇಂಡಿಯಾದ ಏಕದಿನ ಮತ್ತು ಟಿ-ಟ್ವೆಂಟಿ ಪಂದ್ಯಗಳಲ್ಲಿ ಚಾಹಲ್ ಅವರು ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ. ಮೈದಾನದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುವ ಚಾಹಲ್ ಅವರು ಸ್ನೇಹ ಜೀವಿ. ಸಾಮಾಜಿಕ ಜಾಲ ತಾಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಭಿನ್ನ ವಿಚಾರಗಳಿಂದ ಸದಾ ಸುದ್ದಿಯಲ್ಲಿರುತ್ತಿದ್ದ ಚಾಹಲ್ ಲಾಕ್ ಡೌನ್ ಟೈಮ್ ನಲ್ಲಿ ತುಂಬಾನೇ ಎಂಜಾಯ್ ಮಾಡುತ್ತಿದ್ದಾರೆ. ಕೆಲವೊಂದು ಬಾರಿ ಚಾಹಲ್ ಅವರ ವಿಡಿಯೋಗಳು ವೈರಲ್ ಕೂಡ ಆಗಿವೆ. ಇನ್ನು ಸಹ ಆಟಗಾರರಾದ ರೋಹಿತ್ ಶರ್ಮಾ ಮತ್ತು ಯುವರಾಜ್ ಸಿಂಗ್ ಅವರು ಚಾಹಲ್ ಅವರನ್ನು ಕಾಲೇಲೆದು ಟೀಕೆಗೂ ಗುರಿಯಾಗಿದ್ದರು.
ಇದೀಗ ಮದುವೆ ದಿನ ಇನ್ನೂ ನಿಗದಿಯಾಗಿಲ್ಲ. ಹೀಗಾಗಿ ಚಾಹಲ್ ಅವರು ಐಪಿಎಲ್ ಟೂರ್ನಿಯನ್ನು ಎದುರು ನೋಡುತ್ತಿದ್ದಾರೆ. ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಪರ ಆಡುವ ಚಾಹಲ್ ಇದೇ ತಿಂಗಳು ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಯುಎಇನಲ್ಲಿ ನಡೆಯಲಿದೆ.