ಮುಂಬಯಿ: 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಆವೃತ್ತಿಗೂ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್ ತಂಡವು ನೂತನ ಮೆಂಟರ್ ಆಗಿ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ನೇಮಕ ಮಾಡಿಕೊಂಡಿದೆ.
2011ರ ಏಕದಿನ ವಿಶ್ವಕಪ್ ವಿನ್ನರ್ ಹಾಗೂ ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ (Zaheer Khan) ರನ್ನ ನೇಮಕ ಮಾಡಿದೆ. 2022ರಲ್ಲಿ ಐಪಿಎಲ್ ಗೆ ಪದಾರ್ಪಣೆ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡಕ್ಕೆ ಮೊದಲ ಎರಡು ಆವೃತ್ತಿಗಳಲ್ಲಿ ಗೌತಮ್ ಗಂಭೀರ್ ಮೆಂಟರ್ (Mentor) ಆಗಿದ್ದರು.
2024ರ ಐಪಿಎಲ್ ನಲ್ಲಿ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರ್ಪಡೆಯಾದರು. ಅಂದಿನಿಂದ ಖಾಲಿ ಉಳಿದಿದ್ದ ಸ್ಥಾನಕ್ಕೆ ಈಗ ಫ್ರಾಂಚೈಸಿ ಜಹೀರ್ ಖಾನ್ ರನ್ನು ನೇಮಕ ಮಾಡಿಕೊಂಡಿದೆ.
ಈ ಕುರುತ ಲಕ್ನೋ ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಲಕ್ನೋ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಹೀರ್ ಖಾನ್‌ಗೆ ಎಲ್‌ಎಸ್‌ಜಿ ಮೆಂಟರ್ ಜರ್ಸಿ ಕೊಟ್ಟು ಸ್ವಾಗತಿಸಿದ್ದಾರೆ.