Zaheer Khan | ಒತ್ತಡದ ಸಂದರ್ಭಗಳನ್ನು ಹಾರ್ದಿಕ್ ಸವಾಲಾಗಿ ಸ್ವೀಕರಿಸುತ್ತಾರೆ
ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡೆ ಬಗ್ಗೆ ಭಾರತದ ಮಾಜಿ ವೇಗಿ ಜಹೀರ್ ಖಾನ್ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಬ್ಯಾಟಿಂಗ್ ವೇಳೆ ಒತ್ತಡವನ್ನು ಹಾರ್ದಿಕ್ ಪಾಂಡ್ಯ ಸವಾಲಾಗಿ ಸ್ವೀಕರಿಸುತ್ತಾರೆ ಎಂದು ಜಹೀರ್ ಹೊಗಳಿದ್ದಾರೆ.
ರಾಜ್ ಕೋಟ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 89 ರನ್‌ಗಳ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭದಲ್ಲಿಯೇ ವಿಕೆಟ್ ಗಳನ್ನು ಕಳೆದುಕೊಳ್ತು.
ಆದರೆ ಹಾರ್ದಿಕ್ 31 ಎಸೆತಗಳಲ್ಲಿ 46 ರನ್ ಗಳಿಸಿ ನಿರ್ಣಾಯಕ ಇನ್ನಿಂಗ್ಸ್ ಆಡಿದರು.

ದಿನೇಶ್ ಕಾರ್ತಿಕ್ ಜೊತೆಗೆ ಐದನೇ ವಿಕೆಟ್ ಗೆ 65 ರನ್ ಸೇರಿಸಿದರು.
ಹಾರ್ದಿಕ್ ಇನ್ನಿಂಗ್ಸ್ ಬಗ್ಗೆ ಜಹೀರ್ ಖಾನ್ ಮಾತನಾಡಿದ್ದು, ಹಾರ್ದಿಕ್ ಮತ್ತೊಮ್ಮೆ ತಮ್ಮನ್ನ ತಾವು ಸಾಬೀತುಪಡಿಸಿದ್ದಾರೆ.
ಅವರು ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಬೇಕೆಂದು ನಾನು ಬಯಸುತ್ತೇನೆ.
ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಗೆ ಬಂದರೆ ಹಾರ್ದಿಕ್ ಇನ್ನೂ ಉತ್ತಮ ಪ್ರದರ್ಶನ ನೀಡಲಿದ್ದಾರೆ.
ಆರಂಭದಲ್ಲಿ ವಿಕೆಟ್ ಕಳೆದುಕೊಂಡಾಗ ನಾಲ್ಕನೇ ಕ್ರಮಾಂಕದಲ್ಲಿ ಹಾರ್ದಿಕ್ ಬ್ಯಾಟಿಂಗ್ ಗೆ ಬರಬೇಕು.
ಐಪಿಎಲ್ ನಲ್ಲೂ ಆ ಸ್ಥಾನದಲ್ಲಿ ಬ್ಯಾಟಿಂಗ್ ಗೆ ಬಂದು ಮಿಂಚಿದ್ದರು.
ಒತ್ತಡದ ಸಂದರ್ಭಗಳನ್ನು ಹಾರ್ದಿಕ್ ಸವಾಲಾಗಿ ಸ್ವೀಕರಿಸುತ್ತಾರೆ. ಅದು ಅವರ ಬ್ಯಾಟಿಂಗ್ ಶೈಲಿ” ಎಂದು ಜಹೀರ್ ಖಾನ್ ಹೇಳಿದ್ದಾರೆ.








