ಭಜರಂಗಿ-2, ಕನ್ನಡಿಗ ಆಯ್ತು ಈಗ ಜೀ5 ಒಟಿಟಿ ಮತ್ತೊಂದು ಸೂಪರ್ ಹಿಟ್ ಸಿನಿಮಾ…! 2022ಕ್ಕೆ ಜೀ5 ಅಂಗಳ ಸೇರಲಿವೆ ಸೂಪರ್ ಸ್ಟಾರ್ಸ್ ಸಿನಿಮಾ!
ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೂಲಕ ಕಮಾಲ್, ಗಟ್ಟಿಮೇಳ ಮೂಲಕ ಧಾಮಾಲ್, ಜೊತೆಯಲಿ ಜೊತೆಯಲಿ ಮೂಲಕ ಸೆನ್ಸೇಷನ್ ಸೃಷ್ಟಿಸ್ತಿರುವ.. ಕಿರುತೆರೆಲೋಕದ ನಂಬರ್-1 ಮನರಂಜನಾ ಚಾನೆಲ್ ಅನ್ನೋ ಪಟ್ಟ ಮುಡಿಗೇರಿಸಿಕೊಂಡಿರುವ ಏಕೈಕ ಚಾನೆಲ್ ಜೀ ಕನ್ನಡ.. ಕಿರುತೆರೆ ಪ್ರೇಕ್ಷಕರಿಗೆ ಭಿನ್ನ-ವಿಭಿನ್ನ ಬಗೆಯ ಸೀರಿಯಲ್ ಗಳನ್ನು ಉಣ ಬಡಿಸುವ ಜೀ, ಸಿನಿಮಾ ವಿಭಾಗಕ್ಕೂ ಕೈ ಹಾಕಿರೋದು ಗೊತ್ತೇ ಇದೆ. Z5 ಎಂಬ ಒಟಿಟಿ ಫ್ಲಾಟ್ ಫಾರಂ ಮೂಲಕ ಎಲ್ಲಾ ಬಗೆಯ ಸಿನಿಮಾಗಳನ್ನು ಪ್ರೇಕ್ಷಕಕುಲಕ್ಕೆ ಅರ್ಪಿಸ್ತಿದೆ. ಅದ್ರಲ್ಲೂ ಕನ್ನಡ ಸಿನಿಮಾಗಳಿಗೆ ಜೀ5 ಹೆಚ್ಚು ಪ್ರಾಮುಖ್ಯತೆ ಕೊಡ್ತಾ ಇದೆ ಅನ್ನೋದೇ ವಿಶೇಷ..
ಭಜರಂಗಿ-2 ಆಯ್ತು ‘ಕನ್ನಡಿಗ’ನಿಗೆ ಪ್ರೇಕ್ಷಕ ಬಹುಪರಾಕ್!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್ ನ ಭಜರಂಗಿ-2 ಸಿನಿಮಾ ಜೀ5 ಒಟಿಟಿಗೆ ಎಂಟ್ರಿ ಕೊಟ್ಟಿದೆ. ಇಡೀ ಫ್ಯಾಮಿಲಿ ಕುಳಿತು ನೋಡುವ ಭಜರಂಗಿ-2ಗೆ ಜೀ5 ನಲ್ಲಿ ಭಾರೀ ಮೆಚ್ಚುಗೆ ಸಿಕ್ಕಿದೆ. ಹಾಗೇನೇ ರವಿಮಾನ ಕನ್ನಡಿಗನೂ ಪ್ರೇಕ್ಷಕ ಬಹುಪರಾಕ್ ಹಾಕಿದ್ದಾನೆ. ವಿಶೇಷ ಗೆಟಪ್ ನಲ್ಲಿ ಕ್ರೇಜಿಸ್ಟಾರ್ ಪ್ರೇಕ್ಷಕರನ್ನು ಗಮನಸೆಳೆದಿದ್ದಾರೆ. ಕನ್ನಡ ಭಾಷೆ ಲಿಪಿ ಬಗ್ಗೆ ವಿವರಿಸುವ ಕನ್ನಡಿಗ ಸಿನಿಮಾವನ್ನು ಜೀ5 ಒಟಿಟಿಯಲ್ಲಿ ನೋಡಿ ಪ್ರೇಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಜೀ-5ಗೆ ರಿಷಬ್-ರಾಜ್ ಸಿನಿಮಾ!
ಜೀ5 ಒಟಿಟಿ ಫ್ಲಾಟ್ ಫಾರಂ ದಿನದಿಂದ ದಿನಕ್ಕೆ ಮನರಂಜನೆ ಸುರಿಮಳೆ ನೀಡ್ತಾನೆ ಇದೆ. ಪ್ರೇಕ್ಷಕರಿಗೆ ಹೊಸ ಹೊಸ ಬಗೆಯ..ವಿಭಿನ್ನ ಸಿನಿಮಾಗಳನ್ನು ಅರ್ಪಿಸ್ತಿದೆ. ಈಗಾಗ್ಲೇ ಭಜರಂಗಿ-2 ಕನ್ನಡಿಗ ಹಾಗೇನೇ ಪುಕ್ಸಟ್ಟೆ ಲೈಫ್ ಹೀಗೆ ವಿಭಿನ್ನ ರೀತಿಯ ಜಾನರ್ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತಂದು ರಂಜಿಸಿರುವ ಜೀ 5 ಈಗ ಮತ್ತೊಂದು ಮನರಂಜನೆ ಕಿಕ್ ಕೊಡಲು ಸಜ್ಜಾಗಿದೆ. ಕಡಲತಡಿ ಪ್ರತಿಭೆಗಳಾದ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ಗರುಡಗಮನ ವೃಭವ ವಾಹನ ಸಿನಿಮಾವನ್ನು ಜೀ5 ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಸದ್ಯದಲ್ಲಿಯೇ ಈ ಸಿನಿಮಾ ಜೀ5 ಒಟಿಟಿ ಫ್ಲಾಟ್ ಫಾರಂನಲ್ಲಿ ಪ್ರದರ್ಶನಗೊಳ್ಳಲಿದ್ದು, ಪ್ರೇಕ್ಷಕರು ಮತ್ತೊಂದು ಮನರಂಜನೆಯ ಅಲೆಯಲ್ಲಿ ತೇಲಬಹುದು.
ಬೇರೆ ಒಟಿಟಿ ಫ್ಲಾಟ್ ಫಾರಂನಲ್ಲಿ ಕನ್ನಡ ಸಿನಿಮಾಗಳಿಗೆ ವ್ಯಾಲ್ಯೂನೇ ಇಲ್ಲ ಅನ್ನೋ ಅಪಾದನೆ ಇದೆ. ಬಟ್ ಆ ಅಪಾದನೆ ಸೆಡ್ಡು ಹೊಡೆದು ಜೀ5 ವಿಶೇಷ ಬಗೆಯ ಸಿನಿಮಾಗಳನ್ನು ಚಿತ್ರಪ್ರೇಮಿಗಳಿಗೆ ನೀಡ್ತಿದೆ. ಮನರಂಜನೆಯಲ್ಲಿ ನಂಬರ್ 1 ಬ್ರ್ಯಾಂಡ್ ಪಡೆದಿರುವ ಜೀ ಕನ್ನಡದ ಜೀ5 ಅದೇ ಹಾದಿಯಲ್ಲಿ ಸಾಗ್ತಿದ್ದು, 2022ಕ್ಕೆ ಸೂಪರ್ ಸ್ಟಾರ್ಸ್ ಸಿನಿಮಾಗಳು ಜೀ5 ಒಟಿಟಿ ಅಂಗಳ ಸೇರೋದಿಕ್ಕೆ ರೆಡಿಯಾಗಿವೆ. ಮತ್ಯಾಕೆ ತಡ ನೀವು ಜೀ5 ಆಪ್ ಡೌನ್ ಲೋಡ್ ಮಾಡ್ಕೊಂಡು ಮನೆಮಂದಿ ಕೂತು ಮನೆಯಲ್ಲಿ ಸಿನಿಮಾ ನೋಡಿ.








