ಇದೇ ಮೊದಲ ಭಾರಿಗೆ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತ..
ಫೆಬ್ರವರಿ 24 ರಂದು ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯ ನಂತರದಿಂದ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಮೊದಲ ಬಾರಿಗೆ ರಷ್ಯಾದ ವಿರುದ್ಧ ಮತ ಚಲಾಯಿಸಿದೆ. ಬುಧವಾರ ತಡರಾತ್ರಿ ನಡೆದ ಮತದಾನಕ್ಕೂ ಮುನ್ನ ಸಭೆ ನಡೆಸಲಾಯಿತು. ವಿಶ್ವಸಂಸ್ಥೆ ಸಭೆಯಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾಷಣಕ್ಕೆ ಅನುಮೋದನೆ ಪಡೆಯಬೇಕೆ ಅಥವಾ ಬೇಡವೇ ಎಂಬುದು ಸಮಸ್ಯೆಯಾಗಿತ್ತು. ಈ ಸಭೆಯ ನಂತರ ಮತದಾನ ನಡೆದಿದ್ದು, ರಷ್ಯಾ ವಿರುದ್ಧ ಭಾರತ ಮತ ಚಲಾಯಿಸಿದೆ.
15 ಸದಸ್ಯರ (5 ಖಾಯಂ ಮತ್ತು 10 ತಾತ್ಕಾಲಿಕ) ಸಮಿತಿಯ ಮುಂದೆ ಪ್ರತಿಯೊಬ್ಬರೂ ತಮ್ಮ ಕಡೆಯ ವಾದವನ್ನ ಮಂಡಿಸಲು ಅವಕಾಶ ನೀಡಬೇಕು ಎಂದು ಭಾರತ ಹೇಳಿದೆ, ಅದು ಅವರ ಹಕ್ಕು. ಭಾರತ ಅದನ್ನು ಬೆಂಬಲಿಸುತ್ತದೆ. ಈಗ ಜೆಲೆನ್ಸ್ಕಿ ಯುಎನ್ಎಸ್ಸಿಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ತನ್ನ ದೇಶದ ಬಗ್ಗೆ ಮಾತನಾಡುತ್ತಾರೆ. ಇದರ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಭಾರತ ಮೊದಲ ಬಾರಿಗೆ ಯುಎನ್ಎಸ್ಸಿಯಲ್ಲಿ ಭಾಗವಹಿಸಿದೆ
ಭಾರತವು ಯುಎನ್ಎಸ್ಸಿಯಲ್ಲಿ 2 ವರ್ಷಗಳ ಕಾಲ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿದೆ. ಈ ಅಧಿಕಾರಾವಧಿಯು ಡಿಸೆಂಬರ್ 2022 ರಲ್ಲಿ ಕೊನೆಗೊಳ್ಳುತ್ತದೆ. ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಹಲವು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿವೆ. ಮತ್ತೊಂದೆಡೆ, ಯುದ್ಧವನ್ನು ಕೊನೆಗೊಳಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರೂ ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ಭಾರತ ನೇರವಾಗಿ ಟೀಕಿಸಲಿಲ್ಲ.
ಈ ಬಾರಿ ಉಕ್ರೇನ್ ತನ್ನ 31ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡಿದೆ. ಸಭೆಯಲ್ಲಿ, ರಷ್ಯಾದ ರಾಯಭಾರಿ ಯುಎನ್ಎಸ್ಸಿ ಸಭೆಯಲ್ಲಿ ಭಾಷಣ ಮಾಡುವುದನ್ನು ನಿಲ್ಲಿಸುವಂತೆ ಜೆಲೆನ್ಸ್ಕಿಯನ್ನು ಕೇಳಿದರು. ಭಾರತ ಸೇರಿದಂತೆ 12 ದೇಶಗಳು ಇದನ್ನು ವಿರೋಧಿಸಿವೆ. ಚೀನಾ ಮತದಾನದಲ್ಲಿ ಭಾಗವಹಿಸಲಿಲ್ಲ.