ZIM vs WI 1st Test: ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದ ವಿಂಡೀಸ್ ಓಪನರ್ ಜೋಡಿ
ವೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕ್ರೈಗ್ ಬ್ರಾಥ್‌ವೈಟ್ ಹಾಗೂ ಟಾಗೆನರೈನ್ ಚಂದ್ರಪಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.
ಜಿಂಬಾಬ್ವೆ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆರೆಬಿಯನ್ ಜೋಡಿ ಎಲ್ಲಾ ಐದು ದಿನಗಳಲ್ಲೂ ಸಹ ಬ್ಯಾಟಿಂಗ್ ಮಾಡುವ ಮೂಲಕ ಈ ವಿಶೇಷ ದಾಖಲೆ ಬರೆದಿದ್ದಾರೆ. ಕ್ವೀನ್ಸ್ ಸ್ಟೋರ್ಟ್ ಓವಲ್‌ನಲ್ಲಿ ನಡೆದ ಜಿಂಬಾಬ್ವೆ ವಿರುದ್ದ ಮೊದಲ ಟೆಸ್ಟ್‌ನಲ್ಲಿ ಬ್ರಾಥ್ ವೈಟ್ ಹಾಗೂ ಚಂದ್ರಪಾಲ್, ಎಲ್ಲಾ ಐದು ದಿನಗಳು ಬ್ಯಾಟಿಂಗ್ ಮಾಡಿದ್ದಾರೆ.
ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಈ ಜೋಡಿ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಪ್ರಮುಖವಾಗಿ ಯುವ ಆಟಗಾರ ಟಾಗೆನರೈನ್ ಚಂದ್ರಪಾಲ್‌ಗೆ ಈ ಪಂದ್ಯ ಮರೆಯಲಾಗದ ಪಂದ್ಯವಾಗಿದ್ದು, ಚೊಚ್ಚಲ ಟೆಸ್ಟ್ ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಇವರಿಗೆ ಉತ್ತಮ ಸಾಥ್ ನೀಡಿದ ಬ್ರಾಥ್‌ವೈಟ್ ಸಹ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು.
ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಜಿಂಬಾಬ್ವೆ ವಿರುದ್ದ ಮೊದಲ ವಿಕೆಟ್‌ಗೆ 336 ರನ್‌ಗಳ ಅತ್ಯುತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಉತ್ತಮ ಪ್ರದರ್ಶನ ನೀಡಿದ ಟಾಗೆನರೈನ್ ಚಂದ್ರಪಾಲ್(207) ಡಬಲ್ ಸೆಂಚುರಿ ಬಾರಿಸಿ ಮಿಂಚಿದರೆ. ಬ್ರಾಥ್‌ವೈಟ್(182) ರನ್‌ಗಳಿಗೆ ತಮ್ಮ ಬ್ಯಾಟಿಂಗ್ ಮುಗಿಸಿದರು. ಇಬ್ಬರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನಡುವೆಯೂ ಉಭಯ ತಂಡಗಳ ಈ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು.