Ziva Dhoni : ಮೆಸ್ಸಿ ಸಹಿ ಮಾಡಿದ ಜೆರ್ಸಿ ಪಡೆದ ಧೋನಿ ಮಗಳು….
ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರ ಪುತ್ರಿ ಝಿವಾ ಧೋನಿಗೆ ತಮ್ಮ ಸಹಿ ಇರುವ ಜೆರ್ಸಿಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಧೋನಿ ಪತ್ನಿ ಸಾಕ್ಷಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಝಿವಾ ಧರಿಸಿರುವ ಜೆರ್ಸಿ ಫೋಟೋವನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಝಿವಾ ಧರಿಸಿರುವ ಶರ್ಟ್ ನ ಮೇಲೆ ಮೆಸ್ಸಿ ಸಹಿ ಇರುವುದನ್ನ ನೋಡಬಹುದು, ಇದಕ್ಕೆ ಸಾಕ್ಷಿ ತಂದೆಯಂತೆ ಮಗಳು ಎಂದು ಕ್ಯಾಪ್ಶನ್ ನೀಡಿದ್ದಾರೆ.
ಮೆಸ್ಸಿ ನೇತೃತ್ವದ ಅರ್ಜೆಂಟೀನಾ 2022ರ ಪುಟ್ಬಾಲ್ ವಿಶ್ವಕಪ್ ಚಾಂಪಿಯನ್ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿತ್ತು. ಫೈನಲ್ನಲ್ಲಿ ಅರ್ಜೆಂಟೀನಾ ತಂಡ ಪೆನಾಲ್ಟಿ ಶೂಟೌಟ್ನಲ್ಲಿ 4–2 ಗೋಲುಗಳಿಂದ ಫ್ರಾನ್ಸ್ ತಂಡವನ್ನ ಮಣಿಸಿತ್ತು. ಇದು ಮೆಸ್ಸಿಗೆ ಮೊದಲ ವಿಶ್ವಕಪ್ ಪ್ರಶಸ್ತಿಯಾಗಿದೆ.
ಧೋನಿ ಫುಟ್ಬಾಲ್ ಅಭಿಮಾನಿ..
ಧೋನಿ ಪುಟ್ಬಾಲ್ ಪ್ರೇಮಿ. ಯಾಕೆಂದರೇ ಧೋನಿ ಸ್ವತಃ ಫುಟ್ಬಾಲ್ ಆಟಗಾರರಾಗಿದ್ದರು. ಕ್ರಿಕೆಟ್ಗೆ ಸೇರುವ ಮೊದಲು, ಅವರ ಮೊದಲ ಪ್ರೀತಿ ಫುಟ್ಬಾಲ್ ಮೇಲಿತ್ತು. ತಮ್ಮ ಶಾಲಾ ತಂಡದ ಗೋಲ್ಕೀಪರ್ ಆಗಿದ್ದರು. ಧೋನಿ ಟೀಮ್ ಇಂಡಿಯಾಗೆ ಸೇರಿದ ಮೇಲೂ ಅಭ್ಯಾಸದ ಸಂದರ್ಭದಲ್ಲಿ ಫುಟ್ಬಾಲ್ ಆಡುತ್ತಿದ್ದರು.
Ziva Dhoni : Dhoni’s daughter got Messi signed jersey….