ನವದೆಹಲಿ : ಕಲ್ಲಿದ್ದಲು ಅಕ್ರಮ ಹಂಚಿಕೆ ಹಗರಣಕ್ಕೆ (coal scam ) ಸಂಬಂಧಿಸಿದಂತೆ ಕೇಂದ್ರದ ಮಾತಿ ಸಚಿವ ದಿಲೀಪ್ ರೇ ಅವರಿಗೆ ದೆಹಲಿ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ದಿಲೀಪ್ ರೇ ವಿರುದ್ಧದ ಕಲ್ಲಿದ್ದಲು ಅಕ್ರಮ ಹಂಚಿಕೆ ( coal scam ) ಆರೋಪ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಕಳೆದ ವಾರ ಕೋರ್ಟ್ ಇವರನ್ನು ಅಪರಾಧಿ ಎಂದು ಘೋಷಿಸಿತ್ತು.
ಆದರೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರಲಿಲ್ಲ. ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದ್ದು, ಮೂರು ವರ್ಷಶಿಕ್ಷೆ ವಿಧಿಸಲಾಗಿದೆ.
ದಿಲೀಪ್ ರೇ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗಿದ್ದರು.
ಇದನ್ನೂ ಓದಿ : ದೇಶದಲ್ಲಿ ಮೂರೂವರೆ ತಿಂಗಳ ನಂತರ ಕೊರೋನಾ ಸೋಂಕಿನ ಸಾವಿನ ಪ್ರಕರಣದಲ್ಲಿ 500 ಕ್ಕಿಂತ ಇಳಿಕೆ
1999ರಲ್ಲಿ ನಡೆದಿದ್ದ ಜಾಖರ್ಂಡ್ ಕಲ್ಲಿದ್ದಲು ಘಟಕದ ಅಕ್ರಮ ಹಂಚಿಕೆಯ ಹಗರಣದಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ಇದೀಗ ಇವರ ಮೇಲಿನ ಆರೋಪ ಸಾಬೀತಾಗಿದೆ.
ದಿಲೀಪ್ ರೇ ಜೊತೆಗೆ ಆಗ ಕಲ್ಲಿದ್ದಲು ಸಚಿವಾಲಯದ ಹಿರಿಯ ಅಧಿಕಾರಿಗಳಾಗಿದ್ದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ ಗೌತಮ್ ಹಾಗೂ ಕ್ಯಾಸ್ಟ್ರೊನ್ ಟೆಕ್ನಾಲಜೀಸ್ ಲಿಮಿಟೆಡ್‍ನ (ಸಿಟಿಎಲ್) ನಿರ್ದೇಶಕ ಮಹೇಂದ್ರ ಕುಮಾರ್ ಅಗರವಾಲ್ ಅವರಿಗೂ ತಲಾ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ತಲಾ 10 ಲಕ್ಷ ದಂಡ ಕಟ್ಟಬೇಕು ಎಂದು ವಿಶೇಷ ನ್ಯಾಯಾಧೀಶ ಭಾರತ್ ಪರಾಶರ್ ತಿಳಿಸಿದ್ದಾರೆ.
ಜೂನ್ 2021ರಲ್ಲಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವಾಕ್ಸಿನ್ ಬಿಡುಗಡೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










