ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ( Karnataka BJP ) ಇಂದೂ ಕೂಡ ಮುಗಿಬಿದ್ದಿದೆ. ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಗಳ ಮೂಲಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ಬಿಜೆಪಿ ಟ್ವೀಟ್ ನಲ್ಲಿ..
ನಿಮ್ಮ ಆಡಳಿತದಲ್ಲಿ ಪ್ರತಿ 4 ಗಂಟೆಗೆ ಒಬ್ಬ ದಲಿತನ ಮೇಲೆ ದೌರ್ಜನ್ಯ ಪ್ರತಿ 5 ದಿನಕ್ಕೆ ಒಬ್ಬ ದಲಿತನ ಕೊಲೆ ಇಷ್ಟೆಲ್ಲಾ ಆಗುತ್ತಿದ್ದರೂ, ನೀವು ಮಾತ್ರ ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಮಜವಾದಿಯಂತೆ ಕಾಲ ಕಳೆಯುತ್ತಿದ್ದಿರಿ ! ನಿಮ್ಮ ದಲಿತ ಪ್ರೇಮ ಕೇವಲ ನಾಟಕವಲ್ಲವೇ..
ನಿಮ್ಮದೇ ಪಕ್ಷದ ದಲಿತ ಶಾಸಕನ ಮನೆಗೆ ಮತಾಂಧರು ಬೆಂಕಿಯಿಟ್ಟರು. ನೀವು ಮಾಡಿದ್ದಾದರೂ ಏನು? ದಲಿತ ಶಾಸಕನನ್ನು ರಕ್ಷಿಸುವುದನ್ನು ಬಿಟ್ಟು ಗಲಭೆಯಲ್ಲಿ ಭಾಗಿಯಾದವರಿಗೆ ಅಮಾಯಕರು ಎಂದು ಸರ್ಟಿಫಿಕೇಟ್ ನೀಡಿದಿರಿ. ಮತಾಂಧರ ಮೇಲೆ ಇರುವಷ್ಟು ಪ್ರೇಮ ದಲಿತರ ಮೇಲೇಕಿಲ್ಲ ಸಿದ್ದರಾಮಯ್ಯ?.
ಇದನ್ನೂ ಓದಿ : ಬಿಹಾರ ಚುನಾವಣೆ : ಸಿ-ವೋಟರ್ ಸಮೀಕ್ಷೆ ಏನು ಹೇಳುತ್ತೆ?
2013 ರಲ್ಲಿ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರೇ ಮುಖ್ಯಮಂತ್ರಿಯಾಗಬೇಕಿತ್ತು. ಇದನ್ನು ತಿಳಿದ ನೀವು, ದಲಿತನೊಬ್ಬ ಮುಖ್ಯಮಂತ್ರಿಯಾಗಬಾರದು ಮತ್ತು ನಾನೇ ಸಿಎಂ ಆಗಬೇಕು ಎಂಬ ಕಾರಣಕ್ಕೆ ಸೋಲಿಸಿದಿರಿ. ಇದು ನ್ಯಾಯವೇ?.
ನಿಮ್ಮ ತುಘಲಕ್ ದರ್ಬಾರ್ ನಲ್ಲಿ 350 ಕ್ಕೂ ಹೆಚ್ಚು ದಲಿತರ ಕೊಲೆಗಳಾದವು. 800 ಕ್ಕೂ ಅಕ ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಯಿತು. 9000 ಕ್ಕೂ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾದವು. ದಲಿತರ ರಕ್ಷಣೆಗಿಂತ ನಿಮಗೆ ಟಿಪ್ಪು ಜಯಂತಿ ಆಚರಣೆ ಮುಖ್ಯವಾಯಿತಲ್ಲವೇ? ಮುಖ್ಯಮಂತ್ರಿಯಾಗಲು ನಿಮಗೆ ದಲಿತರು ಬೇಕಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೇರಲು ಶ್ರಮಿಸಿದ ನಿಮ್ಮದೇ ಪಕ್ಷದ ದಲಿತ ನಾಯಕ ಪರಮೇಶ್ವರರನ್ನು ರಾಜಕೀಯವಾಗಿ ಮುಗಿಸಲು ಹೊಂಚು ಹಾಕಿದಿರಿ.
ಒಮ್ಮೆ ಸೋಲಿಸಿದಿರಿ, ಮತ್ತೊಮ್ಮೆ ಉಪಮುಖ್ಯಮಂತ್ರಿ ಪಟ್ಟ ಕಸಿದುಕೊಂಡಿರಿ, ಇದೇ ದಲಿತ ಪ್ರೇಮವೇ? ಎಂದು ಸಿದ್ದರಾಮಯ್ಯ ಅವರಿಗೆ ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ಪ್ರಶ್ನೆಗಳ ಬಾಣ ಬಿಟ್ಟಿದೆ.
ಇದನ್ನೂ ಓದಿ : ಇದು ಜನಪ್ರತಿನಿಧಿಗಳ ಸರ್ಕಾರವೇ ಅಲ್ಲ : ಸಿದ್ದರಾಮಯ್ಯ ವಾಗ್ದಾಳಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel