ರೋಹಿತ್ ರೋರಿಂಗ್.. ವಿರಾಟ್ ಗೆ ಶಾಕಿಂಗ್…
ನಿನ್ನೆ ದುಬೈ ಅಂಗಳದಲ್ಲಿ ನಡೆದ ಐಪಿಎಲ್ ನ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಜಯಭೇರಿ ಬಾರಿಸಿದೆ.
ಒಂದಲ್ಲ ಎರಡಲ್ಲ ಬರೋಬ್ಬರಿ ಐದನೇ ಬಾರಿಗೆ ಮುಂಬೈ ತಂಡ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದೆ.
ಇದು ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳಿಗೆ ಫುಲ್ ಖುಷ್ ನೀಡಿದ್ರೆ ಕೊಹ್ಲಿ ಅಭಿಮಾನಿಗಳಿಗೆ ತಲೆಬಿಸಿ ತಂದೊಡ್ಡಿದೆ.
ಹೌದು..! ನಿನ್ನೆಯ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಮುಂಬೈ ತಂಡ ಐಪಿಎಲ್ ನಲ್ಲಿ ಇತಿಹಾಸ ಸೃಷ್ಟಿಸಿದೆ.
ಜೊತೆಗೆ ನಾಯಕನಾಗಿ ರೋಹಿತ್ ಶರ್ಮಾ ಚರಿತ್ರೆ ಸೃಷ್ಠಿಸಿದ್ದಾರೆ. ಮುಂಬೈ ತಂಡದ ನಾಯಕನಾಗಿ ಐದು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ ರೋಹಿತ್ ಶರ್ಮಾ.
ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೋಸ್ಟ್ ಸಕ್ಸಲ್ ಫುಲ್ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.
ಇತ್ತ ರೋಹಿತ್ ನೇತೃತ್ವದಲ್ಲಿ ಮುಂಬೈ ಚಾಂಪಿಯನ್ ಪಟ್ಟಕ್ಕೇರುತ್ತಿದ್ದಂತೆ ಟೀಂ ಇಂಡಿಯಾ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸುವ ಮಾತುಗಳು ಕೇಳಿಬಂದಿವೆ.
ರೋಹಿತ್ ಶರ್ಮಾ ಅವರನ್ನು ಭಾರತದ ಟಿ 20 ನಾಯಕರನ್ನಾಗಿ ಮಾಡಲು ಇಂಗ್ಲೆಂಡ್‍ನ ಮಾಜಿ ನಾಯಕ ಮೈಕೆಲ್ ವಾನ್ ಸಲಹೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಾನ್, ” ರೋಹಿತ್ ಶರ್ಮಾ ಟೀಮ್ ಇಂಡಿಯಾದ ಟಿ-20 ನಾಯಕನನ್ನಾಗಿ ಮಾಡಬೇಕು. ಅವರು ಒಬ್ಬ ಅದ್ಭುತ ಲೀಡರ್ ಹಾಗೂ ಆಟಗಾರ?.
ಪಂದ್ಯಗಳನ್ನು ಹೇಗೆ ಗೆಲ್ಲುವುದು ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಇದರಿಂದ ವಿರಾಟ್ ಗೆ ಸ್ವಲ್ಪ ಮಟ್ಟಿಗೆ ಹೊರೆ ಕಡಿಮೆ ಮಾಡಬಹುದು.
ಐಪಿಎಲ್ ನಲ್ಲಿ ಚರಿತ್ರೆ ಸೃಷ್ಟಿಸಿದ ಹಿಟ್ ಮ್ಯಾನ್ ರೋಹಿತ್..
ವಿರಾಟ್ ಕೇವಲ ಆಟಗಾರನಾಗಿ ಅದ್ಭತ ಪ್ರದರ್ಶನ ನೀಡಲು ಸಹಾಯಕ ಆಗುತ್ತದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಕೆಲ ಹಿರಿಯ ಕ್ರಿಕೆಟ್ ಆಟಗಾರರೂ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಫೈನಲ್‍ನಲ್ಲಿ ಮುಂಬೈ ಇಂಡಿಯನ್ಸ್ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಐದು ವಿಕೆಟ್ ಗಳಿಂದ ಸೋಲಿಸಿತು.
ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ಇದು ಐದನೇ ಐಪಿಎಲ್ ಪ್ರಶಸ್ತಿ. ಮುಂಬೈ ಇಂಡಿಯನ್ಸ್ ಫ್ರ್ಯಾಂಚೈಸ್ ಈ ಹಿಂದೆ 2013, 2015, 2017 ಮತ್ತು 2019 ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿತ್ತು .
ರೋಹಿತ್ ಶರ್ಮಾ ಒಟ್ಟು ಆರು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಮುಂಬೈ ಇಂಡಿಯನ್ಸ್ ನಾಯಕರಾಗಿ ಐದು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು 2009 ರಲ್ಲಿ ಆಡಮ್ ಗಿಲ್ ಕ್ರಿಸ್ಟ್ ಅವರ ನಾಯಕತ್ವದಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಪ್ರಶಸ್ತಿಯನ್ನು ಗೆದ್ದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel