ಬಾಲಿವುಡ್ ನಟಿ ಲಿನಾ ಆಚಾರ್ಯ ನಿಧನ ( Actress Lina Acharya passed away)
ಮುಂಬೈ : ಅನಾರೋಗ್ಯದಿಂದ ಟಿವಿ ಆಂಕರ್ ಲಿನಾ ಆಚಾರ್ಯ ಕೊನೆಯುಸಿರೆಳೆದಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು.
ಹಿಂದಿ ಧಾರವಾಹಿಯಲ್ಲಿ ತಮ್ಮದೇಯಾದ ನಟನೆಯಿಂದ ಎಲ್ಲರನ್ನು ಆಕರ್ಷಿಸಿದ್ದ ಲಿನಾ ಆಚಾರ್ಯ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಇಂದು ಬೆಳಗಿನ ಜಾವ ಕಣ್ಣು ಮುಚ್ಚಿದ್ದಾರೆ.
ಕಳೆದ ಎರಡು ವರ್ಷಗಳಿಂದ ಲಿನಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಕ್ರಮವಾಗಿ ಅವರನ್ನು ಮುಂಬೈನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಸ್ಯಾಂಡಲ್ ವುಡ್ ಶೀಘ್ರವೇ ಕಾಲಿಡಲಿದ್ದಾನೆ “ಮುಖವಾಡ ಇಲ್ಲದವನು”..!
ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಲೀನಾ ನಿಧನದ ಸುದ್ದಿ ಬಾಲಿವುಡ್ ಗೆ ಆಘಾತ ನೀಡಿದ್ದು, ಬಾಲಿವುಡ್ ಸಿನಿರಂಗ ಲೀನಾ ಅಗಲಿಕೆಗೆ ಕಂಬನಿ ಮಿಡಿದಿದೆ.
ಲೀನಾ ಕೊನೆಯದಾಗಿ ಕ್ಲಾಸ್ ಆಫ್ 2020 ಅನ್ನೊ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡಿದ್ದರು.
ಸೆಟ್ ಜೀ, ಆಪ್ ಕೆ ಆ ಜಾನೆ ಸೇ, ಮೇರಿ ಹನಿ ಕಾರಕ್ ಬಿವಿ ಅನ್ನೋ ಸಿರಿಯಲ್ಸ್ ಲೀನಾ ಅವರಿಗೆ ಒಳ್ಳೆ ಹೆಸರನ್ನು ತಂದುಕೊಟ್ಟಿದ್ದವು.
ರಾಣಿ ಮುಖರ್ಜಿ ನಟಿಸಿರುವ `ಹಿಕ್ಕಿ’ ಸಿನಿಮಾ ಮೂಲಕ ಲೀನಾ ಚಿತ್ರರಂಗ ಪ್ರವೇಶಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










