ಮೋದಿ, ಬಿಎಸ್ ವೈಗೆ ಸುಳ್ಳಿನ ಪ್ರಶಸ್ತಿ : ವಿ.ಎಸ್.ಉಗ್ರಪ್ಪ
ಬಳ್ಳಾರಿ : ಮೋದಿಯವರಿಗೆ, ಸಿಎಂ ಯಡಿಯೂರಪ್ಪನವರಿಗೆ ಸುಳ್ಳಿನ ಪ್ರಶಸ್ತಿ ಸಿಗಬಹುದು. ಬಳ್ಳಾರಿ ಜಿಲ್ಲೆಯಲ್ಲಿ ಆನಂದ್ ಸಿಂಗ್ ಗೆ ಸುಳ್ಳಿನ ಪ್ರಶಸ್ತಿ ಸಿಗಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಲೇವಡಿ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡೋ ಕೆಲಸಗಳು ಸಾಕಷ್ಟಿವೆ. ಅದನ್ನು ಬಿಟ್ಟು ವಿಜಯನಗರ ಜಿಲ್ಲೆ ಯಾಕೆ ತರಾತುರಿಯಲ್ಲಿ ಘೋಷಣೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಕೊರೊನಾ, ತುಂಗಭದ್ರಾ ಜಲಾಶಯದ ಹೂಳು, ನವಲಿ ಸಮಾನಂತರ ಜಲಾಶಯ ನಿರ್ಮಾಣ ಸಾಕಷ್ಟು ಕೆಲಸಗಳು ಬಾಕಿ ಇವೆ.
ಅದನ್ನು ಹೊರತು ಪಡಿಸಿ ಹೊಸ ಜಿಲ್ಲೆ ರಚನೆಗೆ ಯಾಕೆ ತರಾತುರಿ. ಬೆಳಗಾವಿ, ತುಮಕೂರು, ಬೆಂಗಳೂರು, ಶಿವಮೊಗ್ಗ ದೊಡ್ಡ ಜಿಲ್ಲೆಗಳಿವೆ. ಅವುಗಳನ್ನು ಬಿಟ್ಟು ಬಳ್ಳಾರಿ ಜಿಲ್ಲೆ ವಿಭಜನೆ ನಿಮಗೆ ಯಾಕೆ ಎಂದು ಸಿಎಂ ವಿರುದ್ಧ ಉಗ್ರಪ್ಪ ಕಿಡಿಕಾರಿದ್ದಾರೆ.
ಕೇಂದ್ರದ ಅಣತಿಯಂತೆ ನಾವು ಕೆಲಸ ಮಾಡುತ್ತೇವೆ : ಕಟೀಲ್
ಇನ್ನ ಹೊಸ ಜಿಲ್ಲೆ ಘೋಷಣೆಗೆ ಮುನ್ನ ಸಿಎಂ ಯಡಿಯೂರಪ್ಪ ಆಯಾ ಪಕ್ಷಗಳ ನಿಲುವು ಕೇಳಬೇಕಿತ್ತು. ಬಳ್ಳಾರಿ ಜಿಲ್ಲೆ ವಿಭಜನೆಯಿಂದ ಈ ಭಾಗದ ಜನರ ಸಾಂಸ್ಕøತಿಕತೆಗೆ, ಭಾವನೆಗೆ ಧಕ್ಕೆ ಬರ್ತದೆ.
ಇದು ಸರ್ಕಾರಕ್ಕೆ ಶೋಭೆ ತರುವಂಥದಲ್ಲಾ. ಅಖಂಡ ಬಳ್ಳಾರಿ ಜಿಲ್ಲೆ ಉಳಿವಿಗಾವಿ ಹೋರಾಟ ಮಾಡೋ ಸಂಘಟನೆಗಳಿಗೆ ನಮ್ಮ ಬೆಂಬಲ ಇದೆ.
ಹೊಸ ಜಿಲ್ಲೆ ಬೇಡ, ಇದೆ ಜಿಲ್ಲೆಗೆ ವಿಜಯನಗರ ಜಿಲ್ಲೆ ಅಂತ ಹೆಸರಿಡಿ ಎಂದು ಒತ್ತಾಯಿಸಿದ ಉಗ್ರಪ್ಪ, ಆದಷ್ಟು ಬೇಗ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಿ ಎಂದು ಆಗ್ರಹಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










