bigboss kannada 8
ಬಿಗ್ ಬಾಸ್ ಸೀಸನ್ 8ಕ್ಕೆ ತಯಾರಾಗ್ತಿದ್ದಾರಂತೆ ಕಿಚ್ಚ ಸುದೀಪ್..!
ಎಲ್ಲಾ ಭಾಷೆಗಳಲ್ಲೂ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದಲ್ಲೂ ಅಷ್ಟೇ ಫೇಮಸ್. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರುವ ಬಿಗ್ ಬಾಸ್ ನೋಡೋಕೆ ಸಂಜೆ ಆದ್ರೆ ಮನೆ ಮಂದಿಯಲ್ಲಿ ಟಿವಿ ಮುಂದೆ ಕುಳಿತು ಬಿಡ್ತಾರೆ. 7 ಸೀಸನ್ ಗಳು ಯಶಸ್ವಿಯಾಗಿ ನೆರವೇರಿದೆ. ಕಳೆದ ಆವೃತ್ತಿಯಲ್ಲಿ ಶೈನ್ ಶೆಟ್ಟಿ ಫೈನಲ್ ಗೆದ್ದಿದ್ದರು. ಆದ್ರೆ ಈ ಬಾರಿ ಕೊರೊನಾ ಹಾವಳಿಯಿಂದಾಗಿ ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ನಡೆಯಲ್ಲ ಎಂದು ಪ್ರೇಕ್ಷಕರು ನಿರಾಸೆಯಾಗಿದ್ದರು. ಆದ್ರೀಗ ಬಿಗ್ ಬಾಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ಸಿಕ್ಕಿದೆ.
ಆಪ್ತ ಸ್ನೇಹಿತ ಜಾಕ್ ಮಂಜು ಹುಟ್ಟುಹಬ್ಬಕ್ಕೆ ಶುಭಕೋರಿದ ಕಿಚ್ಚ..!
ಹೌದು ಮೂಲಗಳ ಪ್ರಕಾರ ಬಿಗ್ ಬಾಸ್ ಹೊಸ ಆವೃತ್ತಿಗೆ ಚಾಲನೆ ಸಿಕ್ಕಿದೆಯಂತೆ. ಅಲ್ಲದೇ ಬಿಗ್ ಬಾಸ್ ಕಾರ್ಯಕ್ರಮಕ್ಕಾಗಿ ಈಗಾಗಲೇ ಕಿಚ್ಚ ಸುದೀಪ್ ತಯಾರಿ ಆರಂಭಿಸಿದ್ದಾರೆ ಎನ್ನಲಾಗ್ತಿದೆ. ಇನ್ನೂ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನಿರ್ದೇಶಕರಾಗಿರುವ ಪರಮೇಶ್ವರ್ ಗುಂಡ್ಕಲ್ ಅವರೇ ಸ್ವತಃ ಈ ಕುರಿತು ಮಾಹಿತಿ ನೀಡಿದ್ದು, ”ಹೊಸ ಆವೃತ್ತಿಯ ಕೆಲಸ ಪ್ರಗತಿಯಲ್ಲಿದೆ’ ಎಂದು ಸುದೀಪ್ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ. ಈ ಪೋಸ್ಟ್ ನೋಡಿ ಬಿಗ್ ಬಾಸ್ ಪ್ರಿಯರು ಫುಲ್ ಖುಷ್ ಆಗಿದ್ದಾರೆ.
40 ವರ್ಷದ ಕಲಾಸೇವೆ: ಸಿನಿ ಪಯಣ ನೆನೆದು ಭಾವುಕರಾದ ಜಗ್ಗೇಶ್..!
ಇನ್ನೂ ಕೊರೊನಾ ಹಾವಳಿ ಇರದೇ ಹೋಗಿದ್ರೆ ಇಷ್ಟೊತ್ತಿಗಾಗಲೇ ಬಿಗ್ ಬಾಸ್ ಸೀಸನ್ 8 ಫೈನಲ್ ಹಂತದಲ್ಲಿರಬೇಕಿತ್ತು. ಆದ್ರೆ, ಕೊರೊನಾ ಕಾರಣದಿಂದ ಈ ವರ್ಷ ಬಿಗ್ ಬಾಸ್ ಗೆ ಬ್ರೇಕ್ ಬಿದ್ದಿದೆ. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಶೋ ಆರಂಭವಾಗದರೂ, ಕನ್ನಡದಲ್ಲಿ ಮಾತ್ರ ಪ್ರಸಾರವಾಗಿರಲಿಲ್ಲ. ಇನ್ನೂ ಸಂಕ್ರಾಂತಿಗೆ ಬಿಗ್ ಬಾಸ್ ಹೊಸ ಸೀಸನ್ ಆರಂಭವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಟಾಲಿವುಡ್ , ಕಾಲಿವುಡ್ ನಲ್ಲೂ ಧೂಳೆಬ್ಬಿಸಲಿದೆ ಒಡೆಯರ್ ನಿರ್ದೇಶನದ ‘ರೆಮೋ’..!
ಅಲ್ಲದೇ ಮೂಲಗಳ ಪ್ರಕಾರ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಮನ್ ಮ್ಯಾನ್ ಕಾನ್ಸೆಪ್ಟ್ ಇರುವುದಿಲ್ಲ ಎನ್ನಲಾಗಿದೆ. ಬದಲಾಗಿ ಕೇವಲ ಸೆಲೆಬ್ರಿಟಿಗಳು ಮಾತ್ರ ಸ್ಪರ್ಧಿಗಳಾಗಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.
‘ಅಪ್ಪಾಜಿ ಬೈಯುತ್ತಿದ್ದ ವಾಯ್ಸ್ ಮಿಸ್ ಮಾಡಿಕೊಳ್ತೀನಿ’ : ಡಿ- ಬಾಸ್..!
ಇನ್ನೂ ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸುವ ಸ್ಪರ್ಧಿಗಳು ಕಡ್ಡಾಯವಾಗಿ ಕೊರೊನಾ ನಿಯಮಗಳನ್ನ ಪಾಲಿಸಲೇಬೇಕಾಗಿದೆ. ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸುವ ಮುನ್ನ ಕೆಲವು ದಿನ ಕ್ವಾರಂಟೈನ್ ಮಾಡಲಾಗುವುದು. ಕೊನೆಯ ದಿನ ಪರೀಕ್ಷೆ ಸಹ ಮಾಡಲಾಗುವುದು. ನೆಗಿಟಿವ್ ಬಂದವರನ್ನು ಮಾತ್ರ ಮನೆಯೊಳಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
bigboss kannada 8
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel