ayodhya
ಅಯೋಧ್ಯೆ ವಿಮಾನ ನಿಲ್ದಾಣಕ್ಕೆ “ಶ್ರೀರಾಮ”ನ ಹೆಸರಿಡಲು ಯುಪಿ ಸಚಿವಸಂಪುಟದಲ್ಲಿ ಅಂಗೀಕಾರ..!
ಉತ್ತರಪ್ರದೇಶ: ಉತ್ತರಪ್ರದೇಶದ ಅಯೋಧ್ಯೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರಿಡುವ ಪ್ರಸ್ತಾವನೆಗೆ ಉತ್ತರ ಪ್ರದೇಶ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ.
ಸದ್ಯ ಸಚಿವ ಸಂಪುಟ ಅನುಮೋದನೆ ಪಡೆದ ಈ ಪ್ರಸ್ತಾವವನ್ನು ಈಗ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗಗುತ್ತೆ. ಇನ್ಮುಂದೆ ಅಯೋಧ್ಯೆ ವಿಮಾನ ನಿಲ್ದಾಣ “ಮರ್ಯಾದಾ ಪುರುಷೋತ್ತಮ ಶ್ರೀರಾಮವಿಮಾನ ನಿಲ್ದಾಣ”ವಾಗಿ ಮಾರ್ಪಾಡಾಗಲಿದೆ.
ಕರ್ನಾಟಕದಲ್ಲಿ ಮತ್ತೆ ಲಾಕ್ಡೌನ್ ಭೀತಿ..? ವದಂತಿ ನಂಬಿ ಗುಳೆಹೊರಟ್ರಾ ವಲಸೆ ಕಾರ್ಮಿಕರು..?
ರಾಜ್ಯ ಸರ್ಕಾರವು ನಗರ ಅಭಿವೃದ್ಧಿ ಮತ್ತು ಜಾಗತಿಕ ಧಾರ್ಮಿಕ ಪ್ರವಾಸೋದ್ಯಮ ತಾಣ ನಿರ್ಮಾಣದಲ್ಲಿ ತೊಡಗಿದ್ದು ಅಯೋಧ್ಯೆಯ ಸಂರಕ್ಷಣೆ, ಪ್ರವಾಸೋದ್ಯಮ ಮತ್ತು ಮೂಲಸೌಕರ್ಯಗಳ ಒಟ್ಟಾರೆ ಅಭಿವೃದ್ಧಿಗೆ ಜಾಗತಿಕ ಸಲಹೆಗಾರರನ್ನು ಸಹ ನೇಮಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಸಿರುವ ಉತ್ತರಪ್ರದೇಶದ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ, “ಯೋಗಿಯವರ ಉತ್ತರ ಪ್ರದೇಶ ಸರ್ಕಾರ ಕ್ಯಾಬಿನೆಟ್ ಅಯೋಧ್ಯೆ ವಿಮಾನ ನಿಲ್ದಾಣವನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮವಿಮಾನ ನಿಲ್ದಾಣ ಎಂದು ಹೆಸರಿಸಲು ಅನುಮೋದಿಸಿದೆ. ಶ್ರೀರಾಮನ ನಗರ ಅಯೋಧ್ಯೆಯನ್ನು ವಿಶ್ವದ ಉನ್ನತ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ” ಎಂದಿದ್ದಾರೆ.
ayodhya
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








