ಸಿಡಿ ಬಗ್ಗೆ ಮಾತಾಡಿದ್ರೆ ಬಿಜೆಪಿಗರು ಮೈಪರಚಿಕೊಳ್ಳೋದ್ಯಾಕೆ : ಡಿಕೆಶಿ
ಉಡುಪಿ : ನಾನು ವಿಡಿಯೋ ಬಗ್ಗೆ ಮಾತಾಡಿದ್ರೆ ಅದ್ಯಾಕೋ ಕೆಲ ಬಿಜೆಪಿ ನಾಯಕರು ಮೈ ಪರಚಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿಗರಿಗೆ ಟಾಂಗ್ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ರಾಜಕೀಯ ಕಾರ್ಯದರ್ಶಿ ಅಂದ್ರೆ ರಸ್ತೆಲಿ ಹೋಗೋರಲ್ಲ, ಸಂತೋಷ್ ಸಾಮಾನ್ಯ ಕಾರ್ಯಕರ್ತನೂ ಅಲ್ಲ. ವಿಜಯನಗರ ಜಿಲ್ಲೆ ರಚನೆಗೆ ಮುಂದುವರೆದ ವಿರೋಧ : ಸಚಿವರಿಗೆ ಘೇರಾವ್
ಬಿಜೆಪಿಯ ಎಲ್ಲಾ ರಾಜಕೀಯ ಬೆಳವಣಿಗೆ ವೇಳೆ ಸಂತೋಷ್ ಹೆಸರು ಕೇಳಿಬರುತ್ತೆ. ಬಿಜೆಪಿ ಸರ್ಕಾರ ರಚನೆ ವೇಳೆ ಅವರ ಕಾರ್ಯಾಚರಣೆ ನೋಡಿದ್ದೇವೆ. ನನಗೆ ಗೊತ್ತಿರುವ ಮಾಹಿತಿ ತಿಳಿಸಿದ್ದೇನೆ ಎಂದರು.
ಇನ್ನು ಸಂಸಾರದಲ್ಲಿ ಯಾವುದೇ ಬಿರುಕಿರಲಿಲ್ಲ ಎಂದು ಈಗಾಗಲೇ ಪತ್ನಿ ಹೇಳಿದ್ದಾರೆ.
ರಾಜಕೀಯ ಒತ್ತಡವೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂದಿದ್ದಾರೆ. ಇಷ್ಟಾದ ಮೇಲೂ ವಿರೋಧ ಪಕ್ಷದ ಅಧ್ಯಕ್ಷನಾಗಿ ಕಣ್ಣುಮುಚ್ಚಿ ಕುತ್ಕೋಬೇಕಾ ಎಂದು ಡಿಕೆಶಿವಕುಮಾರ್ ಪ್ರಶ್ನಿಸಿದರು.
ಇನ್ನು ಸಿಡಿ ವಿಚಾರವಾಗಿ ಮಾತನಾಡುತ್ತಾ, ಸಿಡಿ ಇತ್ತೋ ಇಲ್ವೋ.. ಎಲ್ಲಾ ಹೊರಬರಲಿ. ಸಣ್ಣ ವಯಸ್ಸಲ್ಲಿ ಉನ್ನತ ಸ್ಥಾನಮಾನ ಸಿಕ್ಕಿತ್ತು. ಮೂಲ, ವಲಸಿಗ ಪ್ರಶ್ನೆ ನಮ್ಮಲ್ಲಿ ಇಲ್ಲ : ಶ್ರೀರಾಮುಲು
ಈ ವಯಸ್ಸಲ್ಲಿ ಸುಮ್ನೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳಲ್ಲ ಎಂದು ಡಿಕೆಶಿ, ಅದ್ಯಾಕೋ ಕೆಲ ಬಿಜೆಪಿ ನಾಯಕರು ಮೈ ಪರಚಿಕೊಳ್ಳುತ್ತಿದ್ದಾರೆ.
ನಾನೇನೂ ಈಶ್ವರಪ್ಪ ಸುದ್ದಿ ಮಾತಾಡಿಲ್ಲ. ಯಾರು ಎಲ್ಲೆಲ್ಲಿ ಏನೇನು ಕೊಟ್ಟಿದ್ದಾರೆ ನಮಗೂ ಗೊತ್ತು. ನಮಗೆ ಅವಶ್ಯಕತೆ ಇಲ್ಲದ ವಿಚಾರ ಅಂತ ಸುಮ್ನಿದ್ದೇವೆ ಅಂದ್ರು.
ಲವ್ ಜಿಹಾದ್ ಕಾನೂನು ತರುವ ಬಗ್ಗೆ ಮಾತನಾಡಿದ ಶಿವಕುಮಾರ್, ಕಾನೂನು ಜಾರಿಗೆ ತರುವ ಮೊದಲು ಕೇಂದ್ರದತ್ತ ಒಮ್ಮೆ ನೋಡ್ಲಿ.
ಯಾವ ಲೀಡರ್ ಮಕ್ಕಳು ಯಾರು ಯಾರನ್ನು ಲವ್ ಮಾಡಿದ್ದಾರೆ ತಿಳಿದುಕೊಳ್ಳಲಿ. ಭಾರತ ದೇಶದಲ್ಲಿ ಅವರ ಪ್ರೀತಿ ಅವರ ಹಕ್ಕು.
ಧರ್ಮ, ವಿಶ್ವಾಸ, ಮಾನವೀಯತೆ ಎಲ್ಲವೂ ಗೌರವಿಸೋದು ಮುಖ್ಯ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










