Ravichandran
ಗುಣಭದ್ರ + ಸಮಂತಭದ್ರ = ‘ಕನ್ನಡಿಗ’..!
ಸ್ಯಾಂಡಲ್ ವುಡ್ ನ ಖ್ಯಾತ ನಟ ರವಿಚಂದ್ರನ್ ಅವರ ಹಿಂದಿನ ಸಿನಿಮಾಗಳ ಕ್ರೇಜ್ ಬೇರೇನೆ. ಇತ್ತು.. ಅವರ ಸಿನಿಮಾವೊಂದು ತೆರೆಮೇಲೆ ಬರುತ್ತಿದೆ ಅಂದ್ರೇನೆ ಅಭಿಮಾನಿಗಳು ರೋಮಾಂಚನಗೊಳ್ಳುತ್ತಿದ್ರು. ಅವರ ಪ್ರತಿಯೊಂದು ಸಿನಿಮಾದಲ್ಲೂ ಏನಾದರೂ ವಿಶೇಷತೆ ಇದ್ದೇ ಇರುತ್ತಿತ್ತು. ಅಂದ್ಹಾಗೆ ಸುಮಾರು 9-10 ವರ್ಷಗಳ ಹಿಂದೆ ರವಿ ಚಂದ್ರನ್ ಅವರು ಹೆಚ್ಚು ಸಿನಿಮಾಗಳಲ್ಲಿ ಡಬಲ್ ಶೇಡ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನ ಭರ್ಜರಿಯಾಗಿ ರಂಜಿಸಿದ್ದರು. ಇದೀಗ ಮತ್ತೊಮ್ಮೆ ಕನ್ನಡಿಗ ಸಿನಿಮಾದಲ್ಲಿ ಡಬಲ್ ರೋಲ್ ನಲ್ಲಿ ಗುಣಭದ್ರ , ಸಮಂತಭದ್ರನಾಗಿ ಮತ್ತೆ ಅಭಿಮಾನಿಗಳಿಗೆ ರವಿಮಾಮನ ದರ್ಶನವಾಗಲಿದೆ.
ಅಂದ್ಹಾಗೆ ಕನ್ನಡಿಗ ಸಿನಿಮಾದಲ್ಲಿ ರವಿಚಂದ್ರನ್ ಅವರು ಲಿಪಿಕಾರ ಗುಣಭದ್ರನ ರೂಪದಲ್ಲಿ ಕಾಣಿಸಿಕೊಳ್ತಿದ್ದಾರೆ ಅನ್ನೋದು ಹಳೆ ಸುದ್ದಿ. ಹೊಸ ಸುದ್ದಿ ಏನೆಂದ್ರೆ ಈ ಸಿನಿಮಾದ ಕಥೆಯ ಫ್ಲಾಶ್ ಬ್ಯಾಕ್ ನಲ್ಲಿ ‘ಸಮಂತಭದ್ರ’ನಾಗಿಯೂ ‘ಕ್ರೇಜಿಸ್ಟಾರ್’ ಕಾಣಿಸಿಕೊಳ್ತಿದ್ದಾರೆ ಅನ್ನೋದು. ಅಂದ್ಹಾಗೆ ಐತಿಹಾಸಿಕ ಕಥೆ ಹೊಂದಿರುವ ಚಿತ್ರದಲ್ಲಿ ರವಿಚಂದ್ರನ್ ಗುಣಭದ್ರನಾಗಿಯೂ ಹಾಗೂ ಅವರ ಪೂರ್ವಜರಾಗಿರುವಂತೆ ಸಮಂತಭದ್ರ ಪಾತ್ರಗಳಲ್ಲಿಯೂ ಮಿಂಚಲಿದ್ದಾರಂತೆ.
ಡಿ ಬಾಸ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ : ರಾಬರ್ಟ್ ಸಿನಿಮಾದ ಬಿಗ್ ಅಪ್ ಡೇಟ್
ಮತ್ತೊಂದು ವಿಶೇಷತೆ ಅಂದ್ರೆ ವಿಭಿನ್ನ ಚಿತ್ರದಲ್ಲಿ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಗೆಳೆಯನ ಪಾತ್ರಕ್ಕೆ ರಾಕ್ ಲೈನ್ ಬಣ್ಣ ಹಚ್ಚಿದ್ದಾರೆ. ರಾಕ್ ಲೈನ್ ಮತ್ತು ರವಿಚಂದ್ರನ್ ಇಬ್ಬರು ಚಿತ್ರೀಕರಣ ಸೆಟ್ ನಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತ ಸಿನಿಮಾದಲ್ಲಿ ಸಂಸದೆ ಸುಮಲತಾ ಅವರು ರಾಣಿ ಚೆನ್ನಭೈರಾದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕರು ಘೋಷಣೆ ಮಾಡಿದ್ದರು. ಆದರೀಗ ಅವರ ಬದಲಾಗಿ ಈ ಪಾತ್ರಕ್ಕೆ ಭವಾನಿ ಪ್ರಕಾಶ್ ಅವರು ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.
ಧ್ರುವ ಸರ್ಜಾ ‘ಪೊಗರು’ಗೆ ತಮಿಳಿನಲ್ಲೂ ಭಾರೀ ಡಿಮ್ಯಾಂಡ್..!
ಇನ್ನೂ ಚಿತ್ರದ ಚಿತ್ರೀಕರಣವೂ ಬಹುತೇಕ ಮುಕ್ತಾಯದ ಹಂತ ತಲುಪಿದೆ. ಮೂಲಗಳ ಪ್ರಕಾರ ಕೇವಲ ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿಯಿದ್ದು, ಶೀಘ್ರವೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಲಿದೆಯಂತೆ. ಇನ್ನೂ ಚಿತ್ರಕ್ಕೆ ಗಿರಿರಾಜ್ ಅವರು ಆಕ್ಷನ್ ಕಟ್ ಹೇಳುತ್ತಿದ್ದು, ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
Ravichandran
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








