ತಮಿಳು ಕಿರುತೆರೆಯ ಖ್ಯಾತ ನಟಿ ಚಿತ್ರಾ ಆತ್ಮಹತ್ಯೆಗೆ ಶರಣು
ಇತ್ತೀಚೆಗೆ ಸೆಲೆಬ್ರಿಟಿಗಳು ಆತ್ಮಹತ್ಯೆ ಮಾಡಿಕೊಳ್ಳಿತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇದೆ. ಅದ್ರಲ್ಲೂ ಬಾಲಿವುಡ್ ನಟ ಸುಸಾಂತ್ ಆತ್ಮಹತ್ಯೆ ನಂತರ ಹಲವು ನಟರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೇಸರವೆಂದರೆ ಖಿನ್ನತೆಗೆ ಒಳಗಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದು ಹೆಚ್ಚು. ಹೀಗೆ ಜೀವನದ ಕಥೆ ಮುಗಿಸಿಕೊಂಡ ಸೆಲೆಬ್ರಿಟಿಗಳ ಲಿಸ್ಟ್ ಗೆ ಇದೀಗ ಮತ್ತೊಬ್ಬ ನಟಿ ಸೇರ್ಪಡೆಗೊಂಡಿದ್ದಾರೆ. ತಮಿಳು ಕಿರುತೆರೆಯ ಖ್ಯಾತ ನಟಿ ಚಿತ್ರಾ ನೇಣಿಗೆ ಶರಣಾಗಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ..!
ಚೆನ್ನೈನ ನಜರೆತ್ ಪೆಟ್ಟೈನ 5 ಸ್ಟಾರ್ ಹೋಟೆಲ್ ಒಂದರಲ್ಲಿ ಚಿತ್ರಾ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನೂ ಚಿತ್ರಾ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಅವರ ಭಾವಿ ಪತಿ ಸಹ ಹೋಟೆಲ್ ನಲ್ಲಿ ಇದ್ದರು ಎನ್ನಲಾಗಿದೆ. ಉದ್ಯಮಿ ಹೇಮಂತ್ ಅವರ ಜೊತೆಗೆ ಚಿತ್ರಾ ಎಂಗೇಜ್ ಮೆಮಟ್ ಆಗಿತ್ತು.
ಜನೋಪಕಾರ ಮಾಡಲು ತಮ್ಮ ಫ್ಲ್ಯಾಟ್ಸ್ ಗಳನ್ನು ಅಡವು ಇಟ್ಟ ನಟ ಸೋನು ಸೂದ್
ಇಂದು ನಸುಕಿನ ಜಾವ 2.30 ರ ಸುಮಾರಿಗೆ ಶೂಟಿಂಗ್ ಮುಗಿಸಿಕೊಂಡು ವಾಪಸ್ಸಾಗಿದ್ದರು. EVP ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮುಗಿಸಿವಾಪಸ್ಸಾಗಿದ್ದ ಚಿತ್ರಾ ಫ್ರೆಶ್ ಅಪ್ ಆಗಿ ಬರೋದಾಗಿ ಹೇಳಿ ರೂಮಿಗೆ ಹೋಗಿದ್ದರಂತೆ. ಆದರೆ ಎಷ್ಟೊತ್ತಾದರೂ ಬಾಗಿಲು ತೆರೆಯದ ಹಿನ್ನೆಲೆ ಗಾಬರಿಗೊಂಡ ಹೇಮಂತ್ ಬಾಗಗಿಲು ತಟ್ಟಿದ್ದಾರೆ. ಬಾಗಲು ತೆರೆಯದೇ ಹೋದಾಗ ಹೋಟೆಲ್ ಸಿಬ್ಬಂದಿ ಕರೆಸಿ ಡ್ಯೂಪ್ಲಿಕೆಟ್ ಕೀ ಸಹಾಯದಿಂದ ಬಾಗಿಲು ತೆರೆಸಿದಾಗ ಅವರಿಗೆ ಆಘಾತವಾಗಿದೆ. ತನ್ನ ಸೀರೆಯಲ್ಲಿ ನಟಿ ನೇಣಿಗೆ ಶರಣಾಗಿದ್ದನ್ನ ಕಂಡು ಶಾಕ್ ಆಗಿದ್ದಾರೆ. ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.
ತಮಿಳಿನ ಖ್ಯಾತ ನಟ ಶರತ್ ಕುಮಾರ್ ಗೆ ಕೊರೊನಾ ಪಾಸಿಟಿವ್..!
ತಮಿಳು ಕಾರ್ಯಕ್ರಮ ಪಾಂಡಿಯನ್ ಸ್ಟೋರ್ಸ್ ನಲ್ಲಿ ಮುಲ್ಲೈ ಪಾತ್ರದಲ್ಲಿ ನಟಿಸಿದ್ದ ಚಿತ್ರಾ ಇನ್ನೂ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕಾರ್ಯಕ್ರಮಗಳ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ಮೂಲಗಳ ಪ್ರಕಾರ ಚಿತ್ರಾ ಖಿನ್ನತೆಯಿಂದ ಬಳಲುತ್ತಿದ್ದರಂತೆ. ಆತ್ಮಹತ್ಯೆಗೆ ಇದೇ ಕಾರಣ ಎಂದು ಹೇಳಲಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel