ಅಮೆರಿಕಾದಲ್ಲಿ ಕಪ್ಪುಜನರ ಸಾವಿಗೆ ಇದೇ ಕಾರಣ!
ನ್ಯೂಯಾರ್ಕ್ : ಜನಾಂಗೀಯ ತಾರತಮ್ಯ ಭೂತಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಕೊರೊನಾ ವೈರಸ್ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಪ್ಪು ಜನಾಂಗದ ವೈದ್ಯೆಗೆ ಬಿಳಿ ಜನಾಂಗದ ವೈದ್ಯೆ ಸರಿಯಾದ ಚಿಕಿತ್ಸೆ ನೀಡದ ಕಾರಣ ಆಕೆ ಮೃತಪಟ್ಟಿದ್ದಾಳೆ. ಈ ಘಟನೆ ಅಮೆರಿಕದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸೂಸನ್ ಮೂರ್ (50) ಎಂಬ ವೈದ್ಯೆಕೆಲ ಕೊರೊನಾ ಸೋಂಕಿಗೆ ತುತ್ತಾಗಿ ದಿನಗಳ ಹಿಂದೆ ಇಂಡಿಯಾನಾ ಪೊಲೀಸ್ ನ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸೋಂಕಿನ ಕಾರಣ ಆಕೆಯ ಗಂಟಲಿನಲ್ಲಿ ತೀವ್ರವಾದ ನೋವು ಉಂಟುಮಾಡಿತು. ಉಸಿರಾಡಲು ಕಷ್ಟವಾಗಿತ್ತು.
ಕೊರೊನಾ : ಆ ಲಸಿಕೆ ಪಡೆದ ವೈದ್ಯನಿಗೆ ಅಲರ್ಜಿ
ಹೀಗಾಗಿ ತನಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಈ ವಿಷಯ ತಿಳಿಸಿದ್ದಾರೆ. ಆದರೆ ವೈದ್ಯೆ, ಮೂರ್ ಅವ್ರ ಮಾತುಗಳನ್ನು ನಂಬಲಿಲ್ಲ. ಅಲ್ಲದೆ ಬೇಗ ಮನೆಗೆ ಕಳಿಸುವುದಾಗಿ ಹೇಳಿದ್ದಾರೆ. ಇದರಿಂದ ಬೇಸರಗೊಂಡ ಮೂರ್ ಸೆಲ್ಫಿ ವಿಡಿಯೋ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನು ವಿಡಿಯೋದಲ್ಲಿ “ನನಗೆ ಗಂಟಲು ತುಂಬಾ ನೋವು. ಬಿಳಿ ಜನಾಂಗದ ವೈದ್ಯೆ ನನ್ನ ಬಗ್ಗೆ ಕೆಟ್ಟದಾಗಿ ವರ್ತಿಸುತ್ತಿದ್ದಾಳೆ. ನಾನು ಏನು ಹೇಳಿದ್ರೂ ನಂಬುತ್ತಿಲ್ಲ. ಬೇಗ ಆಸ್ಪತ್ರೆಯಿಂದ ನನ್ನನ್ನು ಡಿಸ್ಚಾರ್ಜ್ ಮಾಡಲು ಅವರು ಎದುರು ನೋಡುತ್ತಿದ್ದಾರೆ.
ನಾನು ಬಿಳಿಯಳಾಗಿದ್ದರೆ, ಈ ರೀತಿ ಆಗುತ್ತಿರಲಿಲ್ಲ. ಈ ಕಾರಣಗಳಿಂದಲೇ ಅನೇಕ ಕರಿಯರು ಸಾಯುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.
ಈ ವಿಡಿಯೋವನ್ನು ವೈದ್ಯರಿಗೆ ಫೇಸ್ ಬುಕ್ ಗ್ರೂಪ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಮಾಡಿದ ಕೆಲವು ದಿನಗಳಲ್ಲೇ ಮೂರ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









