ಸಿದ್ದರಾಮಯ್ಯ ನಮ್ಮ ಜೊತೆ ಇರ್ತಾರೆ : ಹೆಚ್ ವಿಶ್ವನಾಥ್
ಮೈಸೂರು : ಎಸ್ ಟಿ ಪಟ್ಟಿಗೆ ಕುರುಬ ಸಮುದಾಯವನ್ನು ಸೇರಿಸುವ ಹೋರಾಟದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಜೊತೆ ಇರ್ತಾರೆ ಎಂದು ಮಾಜಿ ಎಂಎಲ್ ಸಿ ಹೆಚ್ ವಿಶ್ವನಾಥ್ ತಿಳಿಸಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್ ಟಿ ಪಟ್ಟಿಗೆ ಕುರುಬರನ್ನ ಸೇರಿಸುವ ಹೋರಾಟಕ್ಕೆ ಸಿದ್ದರಾಮಯ್ಯ ಅವರನ್ನ ಆಹ್ವಾನಿಸಿದ್ದೇವೆ. ಅವರು ನಮ್ಮ ಜೊತೆ ಇರ್ತಾರೆ.
ಇದು ಸಿದ್ದರಾಮಯ್ಯ, ಹೆಚ್ ಎಂ ರೇವಣ್ಣ, ಕೆ ಎಸ್ ಈಶ್ವರಪ್ಪ, ಹೆಚ್ ವಿಶ್ವನಾಥ್ ಹಾಗೂ ಮುಂದಾದ ರಾಜಕೀಯ ನಾಯಕರ ವಿಚಾರದ ಪ್ರಶ್ನೆಯಲ್ಲ.
ಕುರುಬರನ್ನು ವಿಭಜನೆ ಮಾಡಲು ಆರ್ ಎಸ್ ಎಸ್ ಹುನ್ನಾರ : ಸಿದ್ದರಾಮಯ್ಯ
ಹೊರತಾಗಿ ಇಡೀ ಕುರುಬ ಸಮುದಾಯದ ಪ್ರಶ್ನೆಯಾಗಿದೆ. ಇದು ನನ್ನ ಸಚಿವ ಕೆ ಎಸ್ ಈಶ್ವರಪ್ಪ ಅವರ ಪ್ರತಿಷ್ಠೆಯ ಪ್ರಶ್ನೆಯಲ್ಲ ಎಂದಿದ್ದಾರೆ.
ಈಶ್ವರಪ್ಪರನ್ನು ಎತ್ತಿಕಟ್ಟುವ ಮೂಲಕ ಕುರುಬರನ್ನು ವಿಭಜನೆ ಮಾಡಲು ಆರ್ ಎಸ್ ಎಸ್ ಹುನ್ನಾರ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಆರ್‍ಎಸ್‍ಎಸ್ ಸಂಘಟನೆಯನ್ನು ಬ್ಯಾನ್ ಮಾಡಿದ್ದಾರಾ? ಆರ್‍ಎಸ್‍ಎಸ್ ಅಂದರೆ ಮೈಲಿಗೆ ಏಕೆ ಎಂದು ಪ್ರಶ್ನಿಸಿದ್ದಾರೆ.
ಆರ್‍ಎಸ್‍ಎಸ್, ಯೂಥ್ ಕಾಂಗ್ರೆಸ್, ಯುವ ಜನತಾದಳದ ಯುವ ಮೋರ್ಚಾಗಳಿವೆ. ಎಲ್ಲರ ಬೆಂಬಲ ನಮಗೆ ಬೇಕಾಗಿದೆ. ಬರೀ ಆರ್‍ಎಸ್‍ಎಸ್ ಬಗ್ಗೆ ಏಕೆ ಹೇಳಬೇಕು ಎಂದು ಟೀಕಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









