ಕಾಯಲು ವಲಸಿಗರಿಗೆ ಆಗ್ತಿಲ್ಲ, ಅದು ಸಿಎಂಗೂ ಇಷ್ಟವಿಲ್ಲ : ಸಂಕ್ರಾಂತಿ ಬಳಿಕ ಸಂಪುಟ ಸರ್ಜರಿ
ಬೆಂಗಳೂರು : ಮಂತ್ರಿ ಆಸೆ ಹೊತ್ತು ಕಮಲ ಹಿಡಿದ ಕೆಲವರಿಗೆ ಇನ್ನೂ ಸಚಿವರಾಗುವ ಭಾಗ್ಯ ಸಿಕ್ಕಿಲ್ಲ. ಮಂತ್ರಿ ಸ್ಥಾನಕ್ಕಾಗಿ ಸಿಎಂ ನಿವಾಸಕ್ಕೆ ಹಲವು ಬಾರಿ ಭೇಟಿ ಕೊಟ್ಟರೂ ಯಾವುದೇ ಪ್ರಯೋಜನಾ ಆಗುತ್ತಿಲ್ಲ.
ಇತ್ತ ಮೂಲ ಬಿಜೆಪಿಗರಲ್ಲೂ ಕೂಡ ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಸಂಪುಟ ಸರ್ಜರಿ ಮಾಡೋದಾಗಿ ಕಳೆದ ವರ್ಷವೇ ಸಿಎಂ ಹೇಳಿದ್ದರೂ ಈವರೆಗೂ ಮಾತ್ರ ಮಾಡಿಲ್ಲ.
ಇದೀಗ ಸಂಪುಟ ಸರ್ಜರಿಗೆ ಕೊನೆಗೂ ಮುಹೂರ್ತ ಫಿಕ್ಸ್ ಆದಂತೆ ಕಾಣುತ್ತಿದ್ದು, ಸಂಕ್ರಾಂತಿ ಬಳಿಕ ಸಂಪುಟದಲ್ಲಿ ಸಮ್ ಕ್ರಾಂತಿ ಆಗಬಹುದು ಎಂದು ಹೇಳಲಾಗುತ್ತಿದೆ.
ತೆಂಗಿನ ಎಣ್ಣೆಯ 7 ಉತ್ತಮ ಆರೋಗ್ಯ ಪ್ರಯೋಜನಗಳು
ಹೌದು..! ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಇಂದು,ನಾಳೆ ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರವಾಸ ಮಾಡಲಿದ್ದಾರೆ. ಈ ವೇಳೆ ಸಂಪುಟ ಸರ್ಜರಿ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆಗಳಿವೆ.
ಇನ್ನೂ ಕೆಲ ಮೂಲಗಳ ಪ್ರಕಾರ ಫೆಬ್ರವರಿ ಮಂಡನೆಯಾಗುವ ಬಜೆಟ್ ಗೂ ಮುನ್ನ ಸಚಿವ ಸಂಪುಟಕ್ಕೆ ಸರ್ಜರಿಯಾಗಬಹುದು ಎಂದು ಹೇಳಲಾಗುತ್ತಿದೆ.
ಆದ್ರೆ ಅಲ್ಲಿಯವರೆಗೂ ಕಾಯೋಕೆ ವಲಸಿಗರಿಗೆ ಹಾಗೂ ಅಲ್ಲಿಯವರೆಗೂ ವಲಸಿಗರನ್ನ ಕಾಯಿಸೋಕೆ ಸಿಎಂಗೂ ಇಷ್ಟ ಇಲ್ಲ. ಈಗಾಗಿ ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಆಗುವ ಸಾಧ್ಯತೆಗಳಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









