ಕೇಂದ್ರ ಮಾಜಿ ಗೃಹ ಸಚಿವ ಬುಟಾ ಸಿಂಗ್ ನಿಧನ
ನವದೆಹಲಿ : ಕೇಂದ್ರ ಮಾಜಿ ಗೃಹ ಸಚಿವ ಮತ್ತು ಜಲೋರ್ ಸಿರೋಹಿ ಮಾಜಿ ಸಂಸದ ಬುಟಾ ಸಿಂಗ್ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಗ್ಯಾಸ್ ರೀಫಿಲ್ ಬುಕ್ಕಿಂಗ್ ಗಾಗಿ ಮಿಸ್ಡ್ – ಕಾಲ್ ಕೊಟ್ರೆ ಸಾಕು
ಆದ್ರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಜಲೋರ್-ಸಿರೋಹಿ ಸಂಸದೀಯ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದ ಬುಟಾ ಸಿಂಗ್ ಲಕ್ಷಾಂತರ ಬೆಂಬಲಿಗರನ್ನ ಬಿಟ್ಟು ಇಹಲೋಕದತ್ತ ಪಯಣ ಬೆಳೆಸಿದ್ದಾರೆ. ಸಿರೋಹಿಯಲ್ಲಿ ಬುಟಾ ಸಿಂಗ್ ಬೆಂಬಲಿಗರ ಆಕ್ರಂದನ ಮುಗಿಲು ಮುಟ್ಟಿದೆ.
ಇಂದಿರಾ ಗಾಂಧಿ ಸಂಪುಟದಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಾಂಗ್ರೆಸ್ ನಾಯಕ ಇವರಾಗಿದ್ದರು. 86 ವರ್ಷದ ಬುಟಾ ಸಿಂಗ್ ಬಿಹಾರ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









