ಯಾರ್ಕರ್ ಸೆನ್ಸೇಷನ್ ನಟರಾಜನ್ ಗೆ ಲಕ್ಕಿ ಚಾನ್ಸ್
ಮೆಲ್ಬೋರ್ನ್ : ತಮಿಳುನಾಡಿನ ಯಾರ್ಕರ್ ಸೆನ್ಸೇಷನ್ ಬೌಲರ್ ನಟರಾಜನ್ ಗೆ ಲಕ್ಕಿ ಚಾನ್ಸ್ ಸಿಕ್ಕಿದೆ.
ಟೀಂ ಇಂಡಿಯಾದ ಪ್ರಮುಖ ಬೌಲರ್ ಉಮೇಶ್ ಯಾದವ್ ಗಾಯದ ಸಮಸ್ಯೆಯಿಂದ ಆಸೀಸ್ ಟೂರ್ನಿಯಿಂದ ಹೊರಬಂದಿದ್ದಾರೆ. ಉಮೇಶ್ ಬದಲಿಗೆ ತಮಿಳುನಾಡಿನ ‘ಯಾರ್ಕರ್’ ಸೆನ್ಸೇಷನ್ ನಟರಾಜನ್ ಅವರನ್ನು ಆಯ್ಕೆ ಮಾಡಲಾಗಿದೆ.
ಗಾಯಗೊಂಡಿರುವ ಉಮೇಶ್ ಯಾದವ್ ಬದಲಿಗೆ ಇನ್ನುಳಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಎಡಗೈ ಫಾಸ್ಟ್ ಬೌಲರ್ ಆಗಿರುವ ನಟರಾಜನ್ ಕಣಕ್ಕಿಳಿಯಲಿದ್ದಾರೆ. ಇದನ್ನ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಸ್ಪಷ್ಟಪಡಿಸಿದ್ದಾರೆ.
ಉಮೇಶ್ ಯಾದವ್ ಎಡಗೈ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ತೀವ್ರ ತರದ ಗಾಯದಿಂದ ಬಳಲುತ್ತಿದ್ದಾರೆ.
ಅವರು ಮೂರನೇ ಟೆಸ್ಟ್ ವೇಳೆಗೆ ಸಂಪೂರ್ಣ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ. ಹೀಗಾಗಿ ಮೂರು ಮತ್ತು ನಾಲ್ಕನೇ ಟೆಸ್ಟ್ ಮ್ಯಾಚ್ ಗಳಲ್ಲಿ ನಟರಾಜನ್ ಆಡಲಿದ್ದಾರೆ ಎಂದು ತಿಳಿಸಿದ್ದಾರೆ.
ನೆಟ್ ಬೌಲರ್ ಆಗಿದ್ದ ನಟರಾಜನ್ ಮೊದಲು ಐಪಿಎಲ್ ನಲ್ಲಿ, ನಂತರ ಭಾರತದಲ್ಲಿ ಮಿಂಚು ಹರಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲೂ ಲಕ್ಕಿ ಚಾನ್ಸ್ ಹೊಡೆದಿರುವ ಅವರು ಇದೀಗ ಟೆಸ್ಟ್ ಗೂ ಪದಾರ್ಪಣೆ ಮಾಡಲಿದ್ದಾರೆ.
ಇನ್ನು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನಟರಾಜನ್ ಎರಡು ವಿಕೆಟ್ ಕಬಳಿಸಿದ್ದರು. ಅದೇ ರೀತಿ ಟಿ20 ಸರಣಿಯಲ್ಲಿ ಆರು ವಿಕೆಟ್ ಪಡೆದು ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










