ಕಿಮ್… ನ್ಯೂ ಇಯರ್ ಶುಭಾಶಯ ತಿಳಿಸಿದ್ದೇಗೆ ಗೊತ್ತಾ..?
ಸಿಯೋಲ್ : ಕಿಮ್ ಜಾಂಗ್ ಉನ್..! ಅಂದ್ರೆ ತಟ್ ಅಂತ ನೆನಪಾಗೋದು ಅವರ ವಿಚಿತ್ರ ರೂಲ್ ಗಳು ಮತ್ತು ಅವರ ಕ್ರೂರತೆ. ಮೂರಡಿ ಇರೋ ಕಿಮ್ ಸದ್ಯ ಇಡೀ ಜಗತ್ತಿಗೆ ತಲೆನೋವಾಗಿದ್ದಾನೆ.
ಯುದ್ಧೋನ್ಮಾದದಲ್ಲಿ ಕುಣಿಯುತ್ತಿರೋ ಈ ಹುಚ್ಚ ಯಾವ ಸಂದರ್ಭ ಏನು ಮಾಡ್ತಾನೋ..? ಎಲ್ಲಿ ಸುಖಾಸುಮ್ಮನೆ ಯುದ್ಧ ಶುರು ಮಾಡ್ತಾನೋ ಅಂತ ಕೆಲ ದೇಶಗಳು ಇವನ ಮೇಲೆ ಒಂದು ಕಣ್ಣಿಟ್ಟಿವೆ.
ಇನ್ನು ಮೂರಡಿ ಬಿಳಿ ಹಂದಿಯಂತಿರುವ ಕಿಮ್ ತನ್ನ ದೇಶದಲ್ಲಿ ಅನೇಕ ವಿಚಿತ್ರ ಕಾನೂನುಗಳನ್ನ ಮಾಡಿಕೊಂಡಿದ್ದಾನೆ. ಇದರಿಂದಾಗಿ ಅಲ್ಲಿರುವ ಜನ ಬಾವಿಯಲ್ಲಿರುವ ಕಪ್ಪೆಗಳಂತೆ ಜೀವನ ಸಾಗಿಸುತ್ತಿದ್ದಾರೆ.
ಸದ್ಯ ಇಡೀ ಜಗತ್ತು ಹೊಸ ಕ್ಯಾಲೆಂಡರ್ ವರ್ಷಕ್ಕೆ ಕಾಲಿಟ್ಟಿದೆ. ನ್ಯೂ ಇಯರನ್ನ ಕೊರೊನಾ ಮಧ್ಯೆ ಎಲ್ಲ ಕಡೆ ಭರ್ಜರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ.
ಜನರಿಗೆ ಸ್ವತಂತ್ರ್ಯವೇ ಇಲ್ಲದ ಉತ್ತರ ಕೊರಿಯಾದಲ್ಲಿ ಈ ನ್ಯೂ ಇಯರ್ ಹೇಗೆ ಸೆಲೆಬ್ರೆಟ್ ಮಾಡಿದ್ರು..? ಕಿಮ್ ಹೇಗೆ ತನ್ನ ಜನರಿಗೆ ಶುಭಾಶಯಗಳನ್ನ ತಿಳಿಸಿದ್ದಾನೆ..? ಅಸಲಿಗೆ ಅವ್ನು ನ್ಯೂ ಇಯರ್ ಅನ್ನ ಆಚರಿಸಿದ್ನಾ..? ಅನ್ನೋ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರಲ್ಲೂ ಮೂಡಿರುತ್ವೆ.
ಸದ್ಯ ಇದಕ್ಕೆಲ್ಲ ಈಗ ಉತ್ತರ ಸಿಕ್ಕಿದ್ದು, ಕಿಮ್ ಈ ಬಾರಿ ವಿನೂತನವಾಗಿ ಪತ್ರಗಳ ಮೂಲಕ ತನ್ನ ದೇಶದ ಜನರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾನೆ.
ಸಂಕಷ್ಟದ ಸಂದರ್ಭದಲ್ಲಿ ತನ್ನನ್ನ ನಂಬಿ, ಸಹಕರಿಸಿದ್ದಕ್ಕಾಗಿ ಕಿಮ್ ಪತ್ರದಲ್ಲಿ ಜನರಿಗೆ ಧನ್ಯವಾದ ತಿಳಿಸಿದ್ದಾನೆ. ಹೊಸ ವರ್ಷದಲ್ಲಿ ಎಲ್ಲರಿಗೂ ಸಂತೋಷ ಮತ್ತು ಆರೋಗ್ಯ ಸಿಗಲಿ ಎಂದು ಹಾರೈಸಿದ್ದಾನೆ.
ಈವರೆಗೂ 2.5 ಕೋಟಿ ಪತ್ರಗಳನ್ನು ಅಧಿಕಾರಿಗಳು ಹಂಚಿದ್ದಾರೆ.
ಕೊರೊನಾ ಅಪ್ ಡೇಟ್ : ಕಳೆದ 24 ಗಂಟೇಲಿ 18,177 ಕೇಸ್ ಪತ್ತೆ, 217 ಸಾವು
ಅಲ್ಲದೆ ಕಿಮ್ ಪತ್ರದಲ್ಲಿ ಹೊಸ ವರ್ಷದಲ್ಲಿ ಜನರ ಆಕಾಂಕ್ಷೆಗಳನ್ನು ಮತ್ತು ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸುವುದಾಗಿ ಭರವಸೆ ನೀಡಿದ್ದಾನೆ.
ಸ್ನೇಹಿತರೇ ಇದು ಒಂದು ಚೂರು ವಿಚಿತ್ರ ಅನ್ಸುತ್ತೆ ಅಲ್ವಾ..? ಯಾಕೆಂದ್ರೆ ಉತ್ತರ ಕೊರಿಯಾದಲ್ಲಿ ಬದುಕುತ್ತಿರೋ ಜನರಿಗೆ ಸರಿಯಾದ ವಾಕ್ ಸ್ವಾತಂತ್ರ್ಯವೇ ಇಲ್ಲ.
ಅಲ್ಲಿ ಕಿಮ್ ಆಡಿದ್ದೇ ಆಟ, ಮಾಡಿದ್ದೇ ಪಾಠ. ಹೀಗಿರುವಾಗ ಜನರ ಆಸೆ, ಆಕಾಂಕ್ಷೆ, ಆಶಯಗಳನ್ನ ಹೇಗೆ ತಾನೆ ಅವರು ಹೇಳಿಕೊಳ್ತಾರೆ ಅಲ್ವಾ..?
ಅಂದಹಾಗೆ 1995 ರ ನಂತರ ಇದೇ ಮೊದಲ ಬಾರಿಗೆ ಉತ್ತರ ಕೊರಿಯಾದ ನಾಯಕನೊಬ್ಬ ಕಾರ್ಡ್‍ಗಳ ಮೂಲಕ ಶುಭಾಶಯಗಳನ್ನು ಕಳುಹಿಸಿದ್ದಾನೆ.
ಸಾಮಾನ್ಯವಾಗಿ ಕಿಮ್ ಹೊಸ ವರ್ಷದ ಮುನ್ನಾದಿನದಂದು, ಪ್ರತಿವರ್ಷ ಟಿವಿಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










