ADVERTISEMENT
Tuesday, April 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹಣೆಪಟ್ಟಿಕಟ್ಟಿ ಸಂಬಂಧ ಕೆಡುವುದೇಕೆ?

admin by admin
February 2, 2021
in Newsbeat, Saaksha Special, ಎಸ್ ಸ್ಪೆಷಲ್
relationship
Share on FacebookShare on TwitterShare on WhatsappShare on Telegram

ಭವ್ಯ ಬೊಳ್ಳೂರು

ಹಿರಿಯ ಪತ್ರಕರ್ತೆ

Related posts

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

April 7, 2026
ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವದಂತಿಗಳಿಗೆ ಬ್ರೇಕ್ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದ ಗೃಹ ಸಚಿವ ಜಿ ಪರಮೇಶ್ವರ್

ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವದಂತಿಗಳಿಗೆ ಬ್ರೇಕ್ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದ ಗೃಹ ಸಚಿವ ಜಿ ಪರಮೇಶ್ವರ್

April 7, 2026

ಇತ್ತೀಚೆಗೆ ಸದ್ಗುರು ಅವರ ಉಪನ್ಯಾಸವೊಂದನ್ನು ಕೇಳುತ್ತಿದ್ದೆ. ಯಾವುದೇ ವ್ಯಕ್ತಿಯನ್ನು ಪೂರ್ವಾಗ್ರಹಪೀಡಿತರಾಗಿ ನೋಡುವ ಬದಲು ಆ ಸನ್ನಿವೇಶಕ್ಕೆ ಅನುಸಾರವಾಗಿ ಅರ್ಥಮಾಡಿಕೊಳ್ಳಿ, ಆಗ ನಿಮ್ಮ ಬದುಕೇ ಬದಲಾಗುತ್ತದೆ ಅನ್ನುವುದು ಅದರ ಸಾರವಾಗಿತ್ತು. ಇದನ್ನು ಕೇಳುತ್ತಿದ್ದಾಗ ನಾವು ಎಷ್ಟೊಂದು ತಪ್ಪು ಮಾಡುತ್ತಿದ್ದೇವೆ ಎನ್ನುವ ಅರಿವು ಆ ಕ್ಷಣವೇ ನನಗಾಯಿತು. ಯಾವುದೇ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಎಡವುದು ಆ ಕಾರಣದಿಂದಲೇ. ಒಬ್ಬ ವ್ಯಕ್ತಿ ಏನೋ ವಿಷಯಕ್ಕೆ ಜಗಳ ತೆಗೆದರೆ, ಅದೇ ವ್ಯಕ್ತಿ ಒಂದೆರಡು ಬಾರಿ ಯಾರೊಂದಿಗಾದರೂ ಕೋಪದಿಂದ ಜೋರಾಗಿ ಮಾತನಾಡಿದರೆ, ಪುಟ್ಟ ಪುಟ್ಟ ವಿಷಯಕ್ಕೆ ಕಾಲು ಕೆರೆದು ಜಗಳಕ್ಕೆ ಬರುತ್ತಾರೆ, ಆತ ಜಗಳಗಂಟ, ಕೋಪಿಷ್ಟ ಅಂಥೆಲ್ಲಾ ಬಿರುದು ನಾಮಾವಳಿಗಳನ್ನು ನಮ್ಮ ಮನಸ್ಸಿಗೆ ಬಂದಂತೆ ನೀಡುತ್ತೇವೆ. ಉರಿಮುಸುಡಿ, ಸಿಡುಕು, ಸ್ವಾರ್ಥಿ, ಅಳುಮುಂಜಿ, ಸೋಮಾರಿ, ಕಂಜೂಸ್‌, ಹೊಟ್ಟೆಬಾಕ, ಮೆಂಟಲ್‌ ಹೀಗೆ ಎಷ್ಟು ಚೆನ್ನಾಗಿ ಬ್ರಾಂಡ್‌ ಸೆಟ್ಟಿಂಗ್‌ ಮಾಡುತ್ತೇವೆಂದರೆ ನಂತರ ಆ ವ್ಯಕ್ತಿಯನ್ನು ಕಂಡಾಗಲೆಲ್ಲಾ ಅದೇ ಭಾವನೆ. ಇನ್ನು ಇತರರ ಬಳಿ ಅವರನ್ನು ಪರಿಚಯಿಸುವುದು(ಹಿಂದಿನಿಂದ) ಇದೇ ಹಣೆಪಟ್ಟಿಯೊಂದಿಗೆ! ಆ ವ್ಯಕ್ತಿಯಲ್ಲೂ ಒಳ್ಳೆಯ ಮನಸ್ಸಿದೆ. ಯಾವುದೋ ಕಾರಣಕ್ಕೆ ಆ ಸನ್ನಿವೇಶದಲ್ಲಿ ಆತ ಹಾಗೆ ನಡೆದುಕೊಂಡ ಎನ್ನುವುದನ್ನು ನಾವು ತಿಳಿದುಕೊಳ್ಳುವುದೇ ಇಲ್ಲ.

ಸಂಸಾರಗಳು ಸಹ ಈ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ಒಡೆಯುವುದೂ ಉಂಟು. ಅವಿಭಕ್ತ ಕುಟುಂಬದಲ್ಲಿ ಮನೆಯ ಒಬ್ಬ ಸದಸ್ಯ(ಹೊರಗಿನಿಂದ ಬಂದವರು) ತನಗಿಷ್ಟವಾಗದ ವಿಷಯವನ್ನು ಇದರಲ್ಲಿ ವಿರೋಧಿಸಿದಾಗ ಆ ಮನೆಯ ಇತರ ಸದಸ್ಯರಿಗೆ ವಿರೋಧಿಸಿದ ವ್ಯಕ್ತಿ ನಮ್ಮ ಮನೆ ಒಡೆಯಲೆಂದೇ ಬಂದವರು ಎನ್ನುವ ಅಸಮಾಧಾನ ಆ ಕ್ಷಣವೇ ಟಿಸಿಲೊಡೆಯುತ್ತದೆ. ನಂತರ ಆ ಮನೆಯಲ್ಲಿ ಏನೇ ನಡೆದರೂ, ಆತ/ಆಕೆ ಎಂದೇ ಮನೆಯವರು ನಿರ್ಧರಿಸಿಯಾಗುತ್ತದೆ. ನನ್ನ ಸ್ನೇಹಿತೆಯೊಬ್ಬಳು ತನ್ನ ಮನೆಯಲ್ಲಿ ನಡೆದ ಒಂದು ಘಟನೆಯನ್ನು ಹೇಳುತ್ತಿದ್ದಳು. ಅವಳು ಮನೆಯ ಕಿರಿಸೊಸೆ. ಹಿರಿಯ ಸೊಸೆ ಸ್ವಭಾವತ ಸಾಧುವಲ್ಲದಿದ್ದರೂ ಮನೆಯವರಿಗೆ ಏನನ್ನೂ ಎದುರಾಡದವಳು. ನನ್ನ ಗೆಳತಿ ತನಗೆ ಸರಿ ಅನ್ನಿಸದೆ ಇದ್ದುದನ್ನು ಆ ಗಳಿಗೆಯಲ್ಲೇ ಹೇಳುವವಳು. ಒಮ್ಮೆ ಯಾವುದೋ ಒಂದು ವಿಷಯಕ್ಕೆ ತನ್ನ ಭಾವನಿಗೆ ಎದುರಾಡಿದ್ದಳು. ಇಂದಿಗೂ ಅದೇ ವಿಷಯವನ್ನು ಇಟ್ಟುಕೊಂಡು ಅವಳ ಭಾವ ಅವಳೊಂದಿಗೆ ಮಾತನಾಡುತ್ತಲೇ ಇಲ್ಲ. ಜೊತೆಗೆ ಆ ಮನೆಯಲ್ಲಿ ಆಸ್ತಿಗೋಸ್ತರ ಜಟಾಪಟಿ ನಡೆದಾಗ ಅದಕ್ಕೆ ಇವಳೇ ಕಾರಣ ಎನ್ನುವುದು ಮನೆಯವರೆಲ್ಲರ ಭಾವನೆಯಾಗಿತ್ತು. ತನ್ನದೇನು ತಪ್ಪಿಲ್ಲದಿದ್ದರೂ ಇವರೆಲ್ಲಾ ಯಾಕೆ ಹೀಗಾಡುತ್ತಿದ್ದಾರೆ ಎಂದು ಪತಿಯೊಂದಿಗೆ ಹೇಳಿಕೊಂಡಾಗಲೂ ಆತ ನೀನು ಅಂದು ಆಡಿದ ಒಂದೇ ಮಾತಿನಿಂದಲೇ ಹೀಗೆಲ್ಲಾ ಆಗಿದ್ದು. ಈಗ ನೀನೆಷ್ಟೇ ಒಳ್ಳೆಯವಳಾಗಿದ್ದರೂ ಅವರ ಪಾಲಿಗೆ ಕೆಟ್ಟವಳೇ ಅಂದು ಬಿಟ್ಟ. ನನ್ನ ಗೆಳತಿಗಂತೂ ಆ ಕ್ಷಣ ತಲೆಕೆಟ್ಟಂತಾಗಿತ್ತು.
ಇಂತಹ ಹಲವಾರು ಘಟನೆಗಳು ನಮ್ಮ ಕಣ್ಮುಂದೆ ನಡೆಯುತ್ತಲೇ ಇರುತ್ತವೆ.

 relationship
ಸೆಲೆಬ್ರಿಟಿಗಳು ಬಲಿಪಶುಗಳು
ಜನಸಾಮಾನ್ಯರಷ್ಟೇ ಅಲ್ಲ ಸೆಲೆಬ್ರಿಟಿಗಳೂ ಇದಕ್ಕೆ ತುತ್ತಾಗುತ್ತಾರೆ. ಯಾವುದೋ ಒಂದು ಹೇಳಿಕೆ ಅವರ ಕೆರಿಯರ್‌ನ್ನೇ ನುಂಗಿಬಿಡುತ್ತದೆ. ಇಡೀ ದೇಶವೇ ಅವರಿಗೆ ತಿರುಗಿ ಬೀಳುವಂತೆ ಮಾಡುತ್ತದೆ. ಅದುವರೆಗೆ ಅವರು ಮಾಡಿದ ಸಮಾಜ ಸೇವೆ, ಒಳ್ಳೆಯ ಕಾರ್ಯಗಳೆಲ್ಲಾ ಜನರ ಮಸ್ತಿಷ್ಕದಿಂದ ಅಳಿಸಿಹೋಗುತ್ತದೆ. ಹಣೆಪಟ್ಟಿಯೊಳಗೆ ಅವರ ಬದುಕು ಸಹ ಹೂತುಹೋಗುತ್ತದೆ. ಈ ಕಾರಣದಿಂದಾಗಿಯೇ ಎಷ್ಟೋ ವರ್ಷಗಳ ಕಾಲ ಅವಕಾಶವಂಚಿತರಾಗಿ ಖಿನ್ನತೆಗೆ ಒಳಗಾಗುವುದೂ ಇದೆ.

ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು  8548998564

ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564

ಅವಕಾಶಕ್ಕೂ ಚ್ಯುತಿ ತರುವ ಮನಸ್ಥಿತಿ
ಕೆಲಸಕ್ಕಾಗಿ ಪ್ರಯತ್ನಿಸುವಾಗ ಮೊದಲು ತನ್ನೊಂದಿಗೆ ಕಿರಿಕ್‌ ಮಾಡಿದ್ದ ಸಹೋದ್ಯೋಗಿ ಅಲ್ಲೇ ಇರುವರೆಂದೋ, ಇಲ್ಲ ತನ್ನ ಮೇಲೆ ಸದಾ ಸಿಡಿ ಸಿಡಿ ಅನ್ನುತ್ತಿದ್ದ ಬಾಸ್‌ ಕೈ ಕೆಳಗೆ ಮತ್ತೆ ಕೆಲಸ ಮಾಡಬೇಕಾಗುವುದೆಂದೋ ಆ ಅವಕಾಶವನ್ನು ತಿರಸ್ಕರಿಸುವುದೂ ಉಂಟು. ಅದರಿಂದ ನಷ್ಟ ಯಾರಿಗೆ? ಆ ಸಹೋದ್ಯೋಗಿ ಯಾವಾಗಲೂ ಹಾಗೆ ಇರಬೇಕೆಂದೇನೂ ಇಲ್ಲವಲ್ಲ. ಇಲ್ಲಿಯ ವಾತಾವರಣಕ್ಕೆ ಅನುಸಾರವಾಗಿ ಆತನೂ ಸ್ನೇಹಮಯಿಯಾಗಿ ನಡೆದುಕೊಳ್ಳುತ್ತಿರಬಹುದು. ಬಾಸ್‌ ಸಹ ಈ ಸಂಸ್ಥೆಗೆ ತಕ್ಕಂತೆ ಬದಲಾಗಿರಬಹುದು. ಹೀಗೆಲ್ಲಾ ನಾವು ಯೋಚಿಸಲೇ ಹೋಗದೆ, ನಮಗೆ ಸಿಕ್ಕಿದ ಉತ್ತಮ ಅವಕಾಶವನ್ನೂ ಕಳೆದುಕೊಳ್ಳುತ್ತೇವೆ. ಯಾವುದೋ ಪೂರ್ವಾಗ್ರಹಕ್ಕೆ ಸಿಲುಕಿ ನಮ್ಮದೇ ತಲೆಮೇಲೆ ಕಲ್ಲುಚಪ್ಪಡಿ ಎಳೆದುಕೊಂಡಾಂತಾಗುತ್ತದೆ.
ಮನದ ಪರದೆಯನ್ನೊಮ್ಮೆ ಸರಿಸಿ

ತಮ್ಮಲ್ಲಿ ನಕರಾತ್ಮಕತೆ ತುಂಬಿ ತುಳುಕುತ್ತಿದ್ದರೂ ಇತರರು ಮಾತ್ರ ತಮಗೆ ಬೇಕಾದಂತೆ ವರ್ತಿಸಬೇಕು. ಸ್ವಂತಿಕೆ ಅವರಲ್ಲಿ ಇರಬಾರದು. ಜೀ ಹುಜೂರ್‌ ಅನ್ನುತ್ತಿರಬೇಕು ಅನ್ನುವ ಮನೋಭಾವನೆಯೂ ಇದಕ್ಕೆ ಕಾರಣ. ಅದಕ್ಕೆ ತಪ್ಪಿದಾಗ ಹಣೆಪಟ್ಟಿ ಸಿದ್ದ. ಇತರರ ತಪ್ಪುಗಳನ್ನೇ ಎತ್ತಿಹಿಡಿಯುವಲ್ಲಿ ಅಂಥವರ ಮನಸ್ಸೂ ವ್ಯಸ್ತ. ಒಮ್ಮೆ ನೀವೇ ಯೋಚಿಸಿ, ಎಲ್ಲರಿಗೂ ಅವರದೇ ಆದ ಆಲೋಚನೆಗಳು ಇರುತ್ತವೆ. ಇತರರನ್ನು ಸರಿ ಮಾಡುತ್ತಾ ಎಷ್ಟು ಕಾಲ ಬದುಕಲು ಸಾಧ್ಯ? ಇತರರಿಗೆ ಹಣೆಪಟ್ಟಿಕಟ್ಟುವವರು ತಮ್ಮ ಮನಸ್ಸಿಗೆ ಹಾಕಿಕೊಂಡಿರುವ ಪರದೆಯನ್ನು ಸರಿಸಿ ನೋಡಬೇಕು. ಯಾವ ಸನ್ನಿವೇಶದಲ್ಲಿ ವ್ಯಕ್ತಿ ಹಾಗೆ ಮಾತನಾಡಿದ ಎಂದು ಗಮನಿಸಬೇಕು. ನಂತರ ಅದನ್ನು ಆ ಕ್ಷಣವೇ ಮರೆತು ಮುಂದಕ್ಕೆ ಸಾಗಬೇಕು. ಭೂತಕಾಲದಲ್ಲಿ ನಡೆದಿರುವುದನ್ನೂ ಎಂದಿಗೂ ವರ್ತಮಾನಕ್ಕೆ ಅಥವಾ ಭವಿಷ್ಯತ್‌ಗೆ ತರಲೇ ಬಾರದು. ಆಗ ನೋಡಿ ಸಂಬಂಧಗಳು ಹೇಗೆ ಸುಧಾರಿಸುತ್ತವೆ ಅನ್ನುವುದನ್ನು.
ನಿನ್ನೆ ಇರುವವರು ಇಂದಿರುವುದಿಲ್ಲ. ಇಂದಿರುವವರು ನಾಳೆ ಇರುವುದಿಲ್ಲ. ಹೀಗಿರುವಾಗ ಯಾವುದೋ ಕ್ಷಣದ ಮಾತು ನಮ್ಮ ಇಡೀ ಬದುಕನ್ನು ಆಳುವುದೇಕೆ ಅಲ್ಲವೇ..?

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Brand settingrelationship
ShareTweetSendShare
Join us on:

Related Posts

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

by Shwetha
April 7, 2026
0

ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ ಸಿಲಿಂಡರ್ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುವ ದಂಧೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು...

ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವದಂತಿಗಳಿಗೆ ಬ್ರೇಕ್ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದ ಗೃಹ ಸಚಿವ ಜಿ ಪರಮೇಶ್ವರ್

ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವದಂತಿಗಳಿಗೆ ಬ್ರೇಕ್ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದ ಗೃಹ ಸಚಿವ ಜಿ ಪರಮೇಶ್ವರ್

by Shwetha
April 7, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಕೇಳಿಬರುತ್ತಿರುವ ಬಿಸಿಬಿಸಿ ಚರ್ಚೆಗಳು ಮತ್ತು ವದಂತಿಗಳಿಗೆ ಗೃಹ ಸಚಿವ ಜಿ ಪರಮೇಶ್ವರ್ ಇದೀಗ...

ಬಸ್ ಟಿಕೆಟ್ ದರ ಏರಿಕೆ ಇಲ್ಲ: ಸಚಿವ ರಾಮಲಿಂಗರೆಡ್ಡಿ ಸ್ಪಷ್ಟನೆ

ಬಸ್ ಟಿಕೆಟ್ ದರ ಏರಿಕೆ ಇಲ್ಲ: ಸಚಿವ ರಾಮಲಿಂಗರೆಡ್ಡಿ ಸ್ಪಷ್ಟನೆ

by Shwetha
April 7, 2026
0

ಸದ್ಯಕ್ಕೆ ಸಾರಿಗೆ ಬಸ್‌ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಸ್...

ಮಹಿಳಾ ಪಿಎಸ್ಐಗೆ ಬೆದರಿಕೆ : ಖಾಕಿಗೇ ಕಂಟಕವಾದ ಪುಂಡಾಟಿಕೆ ಇದು ಬಿಹಾರ ಅಲ್ಲ ಕರುನಾಡು ಮಹಿಳಾ ಪಿಎಸ್ಐಗೆ ದಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದರೂ ಮೌನವೇಕೆ

ಮಹಿಳಾ ಪಿಎಸ್ಐಗೆ ಬೆದರಿಕೆ : ಖಾಕಿಗೇ ಕಂಟಕವಾದ ಪುಂಡಾಟಿಕೆ ಇದು ಬಿಹಾರ ಅಲ್ಲ ಕರುನಾಡು ಮಹಿಳಾ ಪಿಎಸ್ಐಗೆ ದಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದರೂ ಮೌನವೇಕೆ

by Shwetha
April 7, 2026
0

ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆಯೇ ಎಂಬ ಆತಂಕಕಾರಿ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ರಾಜ್ಯದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲದಂತಹ ವಾತಾವರಣ ನಿರ್ಮಾಣವಾಗುತ್ತಿರುವುದು...

ರಾಜ್ಯಕ್ಕೆ ನೀಡಬೇಕಾದ ಕನಿಷ್ಠ ಅನಿಲ ಪೂರೈಕೆ ಮಾಡಲಿ: ಪರಮೇಶ್ವರ್

ರಾಜ್ಯಕ್ಕೆ ನೀಡಬೇಕಾದ ಕನಿಷ್ಠ ಅನಿಲ ಪೂರೈಕೆ ಮಾಡಲಿ: ಪರಮೇಶ್ವರ್

by Shwetha
April 7, 2026
0

ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಬೇಕಾದ ಕನಿಷ್ಠ ಅನಿಲ ಪೂರೈಕೆ ಆಗದಿರುವುದರಿಂದ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಸಚಿವ G. ಪರಮೇಶ್ವರ್ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ರಾಜ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram