ರೈತ ಪ್ರತಿಭಟನೆ | ಗೋಡೆಯಲ್ಲ, ಸೇತುವೆಗಳನ್ನು ನಿರ್ಮಿಸಿ : ರಾಹುಲ್ ಗಾಂಧಿ
ನವದೆಹಲಿ : ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿ ಪ್ರವೇಶಿಸಬಾರದೆಂದು ಪೊಲೀಸರು ಸಿಮೆಂಟ್ ಸುರಿದು ಬ್ಯಾರಿಕೇಡ್ ಗಳನ್ನಿಟ್ಟು ಭದ್ರಕೋಟೆ ನಿರ್ಮಿಸುತ್ತಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಗೋಡೆಯಲ್ಲ, ಸೇತುವೆಗಳನ್ನು ನಿರ್ಮಿಸಿ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ರೈತರ ಪ್ರತಿಭಟನೆಗೆ ಅಡ್ಡಿ ಮಾಡುವ ಬದಲು ಅವರನ್ನ ಸಂಪರ್ಕಿ ಸಮಸ್ಯೆ ಬಗೆಹರಿಸಿ ಎಂದು ಸಲಹೆ ನೀಡಿದ್ದಾರೆ.

ಅಲ್ಲದೆ ತಮ್ಮ ಟ್ವೀಟ್ ನಲ್ಲಿ ರಾಹುಲ್ ಗಾಂಧಿ, ರೈತರ ಹೋರಾಟ ತಡೆಯಲು ನಿರ್ಮಿತವಾದ ಕೆಲವು ತಡೆಗೋಡೆಗಳ ಫೋಟೋಗಳನ್ನ ಹಂಚಿಕೊಂಡಿದ್ದಾರೆ.
ಟಿಕ್ರಿ, ಘಾಜಿಪುರ ಹಾಗೂ ಸಿಂಘೂ ಗಡಿಗಳಿಗೆ ಭಾರೀ ಪ್ರಮಾಣದಲ್ಲಿ ಹರಿದುಬರುತ್ತಿರುವ ರೈತರ ತಡೆಗಾಗಿ ರೈತರು ಒಳ ಪ್ರವೇಶಿಸಿದಂತೆ ರಸ್ತೆಗಳಿಗೆ ಗೋಡೆಗಳನ್ನು ನಿರ್ಮಿಸಲಾಗಿದೆ.
ಕ್ರೇನ್ ಮೂಲಕ ರಸ್ತೆಗಳನ್ನು ಅಗೆದು ಗ್ರಿಲ್ ಹಾಗೂ ಮೊಳೆಗಳನ್ನು ಸಿಮೆಂಟ್ ಮೂಲಕ ರಸ್ತೆಗೆ ಜೋಡಿಸಲಾಗಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಆಕ್ರೋಶಕ್ಕೆ ಗುರಿಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








