ರಿಹಾನಾ ಟ್ವೀಟ್ | `ವಿದೇಶಿಗರ ಅಭಿಪ್ರಾಯಬೇಕಿಲ್ಲ’ ಎಂದ ತಾರೆಯರು
ನವದೆಹಲಿ : ರೈತರ ಪ್ರತಿಭಟನೆ ಬಗ್ಗೆ ಪಾಪ್ ಗಾಯಕಿ ರಿಹಾನಾ ಮಾಡಿದ ಟ್ವೀಟ್ ಇದೀಗ ಭಾರಿ ಸಂಚಲನವನ್ನ ಸೃಷ್ಠಿ ಮಾಡಿದೆ. ರಿಹಾನಾ ಟ್ವೀಟ್ ಗೆ ಪರ ವಿರೋಧ ರೀ ಟ್ವೀಟ್ ಗಳು ಬರುತ್ತಿವೆ.
ಈಕೆಯ ಟ್ವೀಟ್ ಬಳಿಕ ಭಾರತದ ಬಹುತೇಕ ರಾಜಕಾರಣಿಗಳು, ಬಾಲಿವುಡ್ ತಾರೆಯರು ಹಾಗೂ ಕ್ರಿಕೆಟ್ ಆಟಗಾರರು ಟ್ವಿಟ್ಟರ್ ನಲ್ಲಿ ಏಕತೆಯ ಸಂದೇಶ ಸಾರುತ್ತಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ವಿದೇಶಾಂಗ ಸಚಿವ ಜೈ ಶಂಕತ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಟಿ ಕಂಗನಾ, ನಟ ಅಕ್ಷಯ್ ಕುಮಾರ್ ಹಾದಿಯಲ್ಲಿ ಟ್ವಿಟ್ಟರ್ ನಲ್ಲಿ ಏಕತೆಯ ಸಂದೇಶ ಸಾರುತ್ತಿದ್ದಾರೆ.
ಇದೀಗ ಈ ವಿಚಾರವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದು, ದೇಶದಲ್ಲಿ ಭಿನ್ನಾಭಿಪ್ರಾಯ ಮೂಡಿರುವ ಈ ಸಂದರ್ಭದಲ್ಲೂ ನಾವೆಲ್ಲ ಒಗ್ಗಟ್ಟಾಗಿ ಇರೋಣ.
ರೈತರು ನಮ್ಮ ದೇಶದ ಅವಿಭಾಜ್ಯ ಅಂಗವಾಗಿದ್ದಾರೆ. ಅಲ್ಲದೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕು ಮತ್ತೆ ದೇಶದಲ್ಲಿ ಶಾಂತಿ ನೆಲೆಸಲಿದೆ ಎಂಬ ನಂಬಿಕೆ ನನಗಿದೆ ಎಂದು ಬರೆದುಕೊಂಡಿದ್ದಾರೆ.
ಅದೇ ರೀತಿ ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಟ್ವೀಟ್ ಮಾಡಿ, ನಾವೆಲ್ಲ ಒಗ್ಗಟ್ಟಾಗಿ ನಿಂತರೆ ಯಾವುದೇ ಸಮಸ್ಯೆ ಪರಿಹಾರವಾಗಲ್ಲ ಎಂಬ ವಿಷಯವೇ ನಮ್ಮ ಮುಂದೆ ಇರೋದಿಲ್ಲ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಹೀಗಾಗಿ ನಾವೆಲ್ಲ ಒಂದಾಗಿ ಇರೋಣ. ಆಂತರಿಕ ಸಮಸ್ಯೆಗಳನ್ನ ಒಂದಾಗಿ ಪರಿಹರಿಸೋಣ ಎಂದು ಬರೆದುಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









