ಕೊರೊನಾ ವೈರಸ್ ವುಹಾನ್ ಲ್ಯಾಬ್ ನಿಂದ ಸೋರಿಕೆಯಾಗಿಲ್ಲ : ಡಬ್ಲ್ಯು ಹೆಚ್ ಒ
ಬೀಜಿಂಗ್ : ವಿಶ್ವದಾದ್ಯಂತ ಕೋಟ್ಯಂತರ ಮಂದಿಯನ್ನು ಬಾಧಿಸಿ, ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡಿರುವ ಛೀನಿ ವೈರಲ್ ಕೊರೊನಾ, ವುಹಾನ್ ನಲ್ಲಿರುವ ವೈರಾಲಜಿ ಲ್ಯಾಬ್ ನಿಂದ ಸೋರಿಕೆ ಯಾಗಿದೆ ಅನ್ನೋ ಮಾತಿದೆ.
ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಎಲ್ಲಾ ದೇಶಗಳು ಇದನ್ನೇ ವಾದಿಸುತ್ತಿವೆ. ಆದ್ರೆ ಇದೀಗ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞ ವ್ಯದ್ಯರೊಬ್ಬರು ” ಕೊರೊನಾ ವೈರಸ್ ವುಹಾನ್ ನಲ್ಲಿರುವ ವೈರಾಲಜಿ ಲ್ಯಾಬ್ ನಿಂದ ಸೋರಿಕೆಯಾಗಿಲ್ಲ ಅಂತ ಹೇಳಿದ್ದಾರೆ.
ಚೀನಾದ ವುಹಾನ್ ವೈರಾಲಜಿ ಲ್ಯಾಬ್ ನಿಂದ ಕೊರೊನಾ ಸೋರಿಕೆಯಾಗಿಲ್ಲ. ಬದಲಾಗಿ ಪ್ರಾಣಿಗಳಿಂದ ಮಾನವರಿಗೆ ಹರಡಿರುವ ಸಾಧ್ಯತೆ ಇದೆ ಎಂದು ಡಬ್ಲ್ಯು ಹೆಚ್ ಒ ಆಹಾರ ಸುರಕ್ಷತೆ ಮತ್ತು ಪ್ರಾಣಿಗಳ ರೋಗ ತಜ್ಞ ಪೀಟರ್ ಬೆಲ್ ಎಂಬರೇಕ್ ಅಭಿಪ್ರಾಯಪಟ್ಟಿದ್ದಾರೆ.
ಡಬ್ಲ್ಯು ಹೆಚ್ ಒ 10 ದೇಶಗಳ ನಿಯೋಗ ಕೊರೊನಾ ಸೋಂಕಿನ ಮೂಲ ಮತ್ತು ಚೀನಾದಲ್ಲಿ 2019 ಡಿಸೆಂಬರ್ ಗೂ ಮುನ್ನವೇ ಕೊರೊನಾ ಇತ್ತಾ ಎಂದು ಪತ್ತೆ ಹಚ್ಚಲು ಚೀನಾಗೆ ಭೇಟಿ ನೀಡಿದೆ.
ವೈರಾಲಜಿ ಲ್ಯಾಬ್, ವೆಟ್ ಮಾರುಕಟ್ಟೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೀಟರ್ ಬೆನ್ ಎಂಬರೇಕ್, 2019ಗೂ ಮುನ್ನ ಚೀನಾದಲ್ಲಿ ಸಾರ್ಸ್ ಕೋವ್ 2 ವೈರಸ್ ಇತ್ತು ಎಂಬೋದನ್ನು ದೃಢ ಪಡಿಸುವ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ.
ಈ ವೈರಸ್ ಬಾವಲಿಯಿಂದ ಹುಟ್ಟಿ ಬಳಿಕ ಮಾನವರಿಗೆ ಹರಡಿರುವ ಸಾಧ್ಯತೆ ಇದೆ ಎಂದಿದ್ದಾರೆ. ಹಾಗೇ ಇನ್ನಷ್ಟು ವಿಸ್ತøತ ಅಧ್ಯಯನ ನಡೆಸಿದರೇ ಮತ್ತಷ್ಟು ವಿವರಗಳು ಲಭ್ಯವಾಗುವ ಸಾಧ್ಯತೆಗಳಿವೆ ಎಂದಿದ್ದಾರೆ.