ಮೈಸೂರು : ಸರಳು ಚುಚ್ಚಿಕೊಂಡು ಮಾರಿಹಬ್ಬ ಆಚರಣೆ
ಮೈಸೂರು : ಬಾಯಿ, ಕಿವಿ, ಕುತ್ತಿಗೆಗೆ ಸರಳು ಚುಚ್ಚಿಕೊಂಡು ನಂಜನಗೂಡಿನ ಚುಂಚನಹಳ್ಳಿ ಗ್ರಾಮಸ್ಥರು ಬಹಳ ವಿಶೇಷ ಮತ್ತು ಮೈನವಿರೇಳಿಸುವಂತೆ ಮಾರಿಹಬ್ಬ ಆಚರಣೆ ಮಾಡಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಮಾರಿಹಬ್ಬವನ್ನು ಚುಂಚನಹಳ್ಳಿ ಗ್ರಾಮಸ್ಥರು ಈ ಹಿಂದಿನಿ ಬಂದಿರುವಂತೆ ಬಹಳ ಕಟ್ಟುಪಾಡಿನಿಂದ ಆಚರಣೆ ಮಾಡುತ್ತಾರೆ.
ಈ ಜಾತ್ರೆಯಲ್ಲಿ ಭಕ್ತರು ಬಾಯಿ, ಕಿವಿ, ಕುತ್ತಿಗೆಗೆ ಸರಳುಗಳನ್ನು ಚುಚ್ಚಿಕೊಂಡು ಮಾರಮ್ಮನಿಗೆ ಹರಕೆ ತೀರಿಸುತ್ತಾರೆ.
ಇಲ್ಲಿನ ಇನ್ನೊಂದು ವಿಶೇಷತೆ ಏನಂದ್ರೆ ಮಾರಿ ಜಾತ್ರೆ ವೇಳೆಯಲ್ಲಿ ಈ ಗ್ರಾಮದಲ್ಲಿ ಯಾರು ಬಟ್ಟೆ ಇಗೆಯುವಂಗಿಲ್ಲ.
ಇಲ್ಲಿನವರು ಬೇರೆ ಗ್ರಾಮಗಳಿಗೆ ತೆರಳಲ್ಲ, ಪೆÇರಕೆಯಲ್ಲಿ ಕಸ ಗುಡಿಸಲ್ಲ, ಒಗ್ಗರಣೆ ಹಾಕಲ್ಲ. ಬದಲಿಗೆ ಎಲ್ಲರೂ ಒಟ್ಟಿಗೆ ಸೇರಿ ಒಲೆ ಹಚ್ಚಿ ಮಡ ಸೇವೆ ಮಾಡುತ್ತಾರೆ.
ಇನ್ನು ಪ್ರತಿ ಜಾತ್ರೆ ಮಹೋತ್ಸವದ ವೇಳೆ ಕುಟುಂಬವೊಂದು ವಂಶ ಪಾರಂಪರ್ಯವಾಗಿ ಬಾಯಿಗೆ ಬೀಗ ಹಾಕಿಕೊಳ್ಳುವ ಪದ್ಧತಿಯನ್ನು ಮಾಡುತ್ತಿದೆ.
ಆರೋಗ್ಯದ ದೃಷ್ಟಿಯಿಂದ ಬಾಯಿಗೆ ಬೀಗ ಹಾಕಿಕೊಂಡವರ ಕೈಯಲ್ಲಿ ಮಕ್ಕಳಿಗೆ ಆಶೀರ್ವಾದ ಮಾಡಿಸಲಾಗುತ್ತದೆ.










