ADVERTISEMENT
Saturday, July 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೊನೆಗೂ ನನಸಾಗುತ್ತಿದೆ ಎಡಿಡಿ ಇಂಜಿನಿಯರಿಂಗ್ ಕಂಪೆನಿಯ ಕನಸು..!

admin by admin
November 9, 2020
in Newsbeat, Saaksha Special, ಎಸ್ ಸ್ಪೆಷಲ್
ADD Engineering Components saakshatv
Share on FacebookShare on TwitterShare on WhatsappShare on Telegram

ಕೊನೆಗೂ ನನಸಾಗುತ್ತಿದೆ ಎಡಿಡಿ ಇಂಜಿನಿಯರಿಂಗ್ ಕಂಪೆನಿಯ ಕನಸು..!
ನೆಲಮಂಗಲದಲ್ಲಿ ಎಡಿಡಿ ಕಂಪೆನಿಯಿಂದ ಹೈ ಎಂಡ್ ಕಟ್ಟಿಂಗ್ ಟೂಲ್ಸ್ ಸಲ್ಯೂಶನ್ಸ್ ಘಟಕ ಸ್ಥಾಪನೆ
ಎಡಿಡಿ ಕಂಪೆನಿಯಿಂದ ಯುದ್ಧ ವಿಮಾನಗಳ ಬಿಡಿ ಭಾಗ ತಯಾರಿಸುವ ಘಟಕ

ADD Engineering Components (India) Pvt saakshatvಎರಡು ವರ್ಷಗಳ ನಂತರ ಎಡಿಡಿ ಎಂಜಿನಿಯರಿಂಗ್ ಕಾಂಪೊನೆಂಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ನ ಕನಸು ಸಾಕಾರವಾಗುವ ಸಮಯ ಹತ್ತಿರ ಬಂದಿದೆ. ತುಮಕೂರಿನಲ್ಲಿರುವ ಮಶಿನ್ ಟೂಲ್ಸ್ ಪಾರ್ಕ್ ನಲ್ಲಿ ಎಡಿಡಿ ಎಂಜಿನಿಯರಿಂಗ್ ಕಾಂಪೊನೆಂಟ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಬಹುನಿರೀಕ್ಷಿತ ಯದ್ಧ ವಿಮಾನಗಳ ಬಿಡಿ ಭಾಗಗಳನ್ನು ತಯಾರಿಸಲು ಬಳಸಬಹುದಾದ ಹೈಎಂಡ್ ಕಟ್ಟಿಂಗ್ ಟೂಲ್ಸ್ ಸಲೂಶನ್ಸ್ ಘಟಕ ಸ್ಥಾಪನೆ ಮಾಡಲು ಎಲ್ಲಾ ಪೂರ್ವಸಿದ್ಧತೆ ಮಾಡಿಕೊಂಡಿದೆ. ಕಳೆದ ಎರಡು ವರ್ಷಗಳಿಂದ ಈ ಘಟಕ ಸ್ಥಾಪನೆಗಾಗಿ ತುಂಡು ಭೂಮಿ ನೀಡುವಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಭೂಮಿ ಮಂಜೂರು ಮಾಡಿಸಿಕೊಳ್ಳಲು ಸಂಸ್ಥೆಗೆ ಸಾಧ್ಯವಾಗಿರಲಿಲ್ಲ. ಆದರೆ, ರಕ್ಷಣಾ ಇಲಾಖೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಹಲವಾರು ಕ್ರಮಗಳ ಹಿನ್ನೆಲೆಯಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣದಡಿ ಎಡಿಡಿ ದೇಶೀಯವಾಗಿ ಉತ್ಪನ್ನಗಳನ್ನು ತಯಾರು ಮಾಡಲಿದೆ ಎಂಬ ಅಂಶವನ್ನು ಗಮನಿಸಿರುವ ಕರ್ನಾಟಕ ಉದ್ಯೋಗ ಮಿತ್ರ ಮತ್ತು ಕರ್ನಾಟಕ ಕೈಗಾರಿಕೆಗಳ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಇಲಾಖೆಗಳು ಜಂಟಿಯಾಗಿ ಎಡಿಡಿಗೆ ಘಟಕ ಸ್ಥಾಪನೆ ಮಾಡಲು ನೆರವಾಗುತ್ತಿವೆ. ಈ ಮೂಲಕ ಎರಡೂ ಸಂಸ್ಥೆಗಳ ಅಧಿಕಾರಿಗಳು ರಾಜ್ಯದಲ್ಲಿ ರಕ್ಷಣಾ ಘಟಕವನ್ನು ಸ್ಥಾಪನೆ ಮಾಡಲು ಎಡಿಡಿಗೆ ಬೆಂಬಲವಾಗಿ ನಿಂತಿರುವುದು ಸ್ವಾಗತಾರ್ಹವಾದ ಮತ್ತು ಶ್ಲಾಘನೀಯ ಬೆಳವಣಿಗೆಯಾಗಿದೆ. ನೆಲಮಂಗಲ ಕೈಗಾರಿಕಾ ಎಸ್ಟೇಟ್ ನಲ್ಲಿ ಘಟಕ ಸ್ಥಾಪನೆ ಮಾಡಲು ತುಂಡು ಭೂಮಿ ನೀಡುವಂತೆ ಕಂಪನಿಯು ಕಳೆದ ಎರಡು ವರ್ಷಗಳಿಂದ ಅರ್ಜಿ ಸಲ್ಲಿಸುತ್ತಾ ಬಂದಿತ್ತಾದರೂ ಕೆಲವು ಅಧಿಕಾರಶಾಹಿ ವರ್ಗದವರು ಇದರ ಬಗ್ಗೆ ಆಸಕ್ತಿಯನ್ನೇ ತೋರಲಿಲ್ಲ. ಆದರೆ, ಈಗ ಕರ್ನಾಟಕ ಉದ್ಯೋಗ ಮಿತ್ರ ಮತ್ತು ಕೆಐಎಡಿಬಿ ಸಂಸ್ಥೆಗಳು ತುಮಕೂರು ಮಶಿನ್ ಟೂಲ್ ಪಾರ್ಕ್ ನಲ್ಲಿ ಉದ್ಯಮ ಸ್ಥಾಪನೆಗೆಂದು ½ ಎಕರೆಯಷ್ಟು ವಿಸ್ತೀರ್ಣದ ಪ್ಲಾಟ್ ಅನ್ನು ಎಡಿಡಿಗೆ ಮಂಜೂರು ಮಾಡಲು ನಿರ್ಧರಿಸಿವೆ.
Tejas Mk.1 & Mk.1A saakshatvಈ ಬಗ್ಗೆ ಮಾತನಾಡಿದ ಎಇಸಿಪಿಎಲ್ ನಿರ್ದೇಶಕ ಎಲ್.ಗಿರೀಶ್ ಅವರು, “ಬೆಂಗಳೂರಿನಲ್ಲಿ ವಿನ್ಯಾಸ ಕೇಂದ್ರವನ್ನು ಸ್ಥಾಪನೆ ಮಾಡಿರುವುದು ಮತ್ತು ಯದ್ಧ ವಿಮಾನಗಳ ಬಿಡಿ ಭಾಗಗಳನ್ನು ತಯಾರಿಸಲು ಬಳಸಬಹುದಾದ ಹೈಎಂಡ್ ಕಟ್ಟಿಂಗ್ ಟೂಲ್ಸ್ ಸಲೂಶನ್ಸ್ ಘಟಕ ಸ್ಥಾಪನೆ ಮಾಡಲು ನಾನು ಆಸಕ್ತಿ ವಹಿಸಿರುವುದನ್ನು ಗಮನಿಸಿರುವ ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕರು ಇದೊಂದು ರಾಷ್ಟ್ರೀಯ ಹಿತಾಸಕ್ತಿಯನ್ನು ಹೊಂದಿರುವ ಯೋಜನೆಯಾಗಿದ್ದು, ಇದನ್ನು ಸಮಿತಿ ಮುಂದೆ ಪ್ರಸ್ತುತಪಡಿಸಿ ಭೂಮಿ ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ, ಈ ವಿಚಾರದಲ್ಲಿ ಕೆಐಎಡಿಬಿಯ ಮುಖ್ಯ ಕಾರ್ಯಕಾರಿ ಅಧಿಕಾರಿ(ಸಿಇಒ) ಮತ್ತು ಸದಸ್ಯ ಕಾರ್ಯದರ್ಶಿಗಳೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತುಮಕೂರು ಮಶಿನ್ ಟೂಲ್ ಪಾರ್ಕ್ ನಲ್ಲಿ ಭೂಮಿಯನ್ನು ಮಂಜೂರು ಮಾಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಆದೇಶವನ್ನು ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ’’ ಎಂದು ತಿಳಿಸಿದರು.
ಇದೇ ವೇಳೆ, ತುಮಕೂರಿನಲ್ಲಿ ಭೂಮಿಯನ್ನು ನೀಡಲು ಕೆಐಎಡಿಬಿ ಅಧಿಕಾರ ವರ್ಗವೂ ಸಕಾರಾತ್ಮಕವಾಗಿದೆ ಎಂದು ತಿಳಿಸಿರುವ ಗಿರೀಶ್, “ಘಟಕ ಸ್ಥಾಪನೆ ವಿಚಾರದಲ್ಲಿ ಆಗಿರುವ ವಿಳಂಬವನ್ನು ಸರ್ಕಾರ ನಮಗೆ ಆದಷ್ಟೂ ಶೀಘ್ರದಲ್ಲಿ ಪರ್ಯಾಯವಾಗಿ ಭೂಮಿಯನ್ನು ಮಂಜೂರು ಮಾಡಲಿದೆ ಎಂಬ ವಿಶ್ವಾಸವಿದೆ’’ ಎಂದಿದ್ದಾರೆ.
ಆತ್ಮ ನಿರ್ಭರ್ ಭಾರತ್ ನಿರ್ಮಾಣದ ಪರಿಕಲ್ಪನೆಯನ್ನು ಅನುಸರಿಸಿ `ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ಎಡಿಡಿ ಎಂಜಿನಿಯರಿಂಗ್ ತಯಾರಿಕಾ ಘಟಕವನ್ನು ಸ್ಥಾಪನೆ ಮಾಡಲು ಉದ್ದೇಶಿಸಿದೆ.
ADD Engineering Components (India) Pvt saakshatv“ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗುವ ರಕ್ಷಣಾ ಕ್ಷೇತ್ರದ ಕನಸನ್ನು ಸಾಕಾರಗೊಳಿಸುವ ಪ್ರಕ್ರಿಯೆಯಲ್ಲಿ ನಾವೂ ಭಾಗಿಯಾಗಬೇಕೆಂದು ಬಯಸಿದ್ದೇವೆ. ಈ ನಿಟ್ಟಿನಲ್ಲಿ ನಾವು ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದು, ದೇಶಕ್ಕೆ ಅಡ್ವಾನ್ಸ್ಡ್ ಇಂಟಗ್ರೇಶನ್ ಟೆಕ್ನಾಲಾಜಿ(ಎಐಟಿ)ಯಂತಹ ತಂತ್ರಜ್ಞಾನವನ್ನು ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ವಿಶ್ವದ ಅತ್ಯುತ್ತಮ ಎಫ್-35 ಯುದ್ಧ ವಿಮಾನಗಳನ್ನು ತಯಾರಿಸುವ ಲಾಕ್ಹೀಡ್ ಮಾರ್ಟಿನ್ ಜೊತೆಗೆ ಅಮೆರಿಕಾ ಮೂಲದ ಅಡ್ವಾನ್ಸ್ಡ್ ಇಂಟಗ್ರೇಶನ್ ಟೆಕ್ನಾಲಾಜಿ(ಎಐಟಿ) ಕಾರ್ಯನಿರ್ವಹಿಸುತ್ತಿದೆ’’ ಎಂದು ಅವರು ವಿವರಿಸಿದರು.
ಎಇಸಿಪಿಎಲ್ ಬೆಂಗಳೂರಿನಲ್ಲಿ 2015 ರಲ್ಲಿ ತನ್ನ ಡಿಸೈನ್ ಸೆಂಟರ್ ಅನ್ನು ಆರಂಭಿಸಿತ್ತು. ಪ್ರಮುಖವಾಗಿ ಕಟ್ಟಿಂಗ್ ಟೂಲ್ಸ್ ಇಂಡಸ್ಟ್ರಿಯಲ್ಲಿ ಮೂರು ದಶಕಗಳಿಗೂ ಕಾಲ ಸೇವೆ ಸಲ್ಲಿಸಿ ನಿಷ್ಣಾತರಾಗಿರುವ ಮತ್ತು ಹರ್ಟೆಲ್ ಜಿಎಂಬಿಎಚ್ ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ನೊರ್ಬರ್ಟ್ ಕ್ರೆಲ್ಲರ್, ನಾಸಾದಲ್ಲಿ ಕೆಲಸ ಮಾಡಿರುವ ವೈಮಾಂತರಿಕ್ಷ ವಿಷಯದಲ್ಲಿ ಡಾಕ್ಟರೇಟ್ ಪಡೆದಿರುವ ಡಾ.ವರ್ನರ್ ಗ್ರೈಕ್ಸಾ, ಮೆಟಲ್ ಕಟಿಂಗ್ ಸಲೂಶನ್ಸ್ ನಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ ಅನುಭವವಿರುವ ಮತ್ತು ರಷ್ಯಾದಲ್ಲಿ ಎಡಿಡಿ ಎಂಜಿನಿಯರಿಂಗ್ ಅನ್ನು ಮುನ್ನಡೆಸುತ್ತಿರುವ ಅಲೆಕ್ಸಾಂಡರ್ ಲೊಕ್ಟೆವ್ ಮತ್ತು ವಿಶ್ವದ ಹೆಸರಾಂತ ಗೇರ್ ತಯಾರಿಕೆಯ ನಿಪುಣರಾಗಿರುವ ಡಾ.ಉಡೋ ವೈಗೆಲ್ ಹಾಗೂ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಎಲ್.ಗಿರೀಶ್ ಅವರು ಎಇಸಿಪಿಎಲ್ ನ ವ್ಯವಸ್ಥಾಪಕ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಉತ್ಪಾದನಾ ಘಟಕವನ್ನು ಆರಂಭಿಸಲು ಮುನ್ನಡಿ ಇಟ್ಟಿದ್ದಾರೆ.
Tejas Mk.1 & Mk.1A saakshatvತೇಜಸ್ ಎಂಕೆ1 ಮತ್ತು ತೇಜಸ್ ಎಂಕೆ2ನಂತಹ ಯುದ್ಧ ವಿಮಾನಗಳಿಗೆ ನಿರ್ಣಾಯಕವಾದ ಬಿಡಿಭಾಗಗಳನ್ನು ತಯಾರಿಸಲು ಅಗತ್ಯವಾಗಿರುವ ಕಟ್ಟಿಂಗ್ ಟೂಲ್ಸ್ ತಯಾರಿಸುವುದು ಮತ್ತು ಪೂರೈಕೆ ಮಾಡುವ ಘಟಕವನ್ನು ತಯಾರಿಸಲು ಎಡಿಡಿ ಎಂಜಿನಿಯರಿಂಗ್ ಅರ್ಜಿ ಸಲ್ಲಿಸಿತ್ತು. ಈ ವಿಚಾರದಲ್ಲಿ ಇಡೀ ರಕ್ಷಣಾ ಸಚಿವಾಲಯವೇ ಗಿರೀಶ್ ಅವರ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿದ್ದಾದರೂ, ಭೂಮಿ ಮಂಜೂರು ಮಾಡುವ ವಿಚಾರದಲ್ಲಿ ಮಾತ್ರ ಕೆಎಸ್ಎಸ್ಐಡಿಸಿ ಮೌನಕ್ಕೆ ಶರಣಾಗಿ, ಭೂಮಿ ಮಂಜೂರು ಮಾಡುವ ಗೊಡವೆಗೇ ಹೋಗಲಿಲ್ಲ.
ಆದರೆ, ಈಗ ಕರ್ನಾಟಕ ಉದ್ಯೋಗ ಮಿತ್ರ ಮತ್ತು ಕೆಐಎಡಿಬಿ ಅಧಿಕಾರಿಗಳು ಇದೊಂದು ರಾಷ್ಟ್ರೀಯ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ್ದು ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿರುವ ಯೋಜನೆ ಎಂಬುದನ್ನು ಮನಗಂಡು ಎಡಿಡಿ ಎಂಜಿನಿಯರಿಂಗ್ ಗೆ ತುಮಕೂರು ಮಶಿನ್ ಟೂಲ್ ಪಾರ್ಕ್ ನಲ್ಲಿ ಭೂಮಿಯನ್ನು ಮಂಜೂರು ಮಾಡಲು ಕ್ರಮ ತೆಗೆದುಕೊಳ್ಳುತ್ತಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ.

Related posts

Road Safety Awareness

Bng – ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

July 4, 2026
kylian mbappe

fifaworldcup-2026- ಮೈದಾನದಲ್ಲಿ ರಕ್ಕಸ.. ಬಡವರ ಪಾಲಿಗೆ ದೇವದೂತ.. ಫುಟ್‌ಬಾಲ್ ಜಗತ್ತಿನ ಭವಿಷ್ಯದ ಮಹಾರಾಜ..!

July 4, 2026
Tags: #saakshatvadd-engineering-componentsbengalurukarnatakaKSSIDCNelamangala Industrial AreaTejasTejas Mark 1ATumakuru Machine Tool Park.
ShareTweetSendShare
Join us on:

Related Posts

Road Safety Awareness

Bng – ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

by admin
July 4, 2026
0

​• ಸುರಕ್ಷಿತ ಸಂಚಾರಕ್ಕಾಗಿ ನೂತನ ಗ್ಯಾಲರಿ ಉದ್ಘಾಟನೆ * ವಾಸ್ತವ ಟ್ರಾಫಿಕ್ ಪರಿಸ್ಥಿತಿಯ ಪ್ರಾಯೋಗಿಕ ಕಲಿಕೆ * 'ಟ್ರಾಫಿಕ್ ಡಿಸೈನ್ ಚಾಲೆಂಜ್'ನ ಸಬ್ಮಿಷನ್ ಮುಕ್ತಾಯ * ಮುಂದಿನ...

kylian mbappe

fifaworldcup-2026- ಮೈದಾನದಲ್ಲಿ ರಕ್ಕಸ.. ಬಡವರ ಪಾಲಿಗೆ ದೇವದೂತ.. ಫುಟ್‌ಬಾಲ್ ಜಗತ್ತಿನ ಭವಿಷ್ಯದ ಮಹಾರಾಜ..!

by admin
July 4, 2026
0

ಕಾಲಿಗೆ ಸ್ಟಡ್ಸ್ ಕಟ್ಕೊಂಡು.. ಗಂಟೆಗೆ 38 ಕಿಲೋಮೀಟರ್ ವೇಗದಲ್ಲಿ ಓಡಾಡಿಕೊಂಡು.. ಚೆಂಡನ್ನು ಡ್ರಿಬ್ಲಿಂಗ್ ಮಾಡುತ್ತಾ.. ಎದುರಾಳಿ ಆಟಗಾರರನ್ನು ವಂಚಿಸುವ ಮಾಯಾಕಾರ..! ಫುಟ್‍ಬಾಲ್ ಅಂಗಣದ ಹಸಿರು ಹುಲ್ಲಿನ ಅಂಗಣದ...

ಬಿಡದಿ ಟೌನ್‌ಶಿಪ್ ದಂಗಲ್:ನಿಮ್ಮಿಂದ ರಿಪ್ಲೈ ಬಂದಿಲ್ಲ- ಬಿಡದಿ ರೈತರ ಕಣ್ಣೀರು ಒರೆಸಲು ಬನ್ನಿ: ಡಿಕೆಶಿಗೆ ಎಚ್‌ಡಿಕೆ ಖಡಕ್ ಪತ್ರ, ಜೂನ್ 27ಕ್ಕೆ ಮಹಾ ಮುಖಾಮುಖಿ?

ಮತದಾರರ ಹುಂಡಿ ಲೂಟಿಗೆ ಕಾಂಗ್ರೆಸ್ ಸ್ಕೆಚ್ -ಅಧಿಕಾರಿಗಳು ಸರ್ಕಾರದ ಗುಲಾಮರಾಗಿದ್ದಾರೆ:ವಿಡಿಯೋ ಸಾಕ್ಷಿ ಸಮೇತ ಹೆಚ್ ಡಿ ಕುಮಾರಸ್ವಾಮಿ ಗುಡುಗು!

by Shwetha
July 4, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಈಗ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ಸರ್ಕಾರವು ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣಾ ಅಕ್ರಮ ಎಸಗುತ್ತಿದೆ ಎಂದು...

ಪ್ರಜಾಪ್ರಭುತ್ವದ ಕೊನೆಯ ಭರವಸೆ ನ್ಯಾಯಾಂಗ ಮಾತ್ರ- ನ್ಯಾಯಾಂಗ ಸ್ಪಂದಿಸದಿದ್ದರೆ ಗಣರಾಜ್ಯದ ಪತನ ನಿಶ್ಚಿತ: ಸಿಜೆಐ ಸೂರ್ಯ ಕಾಂತ್ ಅವರಿಗೆ ಇಂಡಿಯಾ ಒಕ್ಕೂಟದ ಗಂಭೀರ ಎಚ್ಚರಿಕೆ!

ಪ್ರಜಾಪ್ರಭುತ್ವದ ಕೊನೆಯ ಭರವಸೆ ನ್ಯಾಯಾಂಗ ಮಾತ್ರ- ನ್ಯಾಯಾಂಗ ಸ್ಪಂದಿಸದಿದ್ದರೆ ಗಣರಾಜ್ಯದ ಪತನ ನಿಶ್ಚಿತ: ಸಿಜೆಐ ಸೂರ್ಯ ಕಾಂತ್ ಅವರಿಗೆ ಇಂಡಿಯಾ ಒಕ್ಕೂಟದ ಗಂಭೀರ ಎಚ್ಚರಿಕೆ!

by Shwetha
July 4, 2026
0

ನವದೆಹಲಿ: ದೇಶದ ಚುನಾವಣಾ ವ್ಯವಸ್ಥೆಯಲ್ಲಿ ವ್ಯವಸ್ಥಿತವಾಗಿ ಅಕ್ರಮಗಳು ನಡೆಯುತ್ತಿವೆ ಎಂದು ಗಂಭೀರವಾಗಿ ಆರೋಪಿಸಿರುವ ಇಂಡಿಯಾ ವಿರೋಧ ಪಕ್ಷಗಳ ಒಕ್ಕೂಟವು, ಈ ಆತಂಕಗಳಿಗೆ ನ್ಯಾಯಾಂಗವು ತಕ್ಷಣವೇ ಸ್ಪಂದಿಸದಿದ್ದರೆ ಭಾರತೀಯ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

₹2,000 ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಾಧ್ಯತೆ; ಶೀಘ್ರದಲ್ಲೇ ಮಾರ್ಗಸೂಚಿ

by Shwetha
July 4, 2026
0

ರಾಜ್ಯದ ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತಪಟ್ಟವರು ಹಾಗೂ ಆದಾಯ ತೆರಿಗೆ (IT) ಮತ್ತು GST ಪಾವತಿದಾರರ ಖಾತೆಗಳಿಗೆ ಸಹ ಹಣ ಜಮೆಯಾಗಿರುವ ಪ್ರಕರಣಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram