`ಅಮಿತ್ ಶಾ ಬಿಜೆಪಿ ಸರ್ಕಾರ ಇರುತ್ತೆ ಎಂದಿದ್ದಾರೆ, ಬಿಎಸ್ ವೈ ಸಿಎಂ ಅಂತ ಹೇಳಿಲ್ಲ’
ಹಾವೇರಿ :`ಅಮಿತ್ ಶಾ ಬಿಜೆಪಿ ಸರ್ಕಾರ ಇರುತ್ತೆ ಎಂದಿದ್ದಾರೆ, ಬಿಎಸ್ ವೈ ಸಿಎಂ ಅಂತ ಹೇಳಿಲ್ಲ’ ಎಂದು ಬಿಜೆಪಿ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಕೆಲ ದಿನಗಳಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ನಾಯಕತ್ವ ಬದಲಾವಣೆ, ಕೊರೊನಾ ವಿಚಾರದಲ್ಲಾದ ಯಡವಟ್ಟು, ಸಂಪುಟ ವಿಸ್ತರಣೆ, ಸಿಎಂ ಪುತ್ರ ಬಿ.ವೈ ವಿಜಯೇಂದ್ರ ವಿಚಾರವಾಗಿ ಯತ್ನಾಳ್ ಹೊಸ ಹೊಸ ಬಾಂಬ್ ಗಳನ್ನ ಸಿಡಿಸುತ್ತಲೇ ಇದ್ದಾರೆ.
ಮೊನ್ನೆ ಸಂಕ್ರಾಂತಿ ಬಳಿಕ ಸಿಎಂ ಬದಲಾವಣೆ ಆಗಲಿದೆ ಎಂದಿದ್ದ ಯತ್ನಾಳ್, ಇದೀಗ ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ “ಇನ್ನೂ ಮುಂದಿನ ಎರಡೂವರೆ ವರ್ಷ ಬಿಜೆಪಿ ಅಧಿಕಾರದಲ್ಲಿ ಇರುತ್ತದೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
ಅಮಿತ್ ಶಾ ಅವರು ಇನ್ನೂ 2.5 ವರ್ಷ ಬಿಜೆಪಿ ಸರ್ಕಾರವಿರುತ್ತದೆ ಎಂದಿದ್ದಾರೆ. ಆದರೆ, ಯಡಿಯೂರಪ್ಪ ಸಿಎಂ ಆಗಿರುತ್ತಾರೆ ಎಂದು ಹೇಳಿಲ್ಲ ಎಂದಿದ್ದಾರೆ.
ಮಂತ್ರಿಸ್ಥಾನ ತಪ್ಪಿದ ಹಿನ್ನೆಲೆ ಯತ್ನಾಳ್ ಹೀಗೆ ಮಾತನಾಡುತ್ತಿದ್ದಾರೆ ಎಂಬ ಸ್ವಪಕ್ಷಿಯರ ಹೇಳಿಕೆಗಳ ಬಗ್ಗೆ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿರುವವರೆಗೂ ನಾನು ಮಂತ್ರಿ ಆಗುವುದಿಲ್ಲ.
ನಾನು ಸಚಿವ ಸ್ಥಾನ ಕೇಳಿದವನಲ್ಲ. ಯಾವ್ಯಾವ ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲವೋ, ಅಂತಹ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡುವಂತೆ ಹೇಳಿದ್ದೆ ಅಷ್ಟೇ.
ಇನ್ನು ನನಗೆ ಸಚಿವ ಸ್ಥಾನ ಕೊಟ್ಟರೂ ತೆಗೆದುಕೊಳ್ಳುವುದಿಲ್ಲ ಎಂದು ಶಪಥ ಮಾಡಿದರು.
.Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









