ADVERTISEMENT
Thursday, May 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಐಪಿಎಲ್ 2020- ಫೈನಲ್ ಗೆ ಎಂಟ್ರಿಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್.. ಎಸ್ ಎರ್ ಎಚ್ ಹೋರಾಟ ಅಂತ್ಯ..!

admin by admin
November 9, 2020
in IPL 2020, Newsbeat, ಕ್ರೀಡೆ
shikhar dhavan shreyas iyer ipl delhi capitals saakshatv
Share on FacebookShare on TwitterShare on WhatsappShare on Telegram

ಐಪಿಎಲ್ 2020- ಫೈನಲ್ ಗೆ ಎಂಟ್ರಿಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್.. ಎಸ್ ಎರ್ ಎಚ್ ಹೋರಾಟ ಅಂತ್ಯ..!

shikhar dhavan ipl 2020 dc saakshatv2020ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್ ಎಂಟ್ರಿಯಾಗಿದೆ.
ಎರಡನೇ ಅರ್ಹತಾ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 17 ರನ್ ಗಳಿಂದ ಸನ್ ರೈಸರ್ಸ್ ಹೈದ್ರಬಾದ್ ತಂಡವನ್ನು ಪರಾಭವಗೊಳಿಸಿತ್ತು.
ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
ಅಚ್ಚರಿಯ ನಿರ್ಧಾರದೊಂದಿಗೆ ಶಿಖರ್ ಧವನ್ ಜೊತೆ ಮಾರ್ಕಸ್ ಸ್ಟೋನಿಸ್ ಅವರು ಇನಿಂಗ್ಸ್ ಆರಂಭಿಸಿದ್ರು.
ಮೊದಲ ವಿಕೆಟ್ ಗೆ ಮಾರ್ಕಸ್ ಸ್ಟೋನಿಸ್ ಮತ್ತು ಶಿಖರ್ ಧವನ್ ಅವರು 86 ರನ್ ಗಳನ್ನು ಕಲೆ ಹಾಕಿದ್ರು.
ಈ ಹಂತದಲ್ಲಿ ಮಾರ್ಕಸ್ ಸ್ಟೋನಿಸ್ ಅವರು 27 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ನ ನೆರವಿನಿಂದ 38 ರನ್ ಗಳಿಸಿ ರಶೀದ್ ಖಾನ್‍ಗೆ ವಿಕೆಟ್ ಒಪ್ಪಿಸಿದ್ರು.
ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಅವರು 21 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಬಳಿಕ ಶಿಮ್ರೋನ್ ಹೆಟ್ಮೇರ್ ಮತ್ತು ಶಿಖರ್ ಧವನ್ ಅವರು 56 ರನ್ ಕಲೆ ಹಾಕಿದ್ರು.
shreyas iyer kagiso rabada ipl 2020 saakshatvಈ ನಡುವೆ ಫಾರ್ಮ್ ಕಂಡುಕೊಂಡ ಶಿಖರ್ ಧವನ್ ಎಸ್ ಆರ್ ಎಚ್ ಬೌಲರ್ ಗಳಿಗೆ ಸವಾಲಾಗಿ ಪರಿಣಮಿಸಿದ್ರು.
ಆದ್ರೆ ಶಿಖರ್ ಧವನ್ ಅವರು 50 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಮನಮೋಹಕ 78 ರನ್ ಸಿಡಿಸಿದ್ರು.
ಶಿಮ್ರೋನ್ ಹೆಟ್ಮೇರ್ ಅವರು 22 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ನ ನೆರವಿನಿಂದ ಅಜೇಯ 42 ರನ್ ಗಳಿಸಿದ್ರು.
ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 189 ರನ್ ದಾಖಲಿಸಿತು.
ಸವಾಲನ್ನು ಬೆನ್ನಟ್ಟಿದ್ದ ಸನ್ ರೈಸರ್ಸ್ ಹೈದ್ರಬಾದ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತ್ತು.
ಡೇವಿಡ್ ವಾರ್ನರ್ ಅವರು 2 ರನ್ ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದ್ರು. ನಂತರ ಪ್ರಿಯಮ್ ಗರ್ಗ್ 17 ರನ್ ಗಳಿಸಿ ಮಾರ್ಕಸ್ ಸ್ಟೋನಿಸ್‍ಗೆ ಕ್ಲೀನ್ ಬೌಲ್ಡಾದ್ರು.
ಬಳಿಕ ಮನೀಷ್ ಪಾಂಡೆ ಭರವಸೆ ಮೂಡಿಸಿದ್ರೂ 21 ರನ್ ಗೆ ಸೀಮಿತವಾದ್ರು.
ನಂತರ ಕೇನ್ ವಿಲಿಯಮ್ಸನ್ ಮತ್ತು ಜೇಸನ್ ಹೋಲ್ಡರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಪಾಯದ ಸೂಚನೆಯನ್ನು ನೀಡಿದ್ರು.
devid warner srh ipl 2020 saakshatvಆದ್ರೆ ಜೇಸನ್ ಹೋಲ್ಟರ್ 11 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಈ ನಡುವೆ ಕೇನ್ ವಿಲಿಯಮ್ಸನ್ ಅವರು ತಾಳ್ಮೆಯ ಆಟವಾಡಿ ರನ್ ಗತಿ ಏರಿಸುತ್ತಿದ್ರು. ಇದಕ್ಕೆ ಅಬ್ದುಲ್ ಸಮಾದ್ ಅವರು ಸ್ಫೋಟಕ ಆಟವಾಡಿ ಗೆಲುವಿನ ಆಸೆ ಮೂಡಿಸಿದ್ರು.
ಆದ್ರೆ 45 ಎಸೆತಗಳಲ್ಲಿ 5 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ಸಹಾಯದಿಂದ 67 ರನ್ ಗಳಿಸಿದ್ದ ಕೇನ್ ವಿಲಿಯಮ್ಸನ್ ಅವರು ಸ್ಟೋನಿಸ್‍ಗೆ ಬಲಿಯಾದ್ರು.
ಹಾಗೇ ಅಬ್ದುಲ್ ಸಮಾದ್ 16 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‍ನ ಸಹಾಯದಿಂದ 33 ರನ್‍ಗೆ ಸುಸ್ತಾದ್ರು.
ನಂತರ ರಶೀದ್ ಖಾನ್, ಶ್ರೀವಾಸ್ತವ್ ಗೋಸ್ವಾಮಿ ರಬಾಡ ಎಸೆತಗಳಿಗೆ ನಿರುತ್ತರರಾದ್ರು.
ಅಂತಿಮವಾಗಿ ಸನ್ ರೈಸರ್ಸ್ ಹೈದ್ರಬಾದ್ ತಂಡ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಲಷ್ಟೇ ಶಕ್ತವಾಯ್ತು. 17 ರನ್ ಗಳಿಂದ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಬಾರಿ ಫೈನಲ್ ಗೆ ಎಂಟ್ರಿಯಾಯ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಾಗಿಸೊ ರಬಾಡ ನಾಲ್ಕು ವಿಕೆಟ್ ಪಡೆದ್ರೆ, ಮಾರ್ಕಸ್ ಸ್ಟೋನಿಸ್ ಮೂರು ವಿಕೆಟ್ ಪಡೆದ್ರು. ಆಲ್ ರೌಂಡ್ ಆಟವನ್ನಾಡಿದ ಮಾರ್ಕಸ್ ಸ್ಟೋನಿಸ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.

Related posts

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

May 7, 2026
ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

May 7, 2026
Tags: #devid warner#Kagiso Rabada#Marcus Stoinis#saakshatv#shikhar dhavanabdulu samaddelhi capitalsIndian Premier LeagueIPL 2020Manish PandeyShreyas Iyer.SunRisers Hyderabad
ShareTweetSendShare
Join us on:

Related Posts

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

by Shwetha
May 7, 2026
0

ಚೆನ್ನೈ: ತಮಿಳುನಾಡಿನ ರಾಜಕೀಯ ಚಿತ್ರಣ ಈಗ ಸಂಪೂರ್ಣವಾಗಿ ಬದಲಾಗಿದೆ. ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ತಮಿಳುಗ ವೆಟ್ರಿ ಕಳಗಂ ಅಂದರೆ ಟಿವಿಕೆ ಪಕ್ಷಕ್ಕೆ ಸರ್ಕಾರ...

ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

by Shwetha
May 7, 2026
0

ಪಶ್ಚಿಮ ಬಂಗಾಳದ ರಾಜಕೀಯ ಕಣದಲ್ಲಿ ಈಗ ಬಿರುಗಾಳಿ ಎದ್ದಿದೆ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆಯೇ ಮಮತಾ ಬ್ಯಾನರ್ಜಿ ಸರ್ಕಾರದ ಪ್ರಭಾವಿ ಅಧಿಕಾರಿಗಳ ಆಟಕ್ಕೆ ಬ್ರೇಕ್ ಬಿದ್ದಿದೆ ಮಮತಾ...

ಅಜ್ಜನಂತೆಯೇ ಅಜಾತಶತ್ರು ಆಗುವುದೇ ನನ್ನ ಗುರಿ, ದಾವಣಗೆರೆ ದಕ್ಷಿಣದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ:  ಸಮರ್ಥ್ ಶಾಮನೂರು

ಅಜ್ಜನಂತೆಯೇ ಅಜಾತಶತ್ರು ಆಗುವುದೇ ನನ್ನ ಗುರಿ, ದಾವಣಗೆರೆ ದಕ್ಷಿಣದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ: ಸಮರ್ಥ್ ಶಾಮನೂರು

by Shwetha
May 7, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ಈ ಬಾರಿ ಐತಿಹಾಸಿಕ ಜಯ ತಂದುಕೊಟ್ಟಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡುವ ಸಾಮರ್ಥ್ಯ ನನ್ನಲ್ಲಿದೆ...

ಬಂಗಾಳದ ಮಣ್ಣಲ್ಲಿ ಅರಳಿದ ಕೇಸರಿ ಕಮಲ: ಪ್ರಧಾನಿ ಮೋದಿ ವಿಶ್ವನಾಯಕ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಬಂಗಾಳದ ಮಣ್ಣಲ್ಲಿ ಅರಳಿದ ಕೇಸರಿ ಕಮಲ: ಪ್ರಧಾನಿ ಮೋದಿ ವಿಶ್ವನಾಯಕ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

by Shwetha
May 7, 2026
0

ಭಾರತದ ರಾಜಕೀಯ ನಕಾಶೆಯಲ್ಲಿ ಪಶ್ಚಿಮ ಬಂಗಾಳದ ಗೆಲುವು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಭಾರತೀಯ ಜನತಾ ಪಕ್ಷವು ಬಂಗಾಳದ ನೆಲದಲ್ಲಿ ಸಾಧಿಸಿದ ಈ ಅಸಾಧಾರಣ ವಿಜಯವು ಕೇವಲ ಭಾರತಕ್ಕೆ...

ಡಿಕೆಶಿಗೆ ಸಿಗುತ್ತಾ ಮುಖ್ಯಮಂತ್ರಿ ಪಟ್ಟದ ಗಿಫ್ಟ್? ಡಿಕೆ ಸುರೇಶ್ ಹೇಳಿಕೆಯ ಹಿಂದಿನ ನಿಗೂಢತೆ ಏನು?

ಡಿಕೆಶಿಗೆ ಸಿಗುತ್ತಾ ಮುಖ್ಯಮಂತ್ರಿ ಪಟ್ಟದ ಗಿಫ್ಟ್? ಡಿಕೆ ಸುರೇಶ್ ಹೇಳಿಕೆಯ ಹಿಂದಿನ ನಿಗೂಢತೆ ಏನು?

by Shwetha
May 7, 2026
0

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 64ನೇ ಜನ್ಮದಿನದ ಸಂಭ್ರಮಕ್ಕೆ ಈ ಬಾರಿ ದೆಹಲಿ ಹೈಕಮಾಂಡ್‌ನಿಂದ ವಿಶೇಷ ಕೊಡುಗೆ ಸಿಗುವ ಸಾಧ್ಯತೆ ಇದೆ ಎಂಬ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram