ಕೋಲಾರ: ಪ್ರಧಾನಿಮಂತ್ರಿ ಮೋದಿ ಇಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಜೊತೆಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ಚರ್ಚೆ ನಡೆಸಿದ್ದಾರೆ. ರೈತರೊಂದಿಗಿನ ಸಂವಾದದಲ್ಲಿ ಕರ್ನಾಟಕದಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಜುಂಜನಹಳ್ಳಿ ಗ್ರಾಮದ ಪ್ರಗತಿಪರ ರೈತ ಚಂದ್ರಪ್ಪ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ.

ಬೆಂಗಳೂರಿನ ನಬಾರ್ಡ್ ಆಡಳಿತ ಕಚೇರಿಯಲ್ಲಿ ನೇರ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ನಬಾರ್ಡ್ ಅಧಿಕಾರಿಗಳು ಕೋಲಾರದ ಪ್ರಗತಿಪರ ರೈತ ಚಂದ್ರಪ್ಪ ಅವರನ್ನು ಆಯ್ಕೆ ಮಾಡಿದ್ದಾರೆ. ಮೂಲತಃ ರೈತ ಕುಟುಂಬ ಹಿನ್ನೆಲೆ ಹೊಂದಿರುವ ಚಂದ್ರಪ್ಪ, ತಮ್ಮ 10 ಎಕರೆ ಪ್ರದೇಶದಲ್ಲಿ ಆಲೂಗಡ್ಡೆ, ಟೊಮೆಟೊ, ಚಿಕ್ಕಡಿಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನ, ಮಳೆಯಾಶ್ರಿತ ನೀರಲ್ಲಿ ಹಾಗು ಬೋರ್‍ವೆಲ್ ಸಹಾಯದಿಂದ ಬೆಳೆಗಳನ್ನ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸ್ತಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಿಗುವ ವಾರ್ಷಿಕ 12 ಸಾವಿರ ಸಹಾಯದನದಿಂದ ಆಲೂಗಡ್ಡೆ ಬಿತ್ತನೆಬೀಜ ಹಾಗು ಟೊಮೆಟೊ ಬೆಳೆ ಹಾಕಲು ಸಹಕಾರಿಯಾಗಿದೆ ಎನ್ನುತ್ತಾರೆ ಚಂದ್ರಪ್ಪ.

ಪ್ರಧಾನ ಮಂತ್ರಿ ಮೋದಿಯವರ ಜೊತೆಗೆ ನೇರಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ಇದು ನನ್ನ ಪಾಲಿನ ಅದೃಷ್ಟ ಎಂದು ರೈತ ಚಂದ್ರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಗೆ ನದಿ ಜೋಡಣೆ ಕಾರ್ಯಕ್ರಮದಡಿ ನೀರಾವರಿ ಸೌಲಭ್ಯ ಕಲ್ಪಿಸುವ ಮನವಿಯನ್ನ ಮಾಡುವುದಾಗಿ ಚಂದ್ರಪ್ಪ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








