(ROBERT)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಯಾವಾಗ ರಿಲೀಸ್ ಆಗಲಿದೆ ಎಂದು ದಚ್ಚು ಅಭಿಮಾನಿಗಳು ಕಾದುಕುಂತಿದ್ದಾರೆ. ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಅಕ್ಟೋಬರ್ 15ರ ನಂತರ ಚಿತ್ರಮಂದಿರಗಳು ತೆರೆಯಲು ಅನುಮತಿ ಸಿಕ್ಕಿದೆ. ಹೀಗಾಗಿ ರಾಬರ್ಟ್ ಸಿನೆಮಾ ರಿಲೀಸ್ ಆಗುವ ದಿನಾಂಕ ಘೋಷಣೆಯಾಗಬುದೆಂಬ ನಿರೀಕ್ಷೆಯಲ್ಲಿ ಡಿ ಬಾಸ್ ಅಭಿಮಾನಿಗಳಿದ್ದಾರೆ.
ಇನ್ನೂ ರಾಬರ್ಟ್(ROBERT) ಚಿತ್ರದ ಟೀಸರ್ 5 ಮಿಲಿಯನ್ ವೀವ್ಸ್ ಪಡೆದುಕೊಂಡಿದ್ದು, ಅಭಿಮಾನಿಗಳಿಗೆ ಡಿ ಬಾಸ್ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.
ರಾಬರ್ಟ್ ಟೀಸರ್ 5 ಮಿಲಿಯನ್ ವೀಕ್ಷಣೆ ಕಂಡ ಸಂತಸ ವ್ಯಕ್ತಪಡಿಸಿರುವ ದಚ್ಚು ”ರಾಬರ್ಟ್ ಚಿತ್ರದ ಟೀಸರ್ 5 ಮಿಲಿಯನ್ (5Millon Views) ಗೆ ಕಾರಣರಾದ ಪ್ರತಿಯೊಬ್ಬರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು ನಿಮ್ಮ ದಾಸ ದರ್ಶನ್” ಎಂದು ಟ್ವೀಟ್ ಮಾಡಿದ್ದಾರೆ.
ರಾಬರ್ಟ್ ಟೀಸರ್ ಬಿಡುಗಡೆಯಾಗಿ ಏಳು ತಿಂಗಳು ಕಳೆದಿದೆ. ಫೆಬ್ರವರಿ 16 ರಂದು ಈ ಟೀಸರ್ ರಿಲೀಸ್ ಆಗಿತ್ತು.
ಈ ಟೀಸರ್ 2 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಸಿಕ್ಕಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ನಿರ್ಮಿಸಿದ್ದಾರೆ.
ಆಶಾ ಭಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದಾರೆ.
“ಕಾಲವೇ ಮೋಸಗಾರ” ಚಿತ್ರದ ಡಬ್ಬಿಂಗ್ ರೈಟ್ಸ್ ಗೆ ಡಿಮ್ಯಾಂಡೋ ಡಿಮ್ಯಾಂಡು..!
ಇನ್ನೂ ಮತ್ತೊಂದು ಖುಷಿ ವಿಚಾರ ಅಂದ್ರೆ ಅಕ್ಟೋಬರ್ 9ಕ್ಕೆ ಡಿ ಬಾಸ್ ಅಭಿಮಾನಿಗಳಿಗೆ ರಾಬರ್ಟ್ ತಂಡ ಭರ್ಜರಿ ಗಿಫ್ಟ್ ನೀಡಲು ತಯಾರಿ ನಡೆಸಿದೆ.
ಈಗಾಗಲೇ ಹಾಡುಗಳ ಮೂಲಕ ಬಹಳ ಹೈಪ್ ಕ್ರಿಯೇಟ್ ಮಾಡಿರುವ “ರಾಬರ್ಟ್” ಅಕ್ಟೋಬರ್ 9ಕ್ಕೆ ಹೊಸ ಪೋಸ್ಟರ್ ಬಿಡುಗಡೆ ಮಾಡಲಿದೆ.
ನಿರ್ದೇಶಕ ತರುಣ್ ಸುಧೀರ್ ಹುಟ್ಟುಹಬ್ಬದ ಹಿನ್ನೆಲೆ ಅಕ್ಟೋಬರ್ 9ಕ್ಕೆ ರಾಬರ್ಟ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಪ್ರಕಟಿಸಿದ್ದಾರೆ.
https://www.youtube.com/watch?v=uKaDMCQxg2Y
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel