(vijaya reddy)
ನಾ ನಿನ್ನ ಮರೆಯಲಾರೆ, ಮಯೂರ, ಶ್ರೀನಿವಾಸ ಕಲ್ಯಾಣ, ಗಂಧದ ಗುಡಿ, ಭಕ್ತ ಪ್ರಹಲ್ಲಾದ ನೀ ನನ್ನ ಗೆಲ್ಲಲಾರೆ ಅಂತಹ ಅತ್ಯಬ್ಧುತ ಸಿನಿಮಾಗಳ ಸೂತ್ರದಾರ ಖ್ಯಾತ ಸಿನಿಮಾ ನಿರ್ದೇಶಕ ವಿಜಯ ರೆಡ್ಡಿ (vijaya reddy) ಅವರು ಇಂದು ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ.
ಕನ್ನಡಕ್ಕೆ ಸ್ಮರಣೀಯ ಚಿತ್ರಗಳನ್ನ ನೀಡಿದ್ದ 84 ವರ್ಷದ ವಿಜಯ್ ರೆಡ್ಡಿ ಅವರು ಸುಮಾರು 40 ಕನ್ನಡ ಸಿನಿಮಾಗಳನ್ನ ನಿರ್ದೇಶಿದ್ದರು.
ಇದರ ಹೊರತಾಗಿ ತೆಲುಗು, ತಮಿಳುಗಳಲ್ಲಿ ಸಹ ಅವರು ಸಿನಿಮಾಗಳನ್ನ ನಿರ್ದೇಶಿಸಿದ್ದರು.

1970 ರಲ್ಲಿ ತೆರೆ ಕಂಡಿದ್ದ ರಂಗಮಹಲ್ ರಹಸ್ಯಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ವಿಜಯ ರೆಡ್ಡಿ ಅವರು ಆ ನಂತರ ಡಾ.ರಾಜ್‌ಕುಮಾರ್ ಅವರೊಂದಿಗೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದರು.
70 ರ ದಶಕದ ಸ್ಟಾರ್ ನಿರ್ದೇಶಕ ಎಂದೇ ಹೆಸರು ವಿಜಯ ರೆಡ್ಡಿ ಹೆಸರುಗಳಿಸಿದ್ರು.
ಕೇವಲ ಸಿನೆಮಾಗಳಷ್ಟೇ ಅಲ್ಲ.. ವಿಜಯ ರೆಡ್ಡಿ ಅವರು ಶ್ರೀ ವೆಂಕಟೇಶ್ವರ ಮಹಿಮೆ ಎಂಬ ಧಾರಾವಾಹಿಯನ್ನು ತೆಲುಗು ಹಾಗೂ ಕನ್ನಡ ಏಕಕಾಲದಲ್ಲಿ ನಿರ್ದೇಶಿಸಿದ್ದ ಖ್ಯಾತಿಗೆ ಪಾತ್ರಾರಗಿದ್ದರು.
ಇನ್ನೂ ಅಗಲಿದ ಹಿರಿಯ ನಿರ್ದೇಶಕ ವಿಜಯ ರೆಡ್ಡಿ ನಿಧನಕ್ಕೆ ಚಿತ್ರರಂಗದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. 
ಇನ್ನೂ ವಿಜಯ್ ರೆಡ್ಡಿ ಅಗಲಿಕೆಗೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಹ ಕಂಬನಿ ಮಿಡಿದಿದ್ದಾರೆ.
ತಂದೆಯವರ ಮರೆಯಲಾಗದ ಸಿನಿಮಾಗಳಾದ ಗಂಧದಗುಡಿ, ಮಯೂರ, ನಾ ನಿನ್ನ ಮರೆಯಲಾರೆ, ಭಕ್ತ ಪ್ರಹ್ಲಾದ ಸೇರಿದಂತೆ ಹಲವು ಸಿನೆಮಾಗಳನ್ನು ನಿರ್ದೇಶಿಸಿರುವ ವಿಜಯ್ ರೆಡ್ಡಿ ಅವರು ನಿಧನರಾಗಿರುವುದು ದುಃಖ ತಂದಿದೆ. ಅವರ ನಿರ್ದೇಶನದ ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಾನು ನಟಿಸಿರುವುದೆ ನನ್ನ ಭಾಗ್ಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








