ADVERTISEMENT
Wednesday, August 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಿಎಸ್‍ವೈ ಎದುರೇ ಯತ್ನಾಳ್ ಗರಂ: ಪುತ್ರ ವಿಜಯೇಂದ್ರ ಹಸ್ತಕ್ಷೇಪಕ್ಕೆ ಕೆಂಡಾಮಂಡಲವಾಗಿದ್ದೇಕೆ..?

Kariyappa N by Kariyappa N
January 4, 2021
in Newsbeat, Politics, Samagra karnataka, ರಾಜ್ಯ
yatnal
Share on FacebookShare on TwitterShare on WhatsappShare on Telegram

ಬೆಂಗಳೂರು: ಬಹಿರಂಗ ಹೇಳಿಕೆಗಳ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಸ್ವಪಕ್ಷದವರೇ ಆದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕರ ಸಭೆಯಲ್ಲಿ ಬಿಎಸ್‍ವೈ ಎದುರೇ ಆಕ್ರೋಶ ಹೊರಹಾಕಿದ್ದಾರೆ.
ಬಜೆಟ್‍ಗೆ ಸಿದ್ಧತೆ ಆರಂಭಿಸಿರುವ ಯಡಿಯೂರಪ್ಪ, ಸೋಮವಾರ ಇಡೀ ದಿನ ವಲಯವಾರು ಶಾಸಕರ ಸಭೆ ನಡೆಸಿದರು. ಮುಂಬೈ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಶಾಸಕರ ಸಭೆಯಲ್ಲಿ ವಿಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಎಸ್‍ವೈ ಪುತ್ರ ವಿಜಯೇಂದ್ರ ಹಸ್ತಕ್ಷೇಪಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.


“ಎಲ್ಲದಕ್ಕೂ ನಿಮ್ಮ ಮಗನ ಮಾತೇ ಅಂತಿಮವಾದ್ರೆ..ಪಕ್ಷಕ್ಕಾಗಿ ದುಡಿದವರ ಪಾಡೇನು ? ನಾನು ಪಕ್ಷದ ಶಾಸಕ. ನಾನು ನಿಮ್ಮ ಬಳಿ ಮಾತನಾಡಬೇಕು. ಆದರೆ, ನಾನೇಕೆ ನಿಮ್ಮ ಮಗನ ಬಳಿ ಮಾತನಾಡಬೇಕು” ಎಂದು ಯತ್ನಾಳ್ ಗುಡುಗಿದ್ದಾರೆ.
ಹಿರಿಯರಾಗಿ ನೀವು ಮಗನು ಹೇಳಿದ ಎಲ್ಲದಕ್ಕೂ ತಲೆದೂಗಿದರೆ ಹೇಗೆ ? ಸರ್ಕಾರದಲ್ಲಿ ಮಗನ ಹಸ್ತಕ್ಷೇಪ ಕಡಿಮೆ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಯತ್ನಾಳ್ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related posts

saakshatv.com/bio-resource-centre-to-be-established-in-bindhalli-melukote

ಮೇಲುಕೋಟೆ ಕ್ಷೇತ್ರವನ್ನು ‘ಸಾವಯವ ತಾಲೂಕು’ ಗೊಳಿಸುವತ್ತ ಮತ್ತೊಂದು ಹೆಜ್ಜೆ

August 26, 2026
saakshatv.com/special-atma-scheme-workshop-for-120-krishi-sakhis-in-pandavapura-mandya

120 ಕೃಷಿ ಸಖಿಯರಿಗೆ ‘ಆತ್ಮ’ ಯೋಜನೆಯಡಿ ವಿಶೇಷ ಕಾರ್ಯಾಗಾರ ಯಶಸ್ವಿ

August 26, 2026

ಕಾವೇರಿ, ಕೃಷ್ಣ ಪ್ರವೇಶಕ್ಕೆ ಮುಕ್ತ..
ಬಸನಗೌಡ ಪಾಟೀಲ್ ಯತ್ನಾಳ್ ಸಿಡಿಮಿಡಿಗೊಳ್ಳುತ್ತಿದ್ದರು ತಾಳ್ಮೆಯಿಂದಲೇ ಕೇಳುತ್ತಿದ್ದ ಸಿಎಂ ಯಡಿಯೂರಪ್ಪ, ನಿಮ್ಮ ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ನನ್ನ ಬಳಿ ಮಾತನಾಡಿ. ಗೃಹ ಕಚೇರಿ ಕೃಷ್ಣಾ, ಕಾವೇರಿ ಪ್ರವೇಶಕ್ಕೆ ನಿಮಗೆ ಮುಕ್ತ ಅವಕಾಶ ಇದೆ. ಬೆಂಗಳೂರಿನಲ್ಲೊಂದು, ವಿಜಯಪುರದಲ್ಲೊಂದು ಹೇಳಿಕೆ ನೀಡಿ ಪಕ್ಷ ಹಾಗೂ ಸರ್ಕಾರಕ್ಕಡ ಡ್ಯಾಮೇಜ್ ಮಾಡಬೇಡ ಎಂದು ಸಿಎಂ ಕಿವಿ ಮಾತು ಹೇಳಿದ್ದಾರೆ.


ಇದಕ್ಕೆ ಉತ್ತರ ನೀಡಿದ ಯತ್ನಾಳ್, ಶಾಸಕರ ಕ್ಷೇತ್ರಕ್ಕೆ ಅನುದಾನಕ್ಕಾಗಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಡಳಿತ ಪಕ್ಷದ ಶಾಸಕರ ಸ್ಥಿತಿ ಪ್ರತಿಪಕ್ಷಗಳಿಂದ ನಗೆಪಾಟಲಿಗೀಡಾಗುವಂತೆ ಮಾಡಿದೆ. ನಿಜವಾಗಿಯೂ ಸರ್ಕಾರ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ವಿಜಯೇಂದ್ರ ಹಸ್ತಕ್ಷೇಪ ನನ್ನ ಗಮನಕ್ಕೆ ಬಂದಿಲ್ಲ
ಶಾಸಕರು ಕೆಲಸ ಮಾಡಿಸಿಕೊಳ್ಳಲು ವಿಜಯೇಂದ್ರ ಬಳಿ ಹೋಗಬೇಕೆಂಬ ಯತ್ನಾಳ್ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಿಎಂ ಯಡಿಯೂರಪ್ಪ, ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಹಾಗೇನಾದರೂ ಇದ್ದರೆ ಸರಿಪಡಿಸುತ್ತೇನೆ ಭರವಸೆ ನೀಡಿದರು ಎನ್ನಲಾಗಿದೆ.

bsy

ಕರಾವಳಿ ಭಾಗದ ಶಾಸಕರಿಂದಲೂ ಅಸಮಾಧಾನ..
ಯಡಿಯೂರಪ್ಪ ನಡೆಸಿದ ವಲಯವಾರು ಶಾಸಕರ ಸಭೆಯಲ್ಲಿ ಕರಾವಳಿ ಭಾಗದ ಶಾಸಕರೂ ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಾವು ಕರಾವಳಿ ಭಾಗದ ಶಾಸಕರು. ಸರ್ಕಾರಕ್ಕಾಗಲೀ, ಪಕ್ಷಕ್ಕಾಗಲೀ ಇರಿಸು-ಮುರಿಸು ಮಾಡಿಲ್ಲ. ಶಿಸ್ತಿನಿಂದ ಇರುತ್ತೇವೆ ಎಂಬ ಕಾರಣಕ್ಕೆ ಹಲವು ಬಾರಿ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ.
ಆಡಳಿತ, ಅನುದಾನದ ವಿಷಯದಲ್ಲಿಯೂ ನಿರ್ಲಕ್ಷ್ಯ ಆಗಿದೆ. ಎಲ್ಲದಕ್ಕೂ ಸುಮ್ಮನೆ ಇರುತ್ತೇವೆ ಎಂಬ ಕಾರಣಕ್ಕೆ ಹಲವು ಬಾರಿ ನಿರ್ಲಕ್ಷ್ಯ ಮಾಡಲಾಗಿದೆ. ಅನುದಾನ ಕೊಡಿ, ಉತ್ತಮ ಕಾರ್ಯಕ್ರಮ ಕೊಟ್ಟು ಸರ್ಕಾರದ ಘನತೆ ಉಳಿಸಿಕೊಳ್ಳಿ ಎಂಬ ಕರಾವಳಿ ಭಾಗದ ಶಾಸಕರ ಮನವಿಗೆ ಸ್ಪಂದಿಸಿದ ಸಿಎಂ ಬಿಎಸ್‍ವೈ ಸರಿಪಡಿಸುವ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: B S YADIYURAPPAB.Y VijayendraBasanagowda Patil Yatnalbjp mla’s meeting
ShareTweetSendShare
Join us on:

Related Posts

saakshatv.com/bio-resource-centre-to-be-established-in-bindhalli-melukote

ಮೇಲುಕೋಟೆ ಕ್ಷೇತ್ರವನ್ನು ‘ಸಾವಯವ ತಾಲೂಕು’ ಗೊಳಿಸುವತ್ತ ಮತ್ತೊಂದು ಹೆಜ್ಜೆ

by admin
August 26, 2026
0

ಬಿಂಡಳ್ಳಿಯಲ್ಲಿ ಶೀಘ್ರವೇ 'ಬಯೋ ರಿಸೋರ್ಸ್ ಸೆಂಟರ್' ಸ್ಥಾಪನೆ! ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರಿಂದ ಮಹತ್ವದ ಯೋಜನೆ ಪುಟ್ಟಣ್ಣಯ್ಯ ಫೌಂಡೇಶನ್‌ ಸಹಯೋಗ ಮಂಡ್ಯ: ಮೇಲುಕೋಟೆ ಕ್ಷೇತ್ರವನ್ನು ಸಂಪೂರ್ಣ...

saakshatv.com/special-atma-scheme-workshop-for-120-krishi-sakhis-in-pandavapura-mandya

120 ಕೃಷಿ ಸಖಿಯರಿಗೆ ‘ಆತ್ಮ’ ಯೋಜನೆಯಡಿ ವಿಶೇಷ ಕಾರ್ಯಾಗಾರ ಯಶಸ್ವಿ

by admin
August 26, 2026
0

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನ: ಪಾಂಡವಪುರದಲ್ಲಿ ಕೃಷಿ ಪರಿಣತರಿಂದ ತರಬೇತಿ ಮಂಡ್ಯ: ಪಾಂಡವಪುರ ತಾಲ್ಲೂಕಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ (ಕೃಷಿ...

saakshatv.com/darshan-puttannaiah-inaugurates-tara-english-language-lab-mandya

ಜಕ್ಕನಹಳ್ಳಿಯಲ್ಲಿ ‘ತಾರಾ ಇಂಗ್ಲಿಷ್ ಭಾಷಾ ಪ್ರಯೋಗಾಲಯ’ ಉದ್ಘಾಟನೆ

by admin
August 26, 2026
0

AI ತಂತ್ರಜ್ಞಾನದೊಂದಿಗೆ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಹೊಸ ಸ್ಪರ್ಶ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾರ್ಗದರ್ಶನ ಪುಟ್ಟಣ್ಣಯ್ಯ ಫೌಂಡೇಶನ್‌, ಲರ್ನಿಂಗ್‌ ಮ್ಯಾಟರ್ಸ್‌ ಮತ್ತು ರೋಟರಿ ಕ್ಲಬ್ ಆಫ್...

saakshatv.com/jio-world-convention-centre-launches-conference-ambassador-program-mumbai

ಮುಂಬೈಗೆ ಜಾಗತಿಕ ಸಮ್ಮೇಳನಗಳನ್ನು ತರಲು ‘ಕಾನ್ಫರೆನ್ಸ್ ಅಂಬಾಸಿಡರ್’ ಕಾರ್ಯಕ್ರಮ

by admin
August 25, 2026
0

ಮುಂಬೈ, : ಮುಂಬೈಯನ್ನು ಜಾಗತಿಕ ಮಟ್ಟದ ಸಮ್ಮೇಳನಗಳು ಹಾಗೂ ಬಿಸಿನೆಸ್‌ ಈವೆಂಟ್‌ಗಳ ಪ್ರಮುಖ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ (JWCC) ‘ಕಾನ್ಫರೆನ್ಸ್ ಅಂಬಾಸಿಡರ್...

saakshatv.com/dun-and-bradstreet-city-vitality-index-report-emerging-cities-growth

ಮೆಟ್ರೋ ನಗರಗಳನ್ನು ಹಿಂದಿಕ್ಕಿ ಬೆಳೆಯುತ್ತಿವೆ ಸಣ್ಣ ನಗರಗಳು: ‘ಡನ್ & ಬ್ರಾಡ್‌ಸ್ಟ್ರೀಟ್’ ವರದಿಯಲ್ಲಿ ಅಚ್ಚರಿಯ ಮಾಹಿತಿ!

by admin
August 25, 2026
0

ಬೆಂಗಳೂರು: ಭಾರತದ ಆರ್ಥಿಕ ಬೆಳವಣಿಗೆ ಎಂದರೆ ಕೇವಲ ಮುಂಬೈ, ದೆಹಲಿ, ಬೆಂಗಳೂರಿನಂತಹ ದೊಡ್ಡ ಮೆಟ್ರೋ ನಗರಗಳು ಮಾತ್ರ ಅಂತ ನೀವು ಅಂದುಕೊಂಡಿದ್ದರೆ, ಆ ಲೆಕ್ಕಾಚಾರವನ್ನು ಬದಲಿಸಿಕೊಳ್ಳುವ ಸಮಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram