ಹುಬ್ಬಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ನಿಜಲಿಂಗಪ್ಪ ಬೇಪುರಿ (58) ಮತ್ತು ಸಂಜಯ್ ಸವದತ್ತಿ (18) ಕೊನೆಯುಸಿರೆಳೆದಿದ್ದಾರೆ. ಡಿಸೆಂಬರ್ 23 ರಂದು ಮಧ್ಯರಾತ್ರಿ 1:30ಕ್ಕೆ ಈಶ್ವರ ದೇವಾಲಯದಲ್ಲಿ ಗ್ಯಾಸ್ ಸೋರಿಕೆಯಾಗಿ ದೀಪದ ಬೆಂಕಿ ತಗುಲಿ ಸಿಲಿಂಡರ್ ಸ್ಫೋಟಗೊಂಡಿತ್ತು. ಈ ವೇಳೆ 9 ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪಂಜಾಬ್ ಮತ್ತು ಕರ್ನಾಟಕದ ಹಗರಣಗಳಿಗೆ ಸಚಿವರು ಯಾಕೆ ರಾಜೀನಾಮೆ ನೀಡಿಲ್ಲ? ಆಪ್ ಮತ್ತು ಕಾಂಗ್ರೆಸ್ ಗೆ ಪ್ರಹ್ಲಾದ ಜೋಶಿ ಪ್ರಶ್ನೆ
ಧಾರವಾಡ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ (ಆಪ್) ನೈತಿಕತೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ....








