ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ ಕಾಂಗ್ರೆಸ್ : ಪ್ರಲ್ಹಾದ್ ಜೋಶಿ – Saaksha Tv
ಹುಬ್ಬಳ್ಳಿ : ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅದ್ಧೂರಿ ಗೆಲುವು ಸಾಧಿಸಿದೆ. ದೇಶದ ಜನರು ಪ್ರಧಾನಿ ಮೋದಿ ಮೇಲೆ ಇಟ್ಟ ವಿಶ್ವಾಸ ಕಂಡು ನಾನು ಬೆರಗಾಗಿದ್ದೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಜಗತ್ತಿನ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಉತ್ತರಾಖಂಡ ಗೆಲುವಿಗೆ ನಾನೊಬ್ಬನೇ ಕಾರಣ ಅಂತಾ ಹೇಳುವುದಿಲ್ಲ. ನಾಲ್ಕು ದಿನ ಪ್ರಧಾನಮಂತ್ರಿಗಳು ಉತ್ತರಾಖಂಡಕ್ಕೆ ಭೇಟಿ ನೀಡಿದ್ದೇ ಬಿಜೆಪಿ ಗೆಲುವಿಗೆ ಕಾರಣವಾಯಿತು. ಅಲ್ಲಿ 80 ಸಾವಿರ ಸಭೆಗಳನ್ನು ಮಾಡಿದ್ದು ಮೈಲುಗಲ್ಲು. ಉತ್ತರಾಖಂಡ ರಾಜ್ಯ ಅಭಿವೃದ್ಧಿ ಕಂಡಿದ್ದು ಈ ಐದು ವರ್ಷದಲ್ಲಿ ಎಂದು ಹೇಳಿದರು.
ಸದ್ಯಕ್ಕೆ ನಾಲ್ಕು ರಾಜ್ಯದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಗಿಸಬೇಕಿದೆ. ಏಪ್ರಿಲ್ 8ರವರೆಗೆ ಅಧಿವೇಶನ ಇದೆ. ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಚರ್ಚೆಯಾಗಲಿದೆ. ಅಲ್ಲಿಯವರೆಗೆ ಯಾವುದೇ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಚರ್ಚೆ ಇಲ್ಲ ಎಂದರು.
ಅವರು ಯಾಕೆ ಹೋಗಿದ್ದರು ಅನ್ನೋದು ಇನ್ನೂ ಅರ್ಥವಾಗಿಲ್ಲ. ತೋಳು ಬಲ ತೋರಿಸಲು, ಗೂಂಡಾಗಿರಿ ಮಾಡಲು ಡಿಕೆಶಿ ಹೋಗಿದ್ರಾ?. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ದರು ಎಂಬಂತೆ ಕಾಂಗ್ರೆಸ್ ನಡೆ ಇದೆ ಎಂದು ಡಿಕೆಶಿಗೆ ಟಾಂಗ್ ನೀಡಿದರು.








