ಚಿಕ್ಕಬಳ್ಳಾಪುರ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶಿಕ್ಷಕರೊಬ್ಬರು ಜಲಾಶಯಕ್ಕೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಗೌರಿಬಿದನೂರಿನಲ್ಲಿ ನಡೆದಿದೆ. ಜಿ.ಬೊಮ್ಮಸಂದ್ರದ ನಿವಾಸಿಯಾಗಿದ್ದ 34 ವರ್ಷದ ಶಿಕ್ಷಕ ಶ್ರೀನಾಥ ರೆಡ್ಡಿ ಅವರು ಜಕ್ಕಳಮಡಗು ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಮುಂಜಾನೆ ಡ್ಯಾಂನಲ್ಲಿ ಮೃತದೇಹ ಪತ್ತೆಯಾಗಿದೆ.
ಇವರು ಬಾದಿಮರಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು, ಸೋಮವಾರ ಶಾಲೆಗೂ ಹಾಜರಾಗದೇ ನಾಪತ್ತೆಯಾಗಿಬಿಟ್ಟಿದ್ದರು. ಇದಾದ ಬಳಿಕ ಶ್ರೀನಾಥ್ ಅವರಿಗಾಗಿ ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಶ್ರೀನಾಥ ರೆಡ್ಡಿ ಅವರ ಬೈಕ್ ಹಾಗೂ ಮೊಬೈಲ್ ಜಕ್ಕಲಮಡಗು ಜಲಾಶಯದ ದಂಡೆ ಮೇಲೆ ಪತ್ತೆಯಾಗಿದ್ದ ಪರಿಣಾಮ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಶೋಧ ಕಾರ್ಯಾಚರಣೆ ನಡೆಸಿದ ನಂತರ ಮೃತದೇಹ ಪತ್ತೆಯಾಗಿದೆ.
ಇನ್ನೂ ಕುಟುಂಬಸ್ಥರು ಹೇಳುವ ಪ್ರಕಾರ ಶ್ರೀನಾಥ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಅವರಿಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ನಿಡಲಾಗುತ್ತಿತ್ತು ಎನ್ನಲಾಗಿದೆ.
10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್
ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಸಮಯ ಪಾಲನೆ ಮತ್ತು ಶಿಸ್ತಿನ ಪರ್ವ ಆರಂಭವಾಗಲಿದೆ. ನೌಕರರು ಕಚೇರಿಗೆ ಬಾರದೆ ಅಥವಾ ತಡವಾಗಿ ಬಂದು ಹಾಜರಾತಿ ದಾಖಲಿಸುವ ಹಳೆಯ...








