ಜಾನಪದ ಕಲಾವಿದರಿಗೆ ಯೋಗಿ ಸರ್ಕಾರದಿಂದ ಭರ್ಜರಿ ಗಿಫ್ಟ್..!
ಉತ್ತರಪ್ರದೇಶ : ವರ್ಣಚಿತ್ರಕಾರರು ಮತ್ತು ಶಿಲ್ಪಿಗಳಿಗೆ ವಿದ್ಯಾರ್ಥಿವೇತನ ನೀಡಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಹೌದು ರಾಜ್ಯದಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಾನಪದ ಕಲಾಗಾರರಿಗೆ ಯೋಗಿ ಸರರ್ಕಾರ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.
2021ರ ಜನವರಿಯಿಂದ ಜಾನಪದ ಕಲೆಯ ವರ್ಣಚಿತ್ರಕಾರರು ಮತ್ತು ಶಿಲ್ಪಿಗಳಿಗೆ ಪ್ರತಿ ತಿಂಗಳು 5,000 ರೂ ವಿದ್ಯಾರ್ಥಿವೇತನ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಟ್ರಂಪ್ ಗೆ ಸೋಲಿನ ಮೇಲೆ ಸೋಲು.. ಕಡೆಯ ಪ್ರಯತ್ನವೂ ಫೇಲು..!
ಈ ಪ್ರಸ್ತಾಪವನ್ನು ಲಲಿತ ಕಲಾ ಅಕಾಡೆಮಿ ಸರ್ಕಾರಕ್ಕೆ ಕಳುಹಿಸಿದೆ. ಸಂಶೋಧನೆ ನಡೆಸುತ್ತಿರುವ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಲು ಮತ್ತು ಸಹಾಯ ಮಾಡಲು ವಿದ್ಯಾರ್ಥಿವೇತನವನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯ ಫಲಕ್ಕೆ 40 ವರ್ಷದೊಳಗಿನ ವಯಸ್ಸಿನವರು ಅರ್ಹರಾಗಿದ್ದಾರೆ. ಅಂದ್ಹಾಗೆ ಈವರೆಗೂ ಕೇವಲ ದೃಷ್ಟಿಕಲೆಯ ವರ್ಣಚಿತ್ರಕಾರರು ಮತ್ತು ಶಿಲ್ಪಿಗಳಿಗೆ ಮಾತ್ರ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








