ನವದೆಹಲಿ: ದಿನೇ ದಿನೇ ಭಾರತದಲ್ಲಿ ತನ್ನ ಅಬ್ಬರ ಹೆಚ್ಚಿಸಿಕೊಂಡು ಬರುತ್ತಲೇ ಇರುವ ಮಹಾಮಾರಿ ಕಳೆದ 24 ಗಂಟೆಗಳಲ್ಲಿ ರೌದ್ರಾವತಾರವನ್ನೇ ತೋರಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 90,802 ಕೊರೊನಾ ಕೇಸಸ್ ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 42,04,614ಕ್ಕೆ ಏರಿಕೆಯಾಗಿದೆ.
ಕೊರೊನಾ ಮರಣಮೃದಂಗಕ್ಕೆ ಒಂದೇ ದಿನ 1,016 ಮಂದಿ ಉಸಿರು ನಿಲ್ಲಿಸಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 71,642ಕ್ಕೆ ಬಂದು ತಲುಪಿದೆ. ಇನ್ನೂ ಈವರೆಗೂ ಒಟ್ಟು 32,50,429 ಮಂದಿ ಸೋಂಕಿನಿಂದ ಗುಣುಮುಖರಾಗಿದ್ದಾರೆ. ಇನ್ನೂ 8,82,542 ಸಕ್ರಿಯ ಪ್ರಕರಣಗಳಿವೆ.