ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿದ ಗೂಗಲ್ ಗೆ 1.1 ಮಿಲಿಯನ್ ಯುರೋ ಫೈನ್!
ಗೂಗಲ್ ಸಂಸ್ಥೆಗೆ ಮತ್ತೊಮ್ಮೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ. ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆ ಗೂಗಲ್ ಗೆ 1.1 ಮಿಲಿಯನ್ ಯುರೋ ದಂಡ ವಿಧಿಸಿರೋದಾಗಿ ಅಂತರಾಷ್ಟ್ರೀಯ ಸುದ್ದಿ ಮಾಧ್ಯಮ ವರದಿ ಮಾಡಿದೆ. ಹೋಟೆಲ್ ರ್ಯಾಕಿಂಗ್ ಬಗ್ಗೆ ಗೂಗಲ್ ತನ್ನ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿರುವುದು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆ ಬರೋಬ್ಬರಿ 1.1 ಮಿಲಿಯನ್ ಯುರೋ ಅಂದ್ರೆ ಸರಿ ಸುಮಾರು 1.34 ಮಿಲಿಯನ್ ಡಾಲರ್ ದಂಡ ವಿಧಿಸಲಾಗಿದೆ.
ಶೀಘ್ರದಲ್ಲೇ E -SIM ಜಾರಿಗೆ : ಈ ವ್ಯವಸ್ಥೆಯ ವಿಶೇಷತೆಗಳು..!
ಅಮೆರಿಕ ಮೂಲದ ಅತಿದೊಡ್ಡ ಸರ್ಚ್ ಇಂಜಿನ್ ಗೂಗಲ್ ತನ್ನ ಗ್ರಾಹಕರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಲಾಗಿತ್ತು. ಹೋಟೆಲ್ ರೇಟಿಂಗ್ಸ್ ನೀಡುವ ವಿಚಾರದಲ್ಲಿ ಗೂಗಲ್ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿತ್ತು. ಈ ಬಗ್ಗೆ ಫ್ರಾನ್ಸ್ ಮತ್ತು ಐರ್ಲೆಂಡ್ ತನಿಖೆ ಕೈಗೊಂಡಿದ್ದವು. ಗೂಗಲ್ ತಪ್ಪು ಎಸಗಿರುವುದು ಸಾಬೀತಾದ ಹಿನ್ನೆಲೆ ದೊಡ್ಡ ಮೊತ್ತದ ದಂಡವನ್ನು ವಿಧಿಸಲಾಗಿದೆ. ತಾನು ಮಾಡಿರುವ ತಪ್ಪಿಗೆ ವಿಧಿಸಿರುವ ದಂಡದ ಮೊತ್ತವನ್ನು ಪಾವತಿಸುವುದಾಗಿ ಗೂಗಲ್ ಐರ್ಲೆಂಡ್ ಮತ್ತು ಗೂಗಲ್ ಫ್ರಾನ್ಸ್ ಒಪ್ಪಿಕೊಂಡಿವೆ ಎಂದು ಫ್ರಾನ್ಸ್ ನ ಹಣಕಾಸು ಸಚಿವಾಲಯ ಮತ್ತು ಫ್ರಾಡ್ ವಾಚ್ಡಾಗ್ ತಿಳಿಸಿವೆ.
ಥೂ ಎಂಥ ವಿಕೃತ ಕಾಮುಕ ಇವನು : ಹೆಣ್ಣು ಬೀದಿ ನಾಯಿಗಳಿಗೂ ಸೇಫ್ಟಿ ಇಲ್ಲದ ಕಾಲ ಬಂತು..!
ಗೂಗಲ್ 2019ರಿಂದ ಹೋಟೆಲ್ ಗಳಿಗೆ ನೀಡುವ ಶ್ರೇಯಾಂಕವನ್ನು ತಿದ್ದುಪಡಿ ಮಾಡಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಹಿಂದೆಯೂ ಅನೇಕ ಬಾರಿ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಗೂಗಲ್ ಗೆ ಭಾರಿ ಮೊತ್ತದ ದಂಡ ವಿಧಿಸಲಾಗಿತ್ತು. ಇದೀಗ ಮತ್ತೊಮ್ಮೆ ಅಂತಹದ್ದೇ ಪೇಚೆಗೆ ಸಿಲುಕಿದೆ ಗೂಗಲ್ ಸಂಸ್ಥೆ.








