ಥೂ ಎಂಥ ವಿಕೃತ ಕಾಮುಕ ಇವನು : ಹೆಣ್ಣು ಬೀದಿ ನಾಯಿಗಳಿಗೂ ಸೇಫ್ಟಿ ಇಲ್ಲದ ಕಾಲ ಬಂತು..!
ಮೈಸೂರು: ಮಹಿಳೆಯರು, ಪುಟ್ಟ ಮಕ್ಕಳಿಗೆ, ವೃದ್ಧೆಯರಿಗೆ ಒಬ್ಬರೇ ಓಡಾಡಂತಹ ಪರಿಸ್ಥಿತಿ ಬಂದಿದೆ. ಮಹಿಳೆಯರಿಗೆ ಸೇಫ್ಟಿ ಇಲ್ಲದಂತಾಗಿದೆ. ದಿನೇ ದಿನೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಆದ್ರೆ ಇದೀಗ ಇಂತಹ ವಿಕೃತ ಕಾಮಿಗಳು, ಕಾಮ ಪಿಶಾಚಿಗಳಿಂದ ಬೀದಿ ನಾಯಿಗಳಿಗೂ ರಕ್ಷಣೆ ಒದಗಿಸಬೇಕಾದ ಅನಿವಾರ್ಯತೆ ಬಂದಿದೆ.
ಕಾಲುವೆಗೆ ಬಿದ್ದ ಬಸ್ – ದುರಂತದಲ್ಲಿ 35 ಮಂದಿ ಸಾವು, 8 ಮಂದಿ ನಾಪತ್ತೆ..!
ಹೌದು ಹೆಣ್ಣು ಬೀದಿ ನಾಯಿ ಮೇಲೆ ವಿಕೃತ ಕಾಮಿಯೋರ್ವ ಅತ್ಯಾಚಾರ ಎಸಗಿರುವ ಹೇಯ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಫೈಶಾಚಿಕ ಕೃತ್ಯ ಎಸಗಿರುವ ಈ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ. ನಗರದ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿಗೆ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋ ಒಂದು ವೈರಲ್ ಆಗಿದೆ.
ಬ್ಲೇಡ್ ನಿಂದ ಬೇಕಾಬಿಟ್ಟು ಮೈ ಕೊಯ್ದುಕೊಂಡ ವೈದ್ಯ..!
ಯುವಕನ ವಿರುದ್ಧ ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಯ ಪ್ರಾಣಿ ಕ್ಷೇಮಾಭಿವೃದ್ಧಿ ಅಧಿಕಾರಿ ಕೆ. ಬಿ. ಹರೀಶ್ ಅವರು ದೂರು ನೀಡಿದ್ದರು. ವಿಕೃತ ಎಸಗಿರುವ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೋಕುಲಂ 3ನೇ ಹಂತದ ಗಣಪತಿ ದೇವಸ್ಥಾನದ ರಸ್ತೆ ಬಳಿ ಫೆ.11ರ ರಾತ್ರಿ ವೇಳೆ ವ್ಯಕ್ತಿಯೊಬ್ಬ ಹೆಣ್ಣು ನಾಯಿಯ ಮೇಲೆ ಬಲವಂತವಾಗಿ ಲೈಂಗಿಕ ಕಿರುಕುಳ ನೀಡುವುದನ್ನು ದಾರಿಹೋಕರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು.
ಬೊಮ್ಮನಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲೇ 103 ಮಂದಿಗೆ ಪಾಸಿಟಿವ್ : ಬಿಬಿಎಂಪಿ
ಈ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿನ ದೃಶ್ಯಗಳನ್ನು ಆಧರಿಸಿ ಪಿಎಫ್ ಎ ಅಧಿಕಾರಿ ಕೆ.ಬಿ. ಹರೀಶ್ ಪೊಲೀಸರಿಗೆ ದೂರು ನೀಡಿದ್ದಾರೆ. ವಿಡಿಯೋ ಆಧರಿಸಿ ಕೃತ್ಯ ಎಸಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 30 ವರ್ಷದ ಆರೋಪಿಯನ್ನ ಬಂಧಿಸಲಾಗಿದೆ.