ನಂಜುಂಡೇಶ್ವರ ದೇವಸ್ಥಾನ ಹುಂಡಿ ಎಣಿಕೆ – ಒಂದುವರೇ ತಿಂಗಳಲ್ಲಿ 1.41 ಕೋಟಿ ಸಂಗ್ರಹ
ಮೈಸೂರು ಜಿಲ್ಲೆ ನಂಜನಗೂಡಿನ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಪವಿತ್ರ ಪುಣ್ಯ ಕ್ಷೇತ್ರ ಶ್ರೀಕಂಠೇಶ್ವರ ದೇಗುಲದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಒಂದುವರೇ ತಿಂಗಳಲ್ಲಿ 1 ಕೋಟಿ 41 ಲಕ್ಷ ರುಪಾಯಿ ಕಾಣಿಕೆ ಸಂಗ್ರಹವಾಗಿದೆ.
ನಂಜುಂಡೇಶ್ವರ ದೇವಸ್ಥಾನ ಸಿಬ್ಬಂದಿ ಹಾಗೂ ಬ್ಯಾಂಕ್ ಸಿಬ್ಬಂದಿ ಶುಕ್ರವಾರ ರಾತ್ರಿಯವರೆಗೆ ಹುಂಡಿ ಎಣಿಕೆ ಕಾರ್ಯ ನಡೆಸಿದರು. ಕೇವಲ ಒಂದೂವರೆ ತಿಂಗಳಲ್ಲಿ ದೇವಾಲಯದಲ್ಲಿನ 12 ಹುಂಡಿಗಳಲ್ಲಿ 1 ಕೋಟಿ 41 ಲಕ್ಷದ 15 ಸಾವಿರ ರೂ. ಭಕ್ತರು ದೇಣಿಗೆ ಸಂಗ್ರಹವಾಗಿದೆ. ಜೊತೆಗೆ 125 ಗ್ರಾಂ ಚಿನ್ನ, 6 ಕೆಜಿ ಬೆಳ್ಳಿ, 32 ವಿದೇಶಿ ಕರೆನ್ಸಿಗಳು, ನಿಷೇಧಿತ 1000 ರೂ. ಮುಖಬೆಲೆ 2 ನೋಟುಗಳು, 500 ರೂ.ಮುಖಬೆಲೆಯ 12 ನೋಟು ಸೇರಿದಂತೆ ಒಟ್ಟಾರೆ 8 ಸಾವಿರ ಹುಂಡಿಯಲ್ಲಿದೆ.
ಇತ್ತೀಚೆಗೆ ಶ್ರೀಂಕಂಠೇಶ್ವರನ ದರ್ಶನಕ್ಕೆ ವಿವಿಧ ರಾಜ್ಯಗಳಿಂದ ಮತ್ತು ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಈ ಕಾರಣಕ್ಕೆ ದೇವಸ್ಥಾನದ ಹುಂಡಿಯ ಕಾಣಿಕೆ ಸಂಖ್ಯೆ ಹೆಚ್ಚಳವಾಗಿದೆ.