ಮಲೆಮಹದೇಶ್ವರ ಹುಂಡಿಯಲ್ಲಿ 1 ಕೋಟಿ 87 ಲಕ್ಷ ಕಾಣಿಕೆ ಸಂಗ್ರಹ Saaksha Tv
ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ ಎಣಿಕೆ ಕಾರ್ಯ 1 ಕೋಟಿ 87 ಲಕ್ಷದ ಕಾಣಿಕೆ ಸಂಗ್ರಹವಾಗಿದೆ.
ರಾಜ್ಯದ ಪ್ರಮುಖ ಮತ್ತು ಹೆಚ್ಚು ಆದಾಯ ಹೊಂದಿರುವ ಹಿಂದು ದೇವಾಲಯಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು, ಕೇವಲ 43 ದಿನಗಳಲ್ಲಿ 1 ಕೋಟಿ 87 ಲಕ್ಷ ರೂ ಕಾಣಿಕೆ ಸಲ್ಲಿಕೆಯಾಗಿದೆ. ಇದರ ಜೊತೆಗೆ 50 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿಯನ್ನು ಏಳುಮಲೆ ಒಡೆಯನಿಗೆ ಭಕ್ತರು ಅರ್ಪಿಸಿದ್ದಾರೆ.
ದೇಗುಲದಲ್ಲಿ ವಿವಿಧ ಸೇವೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ವಾರಾಂತ್ಯ ಮತ್ತು ಸೋಮವಾರಗಳಂದು ಭಕ್ತರ ದಂಡೇ ಬೆಟ್ಟಕ್ಕೆ ಹರಿದು ಬರುತ್ತಿದೆ. ಕೊರೊನಾದಿಂದ ಸ್ಥಗಿತಗೊಂಡಿದ್ದ ಪ್ರಸಾದ ವ್ಯವಸ್ಥೆಯೂ ಕೆಲ ದಿನಗಳ ಹಿಂದೆ ಆರಂಭವಾಗಿದೆ.









