1 ಟ್ವೀಟ್.. 1 ದಿನ.. ಎಲೋನ್ ಮಸ್ಕ್ ಗೆ 1 ಲಕ್ಷ ಕೋಟಿ ನಷ್ಟ
1 ಟ್ವೀಟ್.. 1 ದಿನ.. ಎಲೋನ್ ಮಸ್ಕ್ ಗೆ 1 ಲಕ್ಷ ಕೋಟಿ ನಷ್ಟ. ಅಚ್ಚರಿ ಅನಿಸಿದ್ರೂ ಇದು ನಂಬಲೇಬೇಕಾದ ಸತ್ಯ. ಹೌದು..! ವಿಶ್ವದ ವಿಶ್ವದ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ ಮೊದಲಸ್ಥಾನದಲ್ಲಿದ್ದ ಎಲೋನ್ ಮಸ್ಕ್ ಒಂದೇ ದಿನದಲ್ಲಿ ಒಂದು ಲಕ್ಷ ಕೋಟಿ ಕಳೆದುಕೊಂಡು ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಸೋಮವಾರ ಟೆಸ್ಲಾ ಷೇರುಗಳು 8.6 ಪ್ರತಿಶತಕ್ಕೆ ಕುಸಿದ್ದು ಅವರ ನಿವ್ವಳ ಮೌಲ್ಯವು ಒಂದೇ ದಿನದಲ್ಲಿ 15.2 ಬಿಲಿಯನ್ ಡಾಲರ್ ಇಳಿಕೆ ಕಂಡಿದೆ. ಇದು ನಮ್ಮ ರೂಪಾಯಿಗಳಲ್ಲಿ ಸುಮಾರು 1 ಲಕ್ಷ ಕೋಟಿ..!!
ಈ ಕುಸಿತದಿಂದ ಎಲೋನ್ ಮಸ್ಕ್ ಬಿಲಿಯನೇರ್ ಸೂಚ್ಯಂಕದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದರೇ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಬ್ಲೂಮ್ ಬರ್ಗ್ ಅಗ್ರಸ್ಥಾನ ಪಡೆದಿದ್ದಾರೆ.
ಈ ನಷ್ಟಕ್ಕೆ ಕಾರಣ ಆ ಒಂದು ಟ್ವೀಟ್..!
ಟೆಸ್ಲಾ ಕಂಪನಿಯ ಷೇರುಗಳ ಈ ಕುಸಿತಕ್ಕೆ ಎಲೋನ್ ಮಸ್ಕ್ ಮಾಡಿದ ಒಂದೇ ಒಂದು ಟ್ವೀಟ್ ಕಾರಣವಾಗಿದೆ.
ಇತ್ತೀಚೆಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಜನವರಿ 2021 ರಲ್ಲಿ 1.5 ಬಿಲಿಯನ್ ಡಾಲರ್ ಮೌಲ್ಯದ ಬಿಟ್‍ಕಾಯಿನ್‍ಗಳನ್ನು ಖರೀದಿಸಿತ್ತು. ಈ ಘೋಷಣೆಯ ಬಳಿಕ ಬಿಟ್‍ಕಾಯಿನ್ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಈ ಬಗ್ಗೆ ಬಿಟ್‍ಕಾಯಿನ್ ಮತ್ತು ಸಣ್ಣ ಪ್ರತಿಸ್ಪರ್ಧಿ ಈಥರ್‍ನ ಬೆಲೆಗಳು ಹೆಚ್ಚು ಎಂದು ತೋರುತ್ತದೆ ಎಂದು ಮಸ್ಕ್ ಟ್ವೀಟ್ ಮಾಡಿದ್ದು, ಬಳಿಕ ಟೆಸ್ಲಾ ಕಂಪನಿಯ ಷೇರುಗಳು ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
