ಮೊಡವೆಗಳು, ಕಲೆಗಳನ್ನು ತಡೆಯಲು ಈ ಆಹಾರಗಳು ಬಹಳ ಉಪಯೋಗಕಾರಿ…!
ಬಹುತೇಕ ಮಂದಿಗೆ ಮುಖದ ಮೇಲೆ ಮೊಡವೆಗಳು ಇರುತ್ತವೆ… ಕೆಲವೊಮ್ಮೆ ಅಂತಹ ಮೊಡವೆಗಳು ಬಂದು ಹೋದ ನಂತರ ಮುಖದ ಮೇಲೆ ಹಾಗೆಯೇ ಕಲೆಗಳು ಉಳಿದುಬಿಡುತ್ತೆ.. ಇಂತಹ ಸಮಸ್ಯೆಯನ್ನ ಅತಿ ಹೆಚ್ಚಾಗಿ ಟೀನೇಜರ್ಸ್ ಹಾಗೂ ಯೂತ್ಸ್ ಅನುಭವಿಸುತ್ತಾರೆ.. ಇದಕ್ಕೆ ಮುಖ್ಯ ಕಾರಣ ಆಹಾರ.. ನಾವು ಯಾವ ರೀತಿಯಾದ ಆಹಾರ ಸೇವನೆ ಮಾಡ್ತೇವೆ ಅನ್ನೋದು ಕೂಡ ಮುಖ್ಯವಾಗಿರುತ್ತೆ..
ಆಹಾರ ಪದ್ಧತಿಯು ಚರ್ಮದ ಮೇಲೆ ಪ್ರಭಾವ ಬೀರುತ್ತೆ.. ಆರೋಗ್ಯಕರ ಆಹಾರ ಸೇವನೆಯಿಂದಾಗಿ ಮುಖದ ಕಾಂತಿ ಹೆಚ್ಚಾಗುತ್ತೆ.. ಮೊಡವೆಗಳು ಇರುವುದಿಲ್ಲ. ಆದ್ರೆ ಹೆಚ್ಚಾಗಿ ಹೊರಗಡೆ ಆಹಾರ ಸೇವನೆ , ಜಂಕ್ ಮತ್ತು ಎಣ್ಣೆ ಪದಾರ್ಥಗಳ , ಹೊರಗಿನ ಆಹಾರ ಸೇವನೆಯಿಂದಾಗಿಯೂ ಮೊಡವೆಗಳು ಬರುತ್ತವೆ.. ಆದ್ರೆ ಮೊಡವೆಗಳನ್ನ ಬಾರದಂತೆ ತಡೆಯಲು, ಮೊಡವೆಳನ್ನ ಹೋಗಲಾಡಿಸಲು ಕೆಲವೊಂದು ಆಹಾರರ ಪದಾರ್ಥಗಳು ತುಂಬಾನೆ ಸಹಕಾರಿಯಾಗಿವೆ..
ಅಂತಹ 10 ಆಹಾರ ಪದಾರ್ಥಗಳ ಬಗ್ಗೆ ತಿಳಿಯೋಣ
1. ನೀರು
ನೀರು ಮನುಷ್ಯನ ದೇಹಕ್ಕೆ ಬಹಳ ಮುಖ್ಯ… ನೀರು ಎಷ್ಟು ಹೆಚ್ಚಾಗಿ ಸೇವಿಸದರೂ ಯಾವುದೇ ತೊಂದರೆಯಿಲ್ಲ. ಹೆಚ್ಚು ಹೆಚ್ಚು ನೀರು ಕುಡಿದಷ್ಟು ಮನುಷ್ಯನ ಆರೋಗ್ಯ ಅಷ್ಟೇ ಚನ್ನಾಗಿರುತ್ತದೆ. ಅದೇ ರೀತಿ ನೀರು ಹೆಚ್ಚಾಗಿ ಸೇವಿಸುವುದರಿಂದ ದೇಹಕ್ಕೆ ಪೋಷಣೆ ಸಿಗುತ್ತದೆ. ಇದು ಮೊಡವೆಗಳ ವಿರುದ್ಧ ಹೋರಾಡುವ ಶಕ್ತಿಯನ್ನೂ ಹೊಂದಿರುತ್ತದೆ.
2. ನಿಂಬೆ ಹಣ್ಣಿನ ರಸ
ನಿಂಬೆ ರಸವು ಆಮ್ಲ ತ್ಯಾಜ್ಯವನ್ನು ತೆಗೆದುಹಾಕಲು ಮತ್ತು ಸಿಟ್ರಿಕ್ ಆಮ್ಲದೊಂದಿಗೆ ಯಕೃತ್ತನ್ನು ಶುದ್ಧೀಕರಿಸಲು ಮತ್ತು ರಕ್ತದ ವಿಷವನ್ನು ನಿವಾರಿಸಲು ಕಿಣ್ವಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದು ರಂಧ್ರಗಳನ್ನು ಹೊರಹಾಕುತ್ತದೆ ಮತ್ತು ನಿಮ್ಮ ಚರ್ಮವನ್ನು ತಾಜಾ ಮತ್ತು ಪ್ರಕಾಶಮಾನವಾಗಿರಿಸುತ್ತದೆ.
3. ಕಲ್ಲಂಗಡಿ ಹಣ್ಣು
ಚರ್ಮದ ಮೇಲಿನ ಕಲೆಗಳನ್ನು ತೆಗೆದುಹಾಕಲು ಕಲ್ಲಂಗಡಿ ತುಂಬಾ ಉಪಯುಕ್ತವಾಗಿದೆ. ಇದು ವಿಟಮಿನ್ ಎ, ಬಿ ಮತ್ತು ಸಿ ಯಿಂದ ಸಮೃದ್ಧವಾಗಿದೆ ಮತ್ತು ಚರ್ಮವನ್ನು ತಾಜಾ, ವಿಕಿರಣ ಮತ್ತು ಹೈಡ್ರೀಕರಿಸುತ್ತದೆ. ಇದು ಮೊಡವೆಗಳು ಹುಟ್ಟುವುದನ್ನ ತಡೆಯುತ್ತದೆ. ಅಲ್ಲದೇ ಮೊಡವೆಗಳ ಕಲೆಗಳನ್ನ ತೆಗೆದುಹಾಕುತ್ತದೆ.
4. ಲೋ ಫ್ಯಾಟ್ ಹಾಲು , ಮೊಸರು , ಬೆಣ್ಣೆ ಇತ್ಯಾದಿ
ಲೋ ಫ್ಯಾಟ್ ಡೈರಿ ಉತ್ಪನ್ನಗಳ ಸೇವನೆಯಿಂದಲೂ ಚರ್ಮ ಕಾಂತಿ ಪಡೆಯುವ ಜೊತೆಗೆ ಸ್ಮೂತ್ನಿಂಗ್ ಹಾಗೂ ಮೊಡವೆಗಳ ಉತ್ಪತ್ತಿ ನಿಯಂತ್ರಣಗೊಳ್ಳುತ್ತದೆ. ಹೀಗಾಗಿ ಲೋ ಫ್ಯಾಟ್ ಹಾಲು , ಮೊಸರು , ಬೆಣ್ಣೆ , ಮೊಟ್ಟೆ ಇತ್ಯಾದಿಗಳ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು.
5. ಆಲಿವ್ ಆಯಿಲ್
ಮೊಡವೆಗಳಿಂದ ಉಂಟಾಗಿರುವ ರಂಧ್ರಗಳನ್ನ ಸರಿಮಾಡುವಲ್ಲಿ ಆಲಿವ್ ಆಯಿಲ್ ಲೋಷನ್ ತುಂಬಾನೆ ಸಹಾಯಕಾರಿಯಾಗಿದೆ.
6. ರಾಸ್ ಬೆರ್ರೀಸ್
ರಾಸ್ ಬೆರ್ರೀಸ್ ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ನಾರಿನಂಶದಿಂದ ತುಂಬಿರುತ್ತವೆ. ಇವು ಚರ್ಮದ ರಕ್ಷಣಾತ್ಮಕ ಫೈಟೊಕೆಮಿಕಲ್ಗಳಲ್ಲಿ ಸಮೃದ್ಧವಾಗಿವೆ. ಹೀಗಾಗಿ ಇವು ಆರೋಗ್ಯಕರ ತ್ವಚೆಗಾಗಿ ಉತ್ತಮವಾಗಿವೆ.
7. ಮೊಸರು
ಮೊಸರು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಆದ್ದರಿಂದ ಚರ್ಮವನ್ನು ಶುದ್ಧೀಕರಿಸಲು ಮತ್ತು ಮೊಡವೆಗಳ ಕೆಲಗಳು ರಂಧ್ರಗಳನ್ನ ಹೋಗಲಾಡಿಸಲು ಸಹಾಯಕವಾಗಿವೆ. 8. ಅಕ್ರೋಟ್ ನಿಯಮಿತವಾಗಿ ಅಕ್ರೋಟ್ ಸೇವನೆಯಿಂದ ಬಹಳ ಆರೋಗ್ಯ ಪ್ರಯೋಜನಗಳಿವೆ.. ಮೊದಲಿಗೆ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕಾರಿಯಾಗಿದೆ.. ಮತ್ತೊಂದು ಚರ್ಮದ ಮೃದುತ್ವವನ್ನ ಕಾಪಾಡುತ್ತದೆ. ವಾಲ್ನಟ್ಸ್ ಅಥವ ಅಕ್ರೋಟ್ ತೈಲಗಳು ಲಿನೋಲಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಚರ್ಮದ ರಚನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ನೀರಿನಂಶವಿಲ್ಲದ ಮತ್ತು ಚೆನ್ನಾಗಿ ಹೈಡ್ರೀಕರಿಸುತ್ತದೆ.
9. ಸೇಬು
ಸೇಬುಗಳು ಸಾಕಷ್ಟು ಪೆಕ್ಟಿನ್ ಅನ್ನು ಹೊಂದಿರುತ್ತವೆ ಮತ್ತು ಇವುಗಳು ಮೊಡವೆಗಳನ್ನ ನಾಶ ಮಾಡುವ ಶಕ್ತಿ ಹೊಂದಿವೆ. ಆದ್ರೆ ಆಪಲ್ ನ ಸಿಪ್ಪೆ ಸಮೇತ ತಿನ್ನುವುದರಿಂದ ಮಾತ್ರ ಅದರ ಸರಿಯಾದ ಪ್ರೋಟಿನ್ಸ್ ದೇಹ ಸೇರುತ್ತದೆ.
10. ಅರಿಶಿಣ
ಅರಿಶಿಣವೂ ಸಹ ರೋಗ ನಿರೋಧಕ ಶಕ್ತಿ ಜೊತೆಗೆ ತ್ವಚೆಯ ಕಾಂತಿ ಹೆಚ್ಚಿಸುವ ಶಕ್ತಿಯನ್ನ ಹೊಂದಿದೆ.. ಸೇವನೆಯಿಂದಷ್ಟೇ ಅಲ್ಲದೇ ಅರಿಶಿಣದ ಜೊತೆಗೆ ಸರಿಯಾದ ಹೋಲಿಕೆಯ ಪದಾರ್ಥಗಳ ಮಿಶ್ರಣ ಮಾಡಿ ಮುಖಕ್ಕೆ ಪ್ಯಾಕ್ ರೀತಿ ಬಳಳಿಸಿದ್ರೆ ಇವುಗಳು ಮೊಡವೆಗಳನ್ನ ಮುಖದಿಂದ ತೆಗೆದುಹಾಕುವ ಜೊತೆಗೆ ಕಲೆಗಳನ್ನ ಹೋಗಲಾಡಿಸುವ ಶಕ್ತಿ ಹೊಂದಿದೆ.