ಇಸ್ಲಾಮಾಬಾದ್: ಉಗ್ರರ ದಾಳಿಗೆ ಪಾಕ್ ನಲ್ಲಿ 10 ಜನ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಪಾಕ್ ನ ದೇರಾ ಇಸ್ಮಾಯಿಲ್ ಖಾನ್ ನಗರದಲ್ಲಿನ ಚೋಡ್ವಾನ್ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಅಧಿಕಾರಿಗಳು (Pakistan Cops) ಸಾವನ್ನಪ್ಪಿದ್ದಾರೆ. 6 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳಿಂದ ತಿಳಿದು ಬಂದಿದೆ.
ಸೋಮವಾರ ಬೆಳಗ್ಗಿನ ಜಾವ 3ರ ವೇಳೆಗೆ ಉಗ್ರರು ಪೊಲೀಸ್ ಠಾಣೆ ಮೇಲೆ ಸ್ನೈಪರ್ ಗಳಿಂದ ಗುಂಡಿನ ದಾಳಿ ನಡೆಸಿ, ಠಾಣೆ ಒಳಗೆ ನುಗ್ದಿದ್ದಾರೆ. ಆ ನಂತರ ಹ್ಯಾಂಡ್ ಗ್ರೆನೇಡ್ಗಳನ್ನು (Hand Grenades) ಬಳಸಿ ದಾಳಿ ನಡೆಸಿದ್ದಾರೆ. ಹೀಗಾಗಿ 10 ಜನರು ಸಾವನ್ನಪ್ಪಿ, 6 ಜನ ಗಾಯಗೊಂಡಿದ್ದಾರೆ. ಈ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುವುದು ಗೊತ್ತಿಲ್ಲ.
ಫೆಬ್ರವರಿ 8 ರಂದು ಸಾರ್ವತ್ರಿಕ ಚುನಾವಣೆ (National Elections) ನಡೆಯುವುದಕ್ಕೂ ಮುನ್ನ ಈ ದಾಳಿ ನಡೆದಿರುವುದಕ್ಕೆ ಆತಂಕ ವ್ಯಕ್ತವಾಗುತ್ತಿದೆ. ಪಾಕ್ ನಲ್ಲಿ ಖೈಬರ್ ಪಖ್ತುಂಖ್ವಾ ಪ್ರದೇಶ ಮತ್ತು ಬಲೂಚಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗಿವೆ. ಹೀಗಾಗಿ ಅಲ್ಲಿ ಆತಂಕ ಮನೆ ಮಾಡುತ್ತಿದೆ.








