ಪ್ರಪಂಚದ ಈ 10 ಬಡರಾಷ್ಟ್ರಗಳ ಬಗ್ಗೆ ಗೊತ್ತಾದ್ರೆ ಭಾರತದಲ್ಲಿ ಹುಟ್ಟಿರುವುದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳ್ತೀರಾ..!

1 min read

ಪ್ರಪಂಚದ ಈ 10 ಬಡರಾಷ್ಟ್ರಗಳ ಬಗ್ಗೆ ಗೊತ್ತಾದ್ರೆ ಭಾರತದಲ್ಲಿ ಹುಟ್ಟಿರುವುದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳ್ತೀರಾ..!

ಡಾಲರ್ ವಿರುದ್ಧ ರೂಪಾಯಿ ಸೆಣೆಸಾಟದಿಂದ ನಮ್ಮ ದೇಶದಲ್ಲಿ ನಾವು ಸದಾ ಚಿಂತೆಯಲ್ಲಿರುತ್ತೇವೆ. ನಮ್ಮ ರೂಪಾಯಿ ಮೌಲ್ಯ ಯಾಕಿಷ್ಟು ಕಡಿಮೆ.. ನಮ್ಮ ಆರ್ಥಿಕ ಪರಿಸ್ಥಿತಿ ಬಗ್ಗೆ ಯೋಚನೆ ಮಾಡುತ್ತೇವೆ..

ಆದ್ರೆ ಇಡೀ ವಿಶ್ವದಲ್ಲಿ ಇರುವ ಬಡ ರಾಷ್ಟ್ರ ಗಳನ್ನ ಲೆಕ್ಕಕ್ಕೆ ತೆಗೆದುಕೊಂಡ್ರೆ ನಾವು ಭಾರತದಲ್ಲಿ ಹುಟ್ಟಿರುವುದಕ್ಕೆ ತುಂಬಾನೆ ಖುಷಿ ಪಡಬೇಕು.. ಭಾರತದಲ್ಲಿ ಹುಟ್ಟಿರುವುದೇ ಸೌಭಾಗ್ಯ ಎನಿಸುತ್ತೆ.. ಯಾಕಂದ್ರೆ ಕೇವಲ ಅಭಿವೃದ್ಧಿಯಾಗಿರುವ ದೇಶಗಳಿಗೆ ಹೋಲಿಸಿದ್ರೆ ರೂಪಾಯಿ ಮೌಲ್ಯ ಕಡಿಮೆಯಿದೆ. ಆದ್ರೆ ಭಾರತಕ್ಕಿಂತ 99 ಪಟ್ಟು ಕಡಿಮೆ ಕರೆನ್ಸಿ ಮೌಲ್ಯವಿರುವ , ಆರ್ಥಿಕವಾಗಿ ಬಹಳ ಹಿಂದುಳಿದ ರಾಷ್ಟ್ರಗಳಿವೆ.

ಹೌದು ಇಡೀ ವಿಶ್ವದಲ್ಲಿ ಒoದು ಹೊತ್ತಿನ ಊಟಕ್ಕೂ ಜನರು ಒದ್ದಾಡುತ್ತಿರುವ ಅದೆಷ್ಟೋ ದೇಶಗಳಿವೆ… ಅವುಗಳನ್ನ ನೋಡೋಣ..
ಮೊದಲಿಗೆ ಯಾವುದೇ ದೇಶದ ಆರ್ಥಿಕ ಪರಿಸ್ಥಿತಿಯನ್ನ ಆ ದೇಶದ GDP ಅನುಸಾರ ಅಳೆಯಲಾಗುತ್ತದೆ.

1. ಹೈತಿ -ಇಡೀ ವಿಶ್ವದ ಅತಿ ಬಡ ರಾಷ್ಟ್ರ ಎಂದು ಪರಿಗಣಿಸಲಾಗಿದೆ. 77 % ಗಿಂತಲೂ ಅಧಿಕ ಮಂದಿ ಬಡತನ ರೇಖೆಗಿಂತಲೂ ಕೆಳಗಿನ ಜೀವನ ಸಾಗಿಸುತ್ತಿದ್ಧಾರೆ.

2. ಕಾಂಗೋ – ಮಧ್ಯ ಆಫ್ರಿಕಾದಲ್ಲಿರುವ ಈ ದೇಶದಲ್ಲಿ 71 % ಗಿಂತಲೂ ಅಧಿಕ ಜನಸಂಖ್ಯೆಯ ಜೀವನ ಬಡತನ ರೇಖೆಗಿಂತಲೂ ಕೆಳಗಿದೆ. ಇಲ್ಲಿನ ಆರೋಗ್ಯ ಸ್ಥಿತಿಯೂ ತುಂಬಾ ಕೆಟ್ಟದಾಗಿದೆ.

3. ಬುರುಂಡಿ – ಪೂರ್ವ ಆಫ್ರಿಕಾದಲ್ಲಿನ ಈ ದೇಶದಲ್ಲಿ 80 % ಗಿಂತಲೂ ಅಧಿಕ ಜನಸಂಖ್ಯೆಯ ಜೀವನ ಬಡತನ ರೇಖೆಗಿಂತಲೂ ಕೆಳಗಿದೆ. 64 % ಗಿಂತಲೂ ಹೆಚ್ಚಿನ ಜನರು ದಿನಕ್ಕೆ 1 ಡಾಲರ್ ಗಿಂತಲೂ ಕಡಿಮೆ ಹಣ ಸಂಪಾದಿಸುತ್ತಾರೆ. ಇಲ್ಲಿನ ಜಿಡಿಪಿ ರೇಟ್ – 2015 ಡಾಲರ್ ( 2020ಯ ಅನುಸಾರ )

4. ಜಿಂಬಾಂಬ್ವೆ : 72 % ಗಿಂತಲೂ ಹೆಚ್ಚಿನ ಜನಸಂಖ್ಯೆ ಬಡತನ ರೇಖೆಗಿಂತಲೂ ಕೆಳಗಿನ ಜೀವನ ನಡೆಸುತ್ತಿದೆ.

5. ನೈಗರ್
ಪಶ್ಚಿಮ ಆಫ್ರಿಕಾದಲ್ಲಿನ ಈ ದೇಶದಲ್ಲಿ ಚಿನ್ನ ಹಾಗೂ ಯೂರೇನಿಯಂ ಬಹುಮಾತ್ರದಲ್ಲಿ ಸಿಗುತ್ತದೆ. ಆದ್ರೆ ಈ ದೇಶದಲ್ಲಿ ಟೆಕ್ನಾಲಜಿ ಕೊರತೆಯಿಂದಾಗಿ ಇದರ ಸರಿಯಾದ ಉಪಯೋಗವಾಗುತ್ತಿಲ್ಲ.

6. ಮಲಾವಿ
ಆಫ್ರಿಕಾದ ದಕ್ಷಿಣ ಪೂರ್ವ ಭಾಗದಲ್ಲಿರುವ ಈ ದೇಶದಲ್ಲಿ 85 % ಅಧಿಕ ಮಂದಿ ಹಳ್ಳಿಗಳಲ್ಲಿ ವಾಸವಾಗಿದ್ದಾರೆ.

7. ಸೆರಲಿಯೋನ್
ಪಶ್ಚಿಮ ಆಫ್ರಿಕಾದಲ್ಲಿ ಇರುವ ಈ ದೇಶದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಚೈಲ್ಡ್ ಡೆತ್ ರೇಟ್ ಇದೆ. ಇಲ್ಲಿ 1000 ಮಕ್ಕಳ ಜನನ ಪ್ರಮಾಣ ಇದ್ರೆ , ಮಕ್ಕಳ ಮರಣ ಪ್ರಮಾಣ 1400 ಇದೆ. ಈ ದೇಶದ 65 % ಗಿಂತ ಅತಿ ಹೆಚ್ಚು ಜನಸಂಖ್ಯೆ ಬಡತನ ರೇಖೆಗಿಂತಲೂ ಕೆಳಗಿನ ಜೀವನ ನಡೆಸುತ್ತಿದೆ.

8. ಈಕ್ವಟೋರಿಯಲ್ ಗಿನಿ
ಆಫ್ರಿಕಾದ ಪಶ್ಚಿಮ ಬಾಗದಲ್ಲಿ ಬರುವ ಈ ದೇಶದಲ್ಲಿ 76 % ಗಿಂತಲೂ ಅಧಿಕ ಜನಸಂಖ್ಯೆ ಬಡರೇಖೆಗಿಂತ ಕೆಳಗಿನ ಜೀವನ ನಡೆಸುತ್ತಿದೆ. ಈ ದೇಶ 8 ನೇ ಅತಿ ದೊಡ್ಡ ಬಡ ದೇಶವಾಗಿದೆ.

9. ಇರೀಟಿರಿಯಾ
ಆಫ್ರಿಕಾದ ಪೂರ್ವ ಭಾಗದಲ್ಲಿರುವ ಈ ದೇಶದಲ್ಲಿ 69 % ಗಿಂತಲೂ ಹೆಚ್ಚು ಜನರು ಬಡತನ ರೇಖೆಗಿಂತಲೂ ಕೆಳಗಿನ ಜೀವನ ನಡೆಸುತ್ತಿದೆ.

10. ಮೆಡಗಾಸ್ಕರ್
ಆಫ್ರೀಕಾದ ಪೂರ್ವ ಭಾಗದಲ್ಲಿರುವ ಈ ದೇಶ ದ್ವೀಪ ದೇಶ.. ವಿಶ್ವದ 4ನೇ ಅತಿ ದೊಡ್ಡ ದ್ವೀಪವೂ ಕೂಡ ಹೌದು.. ಇಡೀ ವಿಶ್ವದ 10 ನೇ ಅತಿ ದೊಡ್ಡ ಬಡ ರಾಷ್ಟ್ರವೆಂದು ಈ ದೇಶವನ್ನ ಪರಿಗಣಿಸಲಾಗಿದೆ. ಈ ದೇಶದಲ್ಲಿ ಬಹುತೇಕ ಜನರು ಒಂದು ದಿನಕ್ಕೆ 1 ಡಾಲರ್ ಗಿಂತಲೂ ಕಡಿಮೆ ಹಣವನ್ನ ಸಂಪಾದನೆ ಮಾಡ್ತಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd