RCB | ನೂರು ಗೆಲುವು ಹಲವು ಅವಿಸ್ಮರಣೀಯ ಕ್ಷಣಗಳು

1 min read
100-wins-royal-challengers-bangalore-ipl saaksha tv

RCB | ನೂರು ಗೆಲುವು ಹಲವು ಅವಿಸ್ಮರಣೀಯ ಕ್ಷಣಗಳು

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಪರೂಪದ ಸಾಧನೆ ಮಾಡಿದೆ.

ಐಪಿಎಲ್ 2022 ಸೀಸನ್‌ನ ಅಂಗವಾಗಿ  ಏಪ್ರಿಲ್ 5 ರಂದು ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ  ಆರ್ ಸಿಬಿ ತಂಡ 4 ವಿಕೆಟ್‌ಗಳಿಂದ ಗೆದ್ದಿದೆ.

ಇದರೊಂದಿಗೆ ಐಪಿಎಲ್ ನಲ್ಲಿ ನೂರು ಗೆಲುವುಗಳನ್ನ ದಾಖಲಿಸಿದ ನಾಲ್ಕನೇ ತಂಡ ಎನಿಸಿಕೊಂಡಿದೆ.

2008 ರಲ್ಲಿ RR ವಿರುದ್ಧ ಲೀಗ್  ಪಂದ್ಯದಿಂದ ಆರಂಭವಾಗಿ RCB ಒಟ್ಟು 214 ಪಂದ್ಯಗಳನ್ನು ಆಡಿದೆ.  

ಇದರಲ್ಲಿ 100 ಪಂದ್ಯಗಳನ್ನು ಗೆದ್ದಿದೆ ಮತ್ತು 107 ಪಂದ್ಯಗಳಲ್ಲಿ ಸೋತಿದೆ. ಉಳಿದ 7 ಪಂದ್ಯಗಳ ಪೈಕಿ 4 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದೆ.

100-wins-royal-challengers-bangalore-ipl saaksha tv

ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ತಂಡ ಅತ್ಯಂತ ಯಶಸ್ವಿ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡ  219 ಪಂದ್ಯಗಳಲ್ಲಿ 125 ಗೆಲುವುಗಳನ್ನು ದಾಖಲಿಸಿದೆ.

ನಂತರ ಚೆನ್ನೈ ಸೂಪರ್ ಕಿಂಗ್ಸ್ 198 ಪಂದ್ಯಗಳಲ್ಲಿ 117 ಪಂದ್ಯಗಳನ್ನ ಗೆದ್ದಿದೆ. ಮೂರನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್  ಇದೆ. ಕೆಕೆಆರ್ ಟೀಂ 212 ಪಂದ್ಯಗಳಲ್ಲಿ 109 ಗೆಲುವುಗಳನ್ನ ಕಂಡಿದೆ.

ಇನ್ನು ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ತಂಡ ನೂರನೇ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಆರ್ ಸಿಬಿ ಫ್ರಾಂಚೈಸಿ ಡ್ರೆಸ್ಸಿಂಗ್ ರೂಮ್ ನಲ್ಲಿ ಆಟಗಾರರಿಗೆ ವಿಶೇಷ ಟ್ರೀಟ್ ಕೊಟ್ಟಿದೆ.

ಆರ್ ಸಿಬಿಯ ಆಟಗಾರರ ಕೂಡ ನೂರನೇ ಗೆಲುವನ್ನ ಸಂಭ್ರಮಿಸಿದ್ದಾರೆ. ನಾನು ಆರ್ಸ್ಬಿಯನ್ ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ” ಎಂದು  ಆಟಗಾರರು ಕುಣಿದಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd